ETV Bharat / bharat

ತಿರುನಲ್ವೇಲಿಯ ವೀಕ್ಷಣಾ ಕೇಂದ್ರದಿಂದ 12 ಬಾಲಾಪರಾಧಿಗಳು ಪರಾರಿ.. ಇಬ್ಬರನ್ನು ಪತ್ತೆ ಹಚ್ಚಿದ ಪೊಲೀಸರು - National Commission for Protection of Child Rights

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಶ್ರೀವೈಕುಂಡಂ ಪ್ರದೇಶದ ಬಳಿ ತಪ್ಪಿಸಿಕೊಂಡಿದ್ದ ಇಬ್ಬರು ಬಾಲಾಪರಾಧಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ತಮಿಳುನಾಡು
ತಮಿಳುನಾಡು
author img

By

Published : Apr 10, 2023, 7:44 PM IST

ತಿರುನೆಲ್ವೇಲಿ (ತಮಿಳುನಾಡು) : ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಸರ್ಕಾರಿ ವೀಕ್ಷಣಾ ಕೇಂದ್ರದಿಂದ ಭಾನುವಾರ ಪರಾರಿಯಾಗಿದ್ದ ಹನ್ನೆರಡು ಬಾಲಾಪರಾಧಿಗಳ ಪೈಕಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೂತುಕುಡಿ ಜಿಲ್ಲೆಯ ಶ್ರೀವೈಕುಂಡಂ ಪ್ರದೇಶದ ಬಳಿ ಈ ಇಬ್ಬರು ಬಾಲಾಪರಾಧಿಗಳನ್ನು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ನಾಪತ್ತೆಯಾಗಿರುವ 10 ಮಂದಿ ಬಾಲಾಪರಾಧಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಬಾಲಾಪರಾಧಿಗಳ ಪಳಯಂಕೊಟ್ಟೈ ವೀಕ್ಷಣಾ ಗೃಹದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಬಾಲಾಪರಾಧಿಗಳು ಜೈಲು ವಾರ್ಡನ್ ಮೇಲೆ ಹಲ್ಲೆ ನಡೆಸಿ ವೀಕ್ಷಣಾ ಗೃಹದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಿರುನಲ್ವೇಲಿ, ಕನ್ಯಾಕುಮಾರಿ ಮತ್ತು ತೂತುಕುಡಿ ಜಿಲ್ಲೆಗಳ 20 ಬಾಲಾಪರಾಧಿಗಳು ವೀಕ್ಷಣಾ ಕೇಂದ್ರದಲ್ಲಿದ್ದರು

ಇದನ್ನೂ ಓದಿ : ಕೋಮುಗಲಭೆಗೆ ಕಾರಣವಾದ ಮಕ್ಕಳ ಜಗಳ.. ಛತ್ತೀಸ್​ಗಢ ಬಂದ್​ಗೆ ಕರೆ ನೀಡಿದ ಸಂಘಟನೆಗಳು

ಪರಾರಿಯಾದ ಬಾಲಕರನ್ನು ಹಿಡಿಯಲು ಪೊಲೀಸರಿಂದ ಶೋಧ: ಘಟನೆಯ ನಂತರ ಕಾರಾಗೃಹದ ವಾರ್ಡನ್ ಪೆರುಮಾಳ್ಪುರಂ ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ನಂತರ ಪೊಲೀಸರ ತಂಡವು ಪರಿಸ್ಥಿತಿ ಅವಲೋಕಿಸಲು ಸ್ಥಳಕ್ಕೆ ಧಾವಿಸಿದೆ. ಪರಾರಿಯಾಗಿರುವ ಬಾಲಾಪರಾಧಿಗಳನ್ನು ಹಿಡಿಯಲು ಪೊಲೀಸರು ಭಾರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ತಿರುನೆಲ್ವೇಲಿ ಬಸ್ ನಿಲ್ದಾಣ, ಪಳಯಂಕೊಟ್ಟೈ ಬಸ್ ನಿಲ್ದಾಣ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಅಲ್ಲದೇ ಹತ್ತಿರದ ಸ್ಥಳಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸಹ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಪೆಗಾಸಸ್​ ಬಳಿಕ ಕಾಗ್ನೈಟ್​ ಸ್ಪೈವೇರ್​ ಖರೀದಿಗೆ ಕೇಂದ್ರ ಸರ್ಕಾರ ಯತ್ನ: ಕಾಂಗ್ರೆಸ್​ ಗಂಭೀರ ಆರೋಪ

ಬಾಲಾಪರಾಧಿಗಳು ತಪ್ಪಿಸಿಕೊಳ್ಳುತ್ತಿರುವ ಪ್ರಕರಣಗಳಲ್ಲಿ ಹೆಚ್ಚಳ: ಗಮನಾರ್ಹ ವಿಚಾರ ಎಂದರೆ ಈ ಘಟನೆ ನಡೆದ ಒಂದು ದಿನದ ನಂತರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಆರ್. ಜಿ. ಆನಂದ್, ತಿರುನಲ್ವೇಲಿ ಕಲೆಕ್ಟರ್ ಕೆ. ಪಿ ಕಾರ್ತಿಕೇಯನ್ ಮತ್ತು ನಾಗರಿಕ ಆಡಳಿತದ ಇತರ ಉನ್ನತ ಅಧಿಕಾರಿಗಳು ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಲು ವೀಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದರು. ತಮಿಳುನಾಡಿನಲ್ಲಿ ವೀಕ್ಷಣಾ ಕೇಂದ್ರಗಳಿಂದ ಬಾಲಾಪರಾಧಿಗಳು ತಪ್ಪಿಸಿಕೊಳ್ಳುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗಿರುವ ವರದಿಗಳು ಬಂದಿವೆ.

ಇದನ್ನೂ ಓದಿ : ಹರಿಯಾಣದ ಸೋನಿಪತ್‌ನಲ್ಲಿ ಗಲಭೆ: 16 ಮಂದಿ ಬಂಧನ

ಈ ಹಿಂದೆಯೂ ಬಾಲಾಪರಾಧಿಗಳು ಪರಾರಿಯಾದ ಘಟನೆ ವರದಿ: ಮಾರ್ಚ್​ 22ರಂದು ಕಡಲೂರು ಜಿಲ್ಲೆಯ ಕೊಂಡೂರಿನ ಸರ್ಕಾರಿ ವೀಕ್ಷಣಾ ಕೇಂದ್ರದಿಂದ ಆರು ಮಂದಿ ಬಾಲಾಪರಾಧಿಗಳು ಪರಾರಿಯಾಗಿದ್ದರು. ಕಮ್ಮಿಯನ್‌ಪೇಟೆ ಬೈಪಾಸ್‌ ರಸ್ತೆಯಲ್ಲಿ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು. ಫೆಬ್ರವರಿ 8ರಂದು ಚೆನ್ನೈನ ಸರ್ಕಾರಿ ವೀಕ್ಷಣಾ ಗೃಹದಿಂದ ಇಬ್ಬರು ಬಾಲಾಪರಾಧಿಗಳು ವೀಕ್ಷಣಾಲಯದ ಗೋಡೆಯನ್ನು ಏರಿ ಪರಾರಿಯಾಗಿದ್ದರು.

ಇದನ್ನೂ ಓದಿ : ಮದುವೆ ಸಂಭ್ರಮದಲ್ಲಿ ರಿವಾಲ್ವರ್‌ನಿಂದ ನಾಲ್ಕು ಸುತ್ತು ಗುಂಡು ಹಾರಿಸಿ ವಧು ಪರಾರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.