ETV Bharat / bharat

ಸಾಮಾಜಿಕ ಜಾಲತಾಣದಲ್ಲಿ ತಾಲಿಬಾನ್ ರಕ್ಕಸರನ್ನ ಬೆಂಬಲಿಸಿ ಪೋಸ್ಟ್​..14 ಮಂದಿ ಬಂಧನ - ತಾಲಿಬಾನ್​​ಗೆ ಬೆಂಬಲ

ತಾಲಿಬಾನ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಅಸ್ಸೋಂ ಪೊಲೀಸರು ಕ್ರಮ ಜರುಗಿಸಲಿದ್ದಾರೆ ಎಂದು ಡಿಐಜಿ ಬರುವಾ ಹೇಳಿದ್ದಾರೆ. ಅಲ್ಲದೆ ಇಂತಹ ಕೃತ್ಯವೇನಾದರೂ ನಿಮ್ಮ ಗಮನಕ್ಕೆ ಬಂದರೆ ತಕ್ಷಣ ಪೊಲೀಸರ ಗಮನಕ್ಕೆ ತರುವಂತೆ ಜನರಿಗೆ ಮನವಿ ಮಾಡಿದ್ದಾರೆ..

14-arrested-in-assam-over-supporting-taliban-on-social-media-police
ಸಾಮಾಜಿಕ ಜಾಲತಾಣದಲ್ಲಿ ತಾಲಿಬಾನ್ ರಕ್ಕಸರ ಬೆಂಬಲಿಸಿ ಪೋಸ್ಟ್
author img

By

Published : Aug 21, 2021, 4:29 PM IST

ಗುವಾಹಟಿ(ಅಸ್ಸೋಂ) : ಅಫ್ಘಾನಿಸ್ತಾನ್​​ನಲ್ಲಿ ತಾಲಿಬಾನ್ ಉಗ್ರರ ಹಿಂಸೆ ಮುಂದುವರಿದಿದೆ. ಭಾರತದಲ್ಲಿ ತಾಲಿಬಾನಿಗಳಿಗೆ ಬೆಂಬಲಿಸಿದ ವರದಿಗಳಾಗುತ್ತಿವೆ. ಈ ನಡುವೆ ತಾಲಿಬಾನಿಗಳನ್ನ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಸಂಬಂಧ ಅಸ್ಸೋಂನಲ್ಲಿ 14 ಜನರನ್ನು ಬಂಧಿಸಲಾಗಿದೆ.

ಶುಕ್ರವಾರ ರಾತ್ರಿಯಿಂದ ಈವರೆಗೆ 14 ಮಂದಿಯ ಬಂಧನವಾಗಿದೆ. ಬಂಧಿತರ ವಿರುದ್ಧ ಐಟಿ ಕಾಯ್ದೆ ಸೇರಿ ಸಿಆರ್​ಪಿಸಿಯ ವಿವಿಧ ಸೆಕ್ಷನ್​​ಗಳಡಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸಮಾಜದ ಸ್ವಾಸ್ತ್ಯ ಹಾಳುಗೆಡುವ ಪೋಸ್ಟ್​ಗಳ ಮೇಲೆ ನಾವು ಕಣ್ಣಿಟ್ಟಿದ್ದೇವೆ ಎಂದಿರುವ ಪೊಲೀಸರು, ಇಂತಹ ಕೃತ್ಯ ಗಮನಕ್ಕೆ ಬಂದರೆ ತಕ್ಷಣ ಬಂಧಿಸಲಾಗುವುದು ಎಂದಿದ್ದಾರೆ.

ಬಂಧಿತರಲ್ಲಿ ತಲಾ ಇಬ್ಬರು ಕಾಮ್ರೂಪ್, ಬರ್ಪೇಟ್​​, ದುಬ್ರಿ ಮತ್ತು ಕರೀಂಗಂಜ್​​​​​ ಜಿಲ್ಲೆಯವರು ಎಂದು ತಿಳಿದು ಬಂದಿದೆ. ದಾರಂಗ್, ಕ್ಯಾಚಾರ್​, ಹೈಲಾಕಂಡಿ, ಸೌತ್ ಸಲ್ಮಾರಾ, ಗೌಲ್ಪಾರಾ ಮತ್ತು ಹೋಜಯ್ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬರನ್ನು ಬಂಧಿಸಲಾಗಿದೆ ಎಂದಿದ್ದಾರೆ.

ತಾಲಿಬಾನ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಅಸ್ಸೋಂ ಪೊಲೀಸರು ಕ್ರಮ ಜರುಗಿಸಲಿದ್ದಾರೆ ಎಂದು ಡಿಐಜಿ ಬರುವಾ ಹೇಳಿದ್ದಾರೆ. ಅಲ್ಲದೆ ಇಂತಹ ಕೃತ್ಯವೇನಾದರೂ ನಿಮ್ಮ ಗಮನಕ್ಕೆ ಬಂದರೆ ತಕ್ಷಣ ಪೊಲೀಸರ ಗಮನಕ್ಕೆ ತರುವಂತೆ ಜನರಿಗೆ ಮನವಿ ಮಾಡಿದ್ದಾರೆ.

ಓದಿ: ಹವಾಮಾನ ವೈಪರೀತ್ಯ ಸೇನಾ ತರಬೇತಿ ವೇಳೆ ಓರ್ವ ಸೈನಿಕ ಸಾವು.. ಇಬ್ಬರ ಸ್ಥಿತಿ ಗಂಭೀರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.