ETV Bharat / bharat

ನಾಗಾಲ್ಯಾಂಡ್​ನಲ್ಲಿ ಭದ್ರತಾ ಪಡೆ ಫೈರಿಂಗ್​​: 13 ನಾಗರಿಕರು, ಓರ್ವ ಯೋಧ ಸಾವು

ಶನಿವಾರ ಸಂಜೆ ಕಲ್ಲಿದ್ದಲು ಗಣಿಯಿಂದ ಕೆಲಸ ಮುಗಿಸಿಕೊಂಡು ಕೆಲವು ದಿನಗೂಲಿ ಕಾರ್ಮಿಕರು ಪಿಕಪ್ ವ್ಯಾನ್‌ನಲ್ಲಿ ವಾಪಸ್ಸಾಗುತ್ತಿದ್ದಾಗ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿದೆ.

Civilians killed in security forces firing in Nagaland
ನಾಗಾಲ್ಯಾಂಡ್​ನಲ್ಲಿ ರಕ್ಷಣಾ ಪಡೆ ಫೈರಿಂಗ್​​: 11 ನಾಗರಿಕರು ಮೃತ
author img

By

Published : Dec 5, 2021, 11:32 AM IST

Updated : Dec 5, 2021, 12:05 PM IST

ಕೋಹಿಮಾ(ನಾಗಾಲ್ಯಾಂಡ್‌): ಭದ್ರತಾ ಪಡೆಗಳು 13 ಮಂದಿ ನಾಗರಿಕರನ್ನು ಗುಂಡು ಹಾರಿಸಿ ಕೊಂದಿರುವ ಘಟನೆ ನಾಗಾಲ್ಯಾಂಡ್​ನ ಮೋನ್ ಜಿಲ್ಲೆಯ ಓಟಿಂಗ್ ಮತ್ತು ತಿರು ಗ್ರಾಮಗಳ ನಡುವೆ ನಡೆದಿದೆ.

ನ್ಯಾಷನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ಸಂಘಟನೆಯ ಬಂಡುಕೋರರು ಎಂದು ಭಾವಿಸಿ, ಭದ್ರತಾ ಪಡೆಗಳು ದಾಳಿ ನಡೆಸಿವೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಘಟನೆಯ ನಂತರ ಉದ್ವಿಗ್ನ ಪರಿಸ್ಥಿತಿ

ಈ ವೇಳೆ, ಓರ್ವ ಯೋಧ ಕೂಡಾ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ನಾಗರಿಕರು ಸಾವನ್ನಪ್ಪಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಹಲವೆಡೆ ಪರಿಸ್ಥಿತಿ ಉದ್ವಿಗ್ನವಾಗಿದೆ.

ಎಷ್ಟು ಮಂದಿ ಸಾವನ್ನಪಿದ್ದಾರೆ ಎಂದು ನಿಖರವಾಗಿ ಇನ್ನೂ ಗೊತ್ತಾಗಿಲ್ಲ. ಗಾಯಗೊಂಡವರಲ್ಲಿ ಹಲವರು ನೆರೆಯ ಅಸ್ಸಾಂನ ಆಸ್ಪತ್ರೆಗಳಲ್ಲೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

  • The unfortunate incident leading to killing of civilians at Oting, Mon is highly condemnable.Condolences to the bereaved families & speedy recovery of those injured. High level SIT will investigate & justice delivered as per the law of the land.Appeal for peace from all sections

    — Neiphiu Rio (@Neiphiu_Rio) December 5, 2021 " class="align-text-top noRightClick twitterSection" data=" ">

ಶನಿವಾರ ಸಂಜೆ ಕಲ್ಲಿದ್ದಲು ಗಣಿಯಿಂದ ಕೆಲಸ ಮುಗಿಸಿಕೊಂಡು ಕೆಲವು ದಿನಗೂಲಿ ಕಾರ್ಮಿಕರು ಪಿಕಪ್ ವ್ಯಾನ್‌ನಲ್ಲಿ ವಾಪಸ್ಸಾಗುತ್ತಿದ್ದಾಗ ಓಟಿಂಗ್ ಮತ್ತು ತಿರು ಗ್ರಾಮಗಳ ನಡುವೆ ಈ ಘಟನೆ ನಡೆದಿದೆ.

ಇದನ್ನೂ ಓದಿ: 'ನಾನು ಯಾವುದೇ ಪಕ್ಷಕ್ಕೆ ಸೇರಿಲ್ಲ, ರಾಷ್ಟ್ರವಾದಿಗಳ ಪರ ಪ್ರಚಾರ ಮಾಡುವೆ'

Last Updated : Dec 5, 2021, 12:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.