ETV Bharat / bharat

ಚನ್ನಿ ನೇತೃತ್ವದ ಪಂಜಾಬ್‌ ನೂತನ ಸಂಪುಟ ಸೇರಿದ 15 ಸಚಿವರಿವರು..

ಸೆ.20ರಂದು ಪಂಜಾಬ್​ನ 16 ನೇ ಮುಖ್ಯಮಂತ್ರಿಯಾಗಿ ಚರಣಜಿತ್ ಸಿಂಗ್ ಚನ್ನಿ ಅಧಿಕಾರ ಸ್ವೀಕರಿಸಿದ್ದರು. ಅದೇ ದಿನ ಸುಖಜಿಂದರ್ ಸಿಂಗ್ ರಾಂಧವಾ ಮತ್ತು ಓಂ ಪ್ರಕಾಶ್​ ಸೋನಿ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಸಂಪುಟ ವಿಸ್ತರಣೆಯಾಗಿದ್ದು, 15 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಚರಣಜಿತ್ ಸಿಂಗ್ ಚನ್ನಿ
ಚರಣಜಿತ್ ಸಿಂಗ್ ಚನ್ನಿ
author img

By

Published : Sep 26, 2021, 7:08 PM IST

ಚಂಡೀಗಢ (ಪಂಜಾಬ್​): 15 ಮಂದಿ ಶಾಸಕರು ಚರಣಜಿತ್ ಸಿಂಗ್ ಚನ್ನಿ ನೇತೃತ್ವದ ಪಂಜಾಬ್‌ನ ನೂತನ ಸಂಪುಟಕ್ಕೆ ಸಚಿವರಾಗಿ ಸೇರ್ಪಡೆಯಾಗಿದ್ದು, ಪ್ರಮಾಣವಚನ ಸ್ವೀಕರಿಸಿದ್ದಾರೆ.

ಚಂಡೀಗಢದ ರಾಜಭವನದಲ್ಲಿ ಸಮಾರಂಭ ನಡೆದಿದ್ದು, ನೂತನ ಸಚಿವರಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಪ್ರಮಾಣವಚನ ಬೋಧಿಸಿದರು. ಪ್ರಮಾಣವಚನ ಸಮಾರಂಭ ಆರಂಭಕ್ಕೂ ಕೆಲ ಗಂಟೆಗಳ ಮುನ್ನ ಆರು ಮಂದಿ ಕಾಂಗ್ರೆಸ್ ಶಾಸಕರು ಮತ್ತು ಪಂಜಾಬ್​ ಕಾಂಗ್ರೆಸ್​ನ ಮಾಜಿ ಅಧ್ಯಕ್ಷರೊಬ್ಬರು ಸೇರಿಕೊಂಡು ಪಂಜಾಬ್ ರಾಜ್ಯಾಧ್ಯಕ್ಷರಿಗೆ ಪತ್ರವನ್ನು ಸಲ್ಲಿಸಿದ್ದು, ರಾಣಾ ಗುರ್ಜೀತ್ ಸಿಂಗ್ ಅವರನ್ನು ಕ್ಯಾಬಿನೆಟ್​ನಿಂದ ಕೈಬಿಡುವಂತೆ ಒತ್ತಾಯಿಸಿದರು.

ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್ ಸಿಂಗ್​ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ರಾಣಾ ಗುರ್ಜೀತ್ ಸಿಂಗ್​ ಅವರು ತಮ್ಮ ಮೇಲೆ ಗಣಿ ಹಗರಣದ ಆರೋಪ ಬಂದ ಮೇಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ರಾಣಾರನ್ನು ಚನ್ನಿ ಸರ್ಕಾರ ಮರಳಿ ಸಂಪುಟಕ್ಕೆ ಸೇರಿಸಿಕೊಂಡಿದೆ.

ಇಂದು ಪ್ರಮಾಣವಚನ ಸ್ವೀಕರಿಸಿದ 15 ಸಚಿವರಿವರು..

  1. ಬ್ರಹ್ಮ ಮೋಹಿಂದ್ರಾ
  2. ಮನ್ ಪ್ರೀತ್ ಸಿಂಗ್ ಬಾದಲ್
  3. ತ್ರಿಪತ್ ರಾಜಿಂದರ್ ಸಿಂಗ್ ಬಾಜ್ವಾ
  4. ಸುಖಬಿಂದರ್ ಸಿಂಗ್ ಸರ್ಕಾರಿಯಾ
  5. ರಾಣಾ ಗುರ್ಜೀತ್ ಸಿಂಗ್
  6. ಅರುಣಾ​ ಚೌದರಿ
  7. ರಜಿಯಾ ಸುಲ್ತಾನ
  8. ಭರತ್ ಭೂಷಣ್ ಅಶು
  9. ವಿಜಯ್ ಇಂದರ್ ಸಿಂಗ್ಲಾ
  10. ರಣದೀಪ್ ಸಿಂಗ್ ನಭಾ
  11. ರಾಜ್ ಕುಮಾರ್ ವೆರ್ಕಾ
  12. ಸಂಗತ್ ಸಿಂಗ್ ಗಿಲ್ಜಿಯಾನ್
  13. ಪರ್ಗತ್ ಸಿಂಗ್
  14. ಅಮರಿಂದರ್ ಸಿಂಗ್ ರಾಜಾ ವಾರಿಂಗ್
  15. ಗುಕ್ರೀರತ್ ಸಿಂಗ್ ಕೊಟ್ಲಿ

ಇದನ್ನೂ ಓದಿ: ಪಂಜಾಬ್​ 16ನೇ ಮುಖ್ಯಮಂತ್ರಿಯಾಗಿ ಎಸ್. ಚರಣಜಿತ್ ಸಿಂಗ್ ಚನ್ನಿ ಪದಗ್ರಹಣ

ಅಮರೀಂದರ್ ಸಿಂಗ್​ ರಾಜೀನಾಮೆ ಬಳಿಕ ಚರಣಜಿತ್ ಸಿಂಗ್ ಚನ್ನಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು. ಸೆ.20ರಂದು ಪಂಜಾಬ್​ನ 16 ನೇ ಮುಖ್ಯಮಂತ್ರಿಯಾಗಿ ಚನ್ನಿ ಅಧಿಕಾರ ಸ್ವೀಕರಿಸಿದ್ದರು. ಅದೇ ದಿನ ಸುಖಜಿಂದರ್ ಸಿಂಗ್ ರಾಂಧವಾ ಮತ್ತು ಓಂ ಪ್ರಕಾಶ್​ ಸೋನಿ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಚನ್ನಿ ಸೇರಿದಂತೆ 18 ಮಂದಿಯನ್ನೊಳಗೊಂಡ ಸಂಪುಟ ಇದೀಗ ರಚನೆಯಾಗಿದೆ. ಅಮರೀಂದರ್ ಸಿಂಗ್ ಸಂಪುಟದಲ್ಲಿದ್ದ ಬಲಬೀರ್ ಸಿಧು, ಗುರುಪ್ರೀತ್ ಸಿಂಗ್ ಕಾಂಗಾರ್, ಸುಂದರ್ ಶಾಮ್ ಅರೋರಾ ಮತ್ತು ಸಾಧು ಸಿಂಗ್ ಧರ್ಮಸೋಟ್ ಅವರನ್ನು ಕೈಬಿಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.