ಪೂರ್ವ ಗೋದಾವರಿ : ಜಿಲ್ಲೆಯ ಮೊಥುಗುಡೆಮ್ ಫಿಲ್ಟರ್ ಹೌಸ್‌ನಲ್ಲಿ 15 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ.
ಓದಿ: ರಾಮನವಮಿ ದಿನವೇ ಭೀಕರ ಅಪಘಾತ: ನಾಲ್ವರು ಸಾವು, ಮೂವರ ಸ್ಥಿತಿ ಗಂಭೀರ!
ಕಳೆದ ಕೆಲವು ದಿನಗಳಿಂದ ಕಾಳಿಂಗ ಸರ್ಪ ಪಂಪ್‌ಹೌಸ್‌ನಲ್ಲಿ ಪೈಪ್‌ಲೈನ್‌ಗಳ ಅಡಿ ವಾಸಿಸುತ್ತಿತ್ತು. ಇದರ ಇರುವಿಕೆ ಗಮನಿಸಿದ ಸ್ಥಳೀಯರು ಭಯಭೀತರಾಗಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಮೂಲಕ ರಾಜಮಂಡ್ರಿಯ ಈಶ್ವರ್ ಎಂಬ ಉರಗ ತಜ್ಞ ಹಾವನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಅರಣ್ಯ ಅಧಿಕಾರಿಗಳು ನಂತರ ಕಾಳಿಂಗ ಸರ್ಪವನ್ನು ದಟ್ಟವಾದ ಅರಣ್ಯ ಪ್ರದೇಶದಲ್ಲಿ ಬಿಟ್ಟರು.