ETV Bharat / bharat

'ಮೌನ ಬಿಟ್ಟು ಮಣಿಪುರ ಹಿಂಸಾಚಾರ ನಿಲ್ಲಿಸಿ': ಪ್ರಧಾನಿ ಮೋದಿಗೆ 11 ವರ್ಷದ ಹೋರಾಟಗಾರ್ತಿ ಲಿಸಿಪ್ರಿಯಾ ಒತ್ತಾಯ - manipur

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ನಿಲ್ಲಿಸಬೇಕು ಎಂದು 11 ವರ್ಷದ ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

ಹೋರಾಟಗಾರ್ತಿ ಲಿಸಿಪ್ರಿಯಾ
ಹೋರಾಟಗಾರ್ತಿ ಲಿಸಿಪ್ರಿಯಾ
author img

By ETV Bharat Karnataka Team

Published : Sep 27, 2023, 11:02 PM IST

ತೇಜ್‌ಪುರ(ಅಸ್ಸಾಂ): ಮಣಿಪುರದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಸಮುದಾಯ ಸಂಘರ್ಷವನ್ನು ತಕ್ಷಣವೇ ನಿಯಂತ್ರಿಸಬೇಕು ಎಂದು ಕೋರಿ 11 ವರ್ಷದ ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಭಾವನಾತ್ಮಕ ವಿಡಿಯೋ ಹಂಚಿಕೊಂಡಿರುವ ಕಿರಿಯ ಪರಿಸರ ಹೋರಾಟಗಾರ್ತಿ, ಮಣಿಪುರದಲ್ಲಿ ತಾಂಡವವಾಡುತ್ತಿರುವ ಅಶಾಂತಿಯ ವಿರುದ್ಧ ಕೇಂದ್ರ ಸರ್ಕಾರ ನಿಷ್ಕ್ರಿಯವಾಗಿದ್ದು, ಅತ್ತ ಶೀಘ್ರವೇ ಗಮನ ಹರಿಸಿ ಪರಿಹಾರ ಸೂಚಿಸಬೇಕಿದೆ. ಕೇಂದ್ರ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಇರುವುದಕ್ಕೆ ಹತಾಶೆ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಕೋರಿದ್ದೇನು?: ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಮಾಡಲಾದ ವಿಡಿಯೋ ಸಂದೇಶದಲ್ಲಿ ಲಿಸಿಪ್ರಿಯಾ ಅವರು, 'ಪ್ರಿಯ ನರೇಂದ್ರ ಮೋದಿ ಅವರೇ, ಇದು ನಿಮಗೆ ನನ್ನ ತುರ್ತು ಸಂದೇಶ. ಮಣಿಪುರವು ನಾವು ಅಂದುಕೊಂಡ ಹಾಗಿಲ್ಲ. ನಿಮ್ಮ ಮೌನವು ಅಲ್ಲಿ ನಡೆಯುತ್ತಿರುವ ಸಂಘರ್ಷಗಳಿಗೆ ಪರಿಹಾರವಲ್ಲ. ಶಾಂತಿ ಸ್ಥಾಪನೆಗಾಗಿ ಇನ್ನಷ್ಟು ಜೀವಗಳನ್ನು ಬಲಿ ನೀಡಲು ನಾವು ಸಿದ್ಧರಿದ್ದೇವೆ. ಕೇಂದ್ರ ಸರ್ಕಾರದ ವೈಫಲ್ಯದಿಂದಾಗಿ ಮಕ್ಕಳ ಜೀವಗಳೂ ಅಲ್ಲಿ ಬಲಿಯಾಗುತ್ತಿವೆ. ಮಣಿಪುರಕ್ಕೆ ತಕ್ಷಣವೇ ನ್ಯಾಯ ಬೇಕಿದೆ' ಎಂದು ಕೋರಿದ್ದಾರೆ.

  • Dear Mr. @narendramodi ji,
    This is my urgent message to you. Manipur doesn't deserve the way you treat. Your silence is not the solution. We're ready to sacrifice more lives for Peace.

    Sacrificing the lives of the children for the failures of you is unacceptable at any cost.… pic.twitter.com/MmIT97fvP4

    — Licypriya Kangujam (@LicypriyaK) September 27, 2023 " class="align-text-top noRightClick twitterSection" data=" ">

ಮಣಿಪುರದ ಪರಿಸ್ಥಿತಿಯು ಭೀಕರವಾಗಿದೆ. ಸಾವಿರಾರು ಶಾಲೆಗಳು ಅವಶೇಷಗಳಾಗಿವೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಆಶ್ರಯತಾಣಗಳಲ್ಲಿ ಜೀವ ಉಳಿಸಿಕೊಳ್ಳುವಂತಾಗಿದೆ. ನೀವು ಈ ವಿಷಯದಲ್ಲಿ ಮೌನವನ್ನು ತ್ಯಜಿಸಿ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಿ ಎಂದು ಅವರು ಲಿಸಿಪ್ರಿಯಾ ಮನವಿ ಮಾಡಿದ್ದಾರೆ.

ಇದಕ್ಕೂ ಮೊದಲು ಲಿಸಿಪ್ರಿಯಾ ಅವರು ಜುಲೈ 30 ರಂದು ಎಕ್ಸ್​ನಲ್ಲಿ ಮೋದಿ ಅವರನ್ನು ಉದ್ದೇಶಿಸಿ, 'ಆತ್ಮೀಯ ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಮನ್​ ಕೀ ಬಾತ್​ ಅನ್ನು ನಾವು ಕೇಳಲು ಬಯಸುವುದಿಲ್ಲ. ನಾವು ಮಣಿಪುರ್ ಕಿ ಬಾತ್ ಅನ್ನು ಕೇಳಬೇಕಿದೆ. ನಾವು ಇಲ್ಲಿ ಅಕ್ಷರಶಃ ಸಾಯುತ್ತಿದ್ದೇವೆ ಎಂದು ಬರೆದುಕೊಂಡಿದ್ದರು.

ಜೊತೆಗೆ ಕೇಂದ್ರ ಸರ್ಕಾರದ ಬೇಟಿ ಬಚಾವೋ ಬೇಟಿ ಪಢಾವೋ ಮತ್ತು ಮಹಿಳಾ ಸಬಲೀಕರಣದ ಯೋಜನೆಗಳನ್ನು ಟೀಕಿಸಿದ್ದ ಲಿಸಿಪ್ರಿಯಾ ಅವರು, ಮಣಿಪುರದ ಬಿಕ್ಕಟ್ಟಿನ ಬಗ್ಗೆ ಮೊದಲು ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದರು.

ವಿದ್ಯಾರ್ಥಿಗಳ ಶವ ಪತ್ತೆ: ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಈಶಾನ್ಯ ರಾಜ್ಯ ಮಣಿಪುರದಲ್ಲಿ ಜುಲೈ ತಿಂಗಳಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಶವವಾಗಿ ಈಗ ಪತ್ತೆಯಾಗಿದ್ದಾರೆ. ಈ ವಿದ್ಯಾರ್ಥಿಗಳನ್ನು ಶಸ್ತ್ರಸಜ್ಜಿತ ತಂಡ ಹತ್ಯೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸೋಮವಾರ ರಾತ್ರಿಯಿಂದಲೇ ಮೃತದೇಹಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮತ್ತೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ವಿದ್ಯಾರ್ಥಿಗಳ ಶವವಿರುವ ಫೋಟೋಗಳು ವೈರಲ್ ಆಗುತ್ತಿವೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ: ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.