ETV Bharat / bharat

ಪ್ಯಾನ್ ದುರುಪಯೋಗ? 12 ಕೋಟಿ ರೂ. ವಹಿವಾಟಿಗಾಗಿ ಸಣ್ಣ ಅಂಗಡಿ ಮಾಲೀಕನಿಗೆ ಐಟಿ ನೋಟಿಸ್ - ಶೆಲ್ ಕಂಪನಿಗಳಿಗೆ ಹಲವಾರು ಕೋಟಿಗಳಷ್ಟು ನಕಲಿ ವಹಿವಾಟು

ಸಣ್ಣ ಸ್ಟೇಷನರಿ ಅಂಗಡಿ ಇಟ್ಟುಕೊಂಡಿರುವ ವ್ಯಾಪಾರಿಯೊಬ್ಬರಿಗೆ 12 ಕೋಟಿ ರೂಪಾಯಿ ವಹಿವಾಟಿನ ಬಗ್ಗೆ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.

12 ಕೋಟಿ ರೂ. ವಹಿವಾಟಿಗಾಗಿ ಸಣ್ಣ ಅಂಗಡಿ ಮಾಲೀಕನಿಗೆ ಐಟಿ ನೋಟಿಸ್
Stationary shop owner gets IT notice for Rs 12 crore transaction says his financial data misused
author img

By

Published : Apr 5, 2023, 7:45 PM IST

ಜೈಪುರ್ (ರಾಜಸ್ಥಾನ) : ರಾಜ್ಯದ ಭಿಲ್ವಾರಾದಲ್ಲಿ ದೈಹಿಕ ವಿಕಲಚೇತನ ಸ್ಟೇಷನರಿ ಅಂಗಡಿ ಮಾಲೀಕರೊಬ್ಬರಿಗೆ ಅವರು ನಡೆಸಿದ 12 ಕೋಟಿ ರೂಪಾಯಿ ವಹಿವಾಟಿನ ಬಗ್ಗೆ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಆದರೆ ಇಷ್ಟೊಂದು ಮೊತ್ತದ ವಹಿವಾಟನ್ನು ತಾವು ಮಾಡಿಲ್ಲ ಎಂದು ಅಂಗಡಿ ಮಾಲೀಕ ಹೇಳಿದ್ದಾರೆ. ಸಂಜಯ್ ಕಾಲೋನಿ ನಿವಾಸಿ ಕಿಶನ್ ಗೋಪಾಲ್ ಚಪರ್ವಾಲ್ ಎಂಬುವರು ಈ ಬಗ್ಗೆ ಸುಭಾಷ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಯಾರೋ ತಮ್ಮ ಹಣಕಾಸು ಡೇಟಾವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಚಾಪರ್ವಾಲ್ ಅವರು ಸ್ಟೇಷನರಿ ಅಂಗಡಿಯನ್ನು ನಡೆಸುತ್ತಿದ್ದಾರೆ ಮತ್ತು ಮದುವೆಗಳಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 28 ರಂದು ಅಂಚೆ ಮೂಲಕ ಬಂದಿರುವ ಆದಾಯ ತೆರಿಗೆ ನೋಟಿಸ್ ತನಗೆ ಮತ್ತು ಅವರ ಕುಟುಂಬವನ್ನು ಆಘಾತಗೊಳಿಸಿದೆ ಎಂದು ಅವರು ಹೇಳಿದರು. ಚಾಪರ್ವಾಲ್ ಅವರು ಚಾರ್ಟರ್ಡ್ ಅಕೌಂಟೆಂಟ್ ಅನ್ನು ಸಂಪರ್ಕಿಸಿದಾಗ, ಮುಂಬೈ ಮತ್ತು ಸೂರತ್‌ನಲ್ಲಿ ಎರಡು ಡೈಮಂಡ್ ಶೆಲ್ ಕಂಪನಿಗಳಿಗೆ ಹಲವಾರು ಕೋಟಿಗಳಷ್ಟು ನಕಲಿ ವಹಿವಾಟು ನಡೆಸಲು ತಮ್ಮ ಪ್ಯಾನ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸಾಲ ಮಾಡಿ ಅಂಗಡಿ ಇಟ್ಟಿದ್ದೇನೆ, ಕಂತು ಕಟ್ಟಲು ಸಾಧ್ಯವಾಗುತ್ತಿಲ್ಲ. ತಿಂಗಳಿಗೆ 8 ರಿಂದ 10 ಸಾವಿರ ಆದಾಯ ಗಳಿಸುತ್ತೇನೆ. ಈ ಬೋಗಸ್ ಕಂಪನಿಗಳಿಗೂ ನನಗೂ ಸಂಬಂಧವಿಲ್ಲ, ಕೆಲ ವಂಚಕರು ನನಗೆ ಮೋಸ ಮಾಡಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. 12.23 ಕೋಟಿ ವ್ಯವಹಾರಕ್ಕೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸಲು ಐಟಿ ಇಲಾಖೆ ನನಗೆ ನೋಟಿಸ್ ಕಳುಹಿಸಿದೆ. ಈ ವಿಷಯದಲ್ಲಿ ಮರುಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.

ರೈಲಿಗೆ ಬೆಂಕಿ ಪ್ರಕರಣ- ಅಪರಾಧ ಒಪ್ಪಿಕೊಂಡ ಶಾರುಖ್: ಬುಧವಾರ ಬೆಳಗ್ಗೆ ಮಹಾರಾಷ್ಟ್ರದ ರತ್ನಗಿರಿಯಿಂದ ಬಂಧಿತನಾಗಿರುವ ಕೋಝಿಕ್ಕೋಡ್ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಶಂಕಿತ ಆರೋಪಿ ಶಾರುಖ್ ಸೈಫಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ತಿಳಿಸಿದೆ. ಆತನ ಸಹೋದರರು ಮತ್ತು ತಂದೆಯನ್ನು ಕೂಡ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಶಾಹೀನ್ ಬಾಗ್ ಮೂಲದ ಆತನ ತಾಯಿ, ಕಳೆದ ಆರು ದಿನಗಳಿಂದ ಮಗ ಕಾಣೆಯಾಗಿದ್ದಾನೆ ಎಂದು ಹೇಳಿದ್ದರು. ಕೋಝಿಕ್ಕೋಡ್‌ನ ರೈಲ್ವೆ ಹಳಿಯಿಂದ ಪತ್ತೆಯಾದ ಬ್ಯಾಗ್‌ನಿಂದ ವಶಪಡಿಸಿಕೊಂಡ ಶರ್ಟ್ ಸೈಫಿಗೆ ಸೇರಿದ್ದು ಎಂದು ಆತನ ತಂದೆ ಕೂಡ ದೃಢಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಕೇರಳ ಪೊಲೀಸರು ನವದೆಹಲಿಯ ಶಾಹೀನ್ ಬಾಗ್‌ನಲ್ಲಿರುವ ಅವರ ಮನೆಗೆ ಆಗಮಿಸಿದ್ದಾರೆ.

ಸೈಫಿ ಕೆಲವು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿ ಮೂವರನ್ನು ಕೊಲೆಗೈದ ಪ್ರಕರಣದಲ್ಲಿ ಶಂಕಿತ ವ್ಯಕ್ತಿಯನ್ನು ಮಹಾರಾಷ್ಟ್ರದ ರತ್ನಗಿರಿಯಿಂದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದ್ದು, ಶೀಘ್ರದಲ್ಲೇ ಕೇರಳಕ್ಕೆ ಕರೆತರಲಾಗುವುದು ಎಂದು ಕೇರಳದ ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಬುಧವಾರ ತಿಳಿಸಿದ್ದಾರೆ.

ಇದನ್ನೂ ಓದಿ : ಶಾರ್ಟ್​ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ: ಒಂದೇ ಕುಟುಂಬದ ಮೂವರ ಸಾವು, 5 ಜನರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.