ETV Bharat / bharat

ಬಂಗಾಳ ವಿಧಾನ ಕದನದಲ್ಲಿ ಕಡಿಮೆ ಸ್ಪರ್ಧಿಗಳ ಸರಾಸರಿ ಶಿಕ್ಷಣ; ಕಾಣುತ್ತಿದೆ ಅಭ್ಯರ್ಥಿಗಳ ಕೋಟಿ ಕಾಂಚಾಣ - A total of 171 candidates will be the poll fray during the second phase of West Bengal assembly elections.

ಎರಡನೇ ಹಂತದ ಬಂಗಾಳ ಚುನಾವಣೆಯಲ್ಲಿ ಅಭ್ಯರ್ಥಿಗಳ ಸರಾಸರಿ ಶಿಕ್ಷಣ ಮಟ್ಟ ಕಡಿಮೆಯಾಗಿದೆ. ಶೇಕಡಾ 37 ರಷ್ಟು ಅಭ್ಯರ್ಥಿಗಳು 5 ರಿಂದ 10 ನೇ ತರಗತಿಗಳ ನಡುವೆ ಶಿಕ್ಷಣ ಮಟ್ಟವನ್ನು ಹೊಂದಿದ್ದಾರೆ. 171 ಅಭ್ಯರ್ಥಿಗಳಲ್ಲಿ 59 ಪ್ರತಿಶತ ಪದವೀಧರರು ಅಥವಾ ಸ್ನಾತಕೋತ್ತರ ಪದವೀಧರರು. ನಾಲ್ಕು ಅಭ್ಯರ್ಥಿಗಳು ಸಾಕ್ಷರರು ಎಂದು ಘೋಷಿಸಿಕೊಂಡಿದ್ದಾರೆ. ಹಾಗೆಯೇ ಒಬ್ಬ ಅನಕ್ಷರಸ್ಥರೆಂದು ಘೋಷಿಸಿಕೊಂಡಿದ್ದಾರೆ.

15 per cent of 171 candidates in the second phase Bengal polls are millionaires
ಎರಡನೇ ಹಂತದ ಬಂಗಾಳ ಚುನಾವಣೆಯಲ್ಲಿ 171 ಅಭ್ಯರ್ಥಿಗಳು
author img

By

Published : Mar 25, 2021, 9:25 PM IST

ಕೋಲ್ಕತಾ: ಎರಡನೇ ಹಂತದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 171 ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿಯಲಿದ್ದಾರೆ. ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರೈಟ್ಸ್ (ಎಡಿಆರ್) ಮತ್ತು ಎಲೆಕ್ಷನ್ ವಾಚ್‌ನ ಇತ್ತೀಚಿನ ವರದಿಯ ಪ್ರಕಾರ ಈ 171 ಅಭ್ಯರ್ಥಿಗಳಲ್ಲಿ ಶೇ 15 ರಷ್ಟು ಅಭ್ಯರ್ಥಿಗಳು ಮಿಲಿಯನೇರ್‌ಗಳಾಗಿದ್ದರೆ, ಐದು ಪ್ರತಿಶತದಷ್ಟು ಅಭ್ಯರ್ಥಿಗಳು 5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ.

ಈ ಬಾರಿ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಡೆಬ್ರಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಗೆ ಸ್ಪರ್ಧಿಸುತ್ತಿರುವ ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಷ್ ಅವರು ಆಸ್ತಿ ಘೋಷಣೆ ಮಾಡಿದ್ದು, ಇವರ ಆಸ್ತಿ ಮೌಲ್ಯ ಗರಿಷ್ಠ 19 ಕೋಟಿ ರೂ., ದಕ್ಷಿಣ 24 ಜಿಲ್ಲೆಯ ಕಾಕ್‌ದ್ವೀಪ್‌ನ ಬಿಜೆಪಿ ಅಭ್ಯರ್ಥಿ ದೀಪಂಕರ್ ನಿವ್ವಳ ಆಸ್ತಿ ಮೌಲ್ಯ ಸುಮಾರು 14 ಕೋಟಿ ರೂ.,ಹಾಗೆ ಮೂರನೇ ಸ್ಥಾನದಲ್ಲಿ ಬಂಕುರಾ ಜಿಲ್ಲೆಯ ತಾಲ್ಡಿಯಂಗ್ರಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಅರುಪ್ ಚಕ್ರವರ್ತಿ ಸುಮಾರು 4 ಕೋಟಿ ರೂ.ಗಳ ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ.

ಚುನಾವಣಾ ವೀಕ್ಷಕ ಪ್ರತಿನಿಧಿ ಉಜ್ಜೈನಿ ಹಲೀಮ್ ಈ ಸಂಬಂಧ ಮಾತನಾಡಿ, ಅಭ್ಯರ್ಥಿಗಳ ಹಠಾತ್ ಗಗನಕ್ಕೇರುವ ಆಸ್ತಿ ಹೆಚ್ಚಳದ ಬಗ್ಗೆ ನಮಗೆ ನಮಗೆ ಹಲವಾರು ಪ್ರಶ್ನೆಗಳಿದ್ದವು. ನಾಮನಿರ್ದೇಶನ ಸಮಯದಲ್ಲಿ ಅವರು ಸಲ್ಲಿಸಿದ ಅಫಿಡವಿಟ್​ಗಳನ್ನು ಪರಿಶೀಲಿಸಿದ ನಂತರ ಅಭ್ಯರ್ಥಿಗಳ ಬಗ್ಗೆ ನಮಗೆ ಮಾಹಿತಿ ಲಭಿಸಿದೆ ಎಂದು ತಿಳಿಸಿದ್ದಾರೆ.

ಎರಡನೇ ಹಂತದ ಬಂಗಾಳ ಚುನಾವಣೆಯಲ್ಲಿ ಅಭ್ಯರ್ಥಿಗಳ ಸರಾಸರಿ ಶಿಕ್ಷಣ ಮಟ್ಟ ಕಡಿಮೆಯಾಗಿದೆ. ಶೇಕಡಾ 37 ರಷ್ಟು ಅಭ್ಯರ್ಥಿಗಳು 5 ರಿಂದ 10 ನೇ ತರಗತಿಗಳ ನಡುವೆ ಶಿಕ್ಷಣ ಮಟ್ಟವನ್ನು ಹೊಂದಿದ್ದಾರೆ. 171 ಅಭ್ಯರ್ಥಿಗಳಲ್ಲಿ 59 ಪ್ರತಿಶತ ಪದವೀಧರರು ಅಥವಾ ಸ್ನಾತಕೋತ್ತರ ಪದವೀಧರರು. ನಾಲ್ಕು ಅಭ್ಯರ್ಥಿಗಳು ಸಾಕ್ಷರರು ಎಂದು ಘೋಷಿಸಿಕೊಂಡಿದ್ದಾರೆ ಹಾಗೆ ಒಬ್ಬ ಅನಕ್ಷರಸ್ಥರೆಂದು ಘೋಷಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ವಯಸ್ಸಿನ ವಿಷಯಕ್ಕೆ ಬಂದರೆ, 171 ಅಭ್ಯರ್ಥಿಗಳಲ್ಲಿ 49 ಮಂದಿ 25 ಮತ್ತು 40 ವರ್ಷ ವಯಸ್ಸಿನವರಾಗಿದ್ದಾರೆ, 92 ಅಭ್ಯರ್ಥಿಗಳು 41 ಮತ್ತು 60 ವರ್ಷ ವಯಸ್ಸಿನವರಾಗಿದ್ದಾರೆ ಹಾಗೆ 33 ಮಂದಿ 61 ಮತ್ತು 80 ವರ್ಷ ವಯಸ್ಸಿನವರಾಗಿದ್ದಾರೆ.

171 ಅಭ್ಯರ್ಥಿಗಳ ಪೈಕಿ 43 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ. ಅವರಲ್ಲಿ 36 ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.