ಬಾರಾಮುಲ್ಲಾ( ಕಾಶ್ಮೀರ): ಜಮ್ಮು ಕಾಶ್ಮೀರದಲ್ಲಿ ಲಸಿಕಾ ಅಭಿಯಾನ ಭರದಿಂದ ಸಾಗಿದೆ. ಅಚ್ಚರಿ ವಿಷಯ ಎಂದರೆ ಇಲ್ಲಿ 124 ವರ್ಷದ ಅಜ್ಜಿಯೊಬ್ಬರು ಪತ್ತೆಯಾಗಿದ್ದಾರೆ. ಇನ್ನೂ ವಿಶೇಷ ಎಂದರೆ ಈ ಅಜ್ಜಿಗೆ ಇಲ್ಲಿನ ಆರೋಗ್ಯ ಇಲಾಖೆ ಲಸಿಕೆಯನ್ನೂ ಹಾಕಿದೆ.
ಅಂದ ಹಾಗೆ ಈ ಅಜ್ಜಿ ಕಂಡು ಬಂದಿರೋದು ಬಾರಾಮುಲ್ಲಾದ ಶ್ರಾಕ್ವಾರಾದ ವಾಗೂರಾ ಬ್ಲಾಕ್ನ ಮನೆಯೊಂದರಲ್ಲಿ. ಕಾಶ್ಮೀರದ ಆರೋಗ್ಯ ಇಲಾಖೆ ಕೊರೊನಾದಿಂದ ಜನರನ್ನು ಕಾಪಾಡಲು ಮನೆ ಮನೆಗೆ ತೆರಳಿ ಲಸಿಕೆಯನ್ನು ಹಾಕುತ್ತಿದೆ.
ಹೀಗೆ ಮನೆ ಮನೆ ತೆರಳಿದಾಗ ಇಲಾಖೆಗೆ ರೆಹತಿ ಬೇಗಂ ಎಂಬ ದೇಶದ ಹಿರಿಯಜ್ಜಿ ಪತ್ತೆಯಾಗಿದ್ದಾರೆ. ಅಂದ ಹಾಗೆ ರೆಹತಿ ಬೇಗಂ ಅವರ ವಯಸ್ಸು 124 ವರ್ಷ. ಈ ಅಜ್ಜಿಗೆ ಈಗ ಅಲ್ಲಿನ ಆರೋಗ್ಯ ಸಿಬ್ಬಂದಿ ಕೊರೊನಾ ವ್ಯಾಕ್ಸಿನ್ ಹಾಕಿದ್ದಾರೆ.
ಜಮ್ಮು ಕಾಶ್ಮೀರದ ಮಾಹಿತಿ ಸಚಿವಾಲಯ ದೇಶದ ಹಿರಿಯಜ್ಜಿಗೆ ಲಸಿಕೆ ನೀಡಿರುವುದನ್ನ ಖಚಿತ ಪಡಿಸಿದೆ.