ETV Bharat / bharat

ಅಸ್ಸೋಂನಲ್ಲಿ ಮಳೆ, ಪ್ರವಾಹಕ್ಕೆ 107 ಜನ ಸಾವು; ಪರಿಸ್ಥಿತಿ ಮೇಲೆ ತೀವ್ರ ನಿಗಾ- ಪ್ರಧಾನಿ ಮೋದಿ - ಅಸ್ಸೋಂನಲ್ಲಿ 107 ಜನರು ಮಳೆ ಪ್ರವಾಹಕ್ಕೆ ಸಾವು

ಅಸ್ಸೋಂನಲ್ಲಿ ಮಳೆ, ಪ್ರವಾಹ ಕಾರಣಕ್ಕೆ ಮತ್ತೆ 7 ಜನರು ಅಸುನೀಗಿದ್ದಾರೆ. ಕೇಂದ್ರ ಸರ್ಕಾರ, ಅಸ್ಸೋಂ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಅಸ್ಸೋಂನಲ್ಲಿ ಮಳೆ ಪ್ರವಾಹಕ್ಕೆ 107 ಜನ ಸಾವು
ಅಸ್ಸೋಂನಲ್ಲಿ ಮಳೆ ಪ್ರವಾಹಕ್ಕೆ 107 ಜನ ಸಾವು
author img

By

Published : Jun 23, 2022, 10:07 PM IST

ಅಸ್ಸೋಂ: ಅಸ್ಸೋಂನಲ್ಲಿ ಮಳೆಯ ನರ್ತನ ಜೋರಾಗಿದೆ. ಇದರಿಂದ ರಾಜ್ಯದ ಹಲವೆಡೆ ಭಾರಿ ಪ್ರವಾಹ ಉಂಟಾಗಿದೆ. ಕಳೆದ 24 ಗಂಟೆಗಳಲ್ಲಿ 7 ಜನರು ಪ್ರವಾಹ ಸಂಬಂಧಿ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವನ್ನಪ್ಪಿದ್ದವರ ಸಂಖ್ಯೆ 107ಕ್ಕೇರಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಮಳೆಯಿಂದ ಹಲವಾರು ಗ್ರಾಮಗಳು ಜಲಾವೃತವಾಗಿದ್ದು, ಲಕ್ಷಾಂತರ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. 24 ಗಂಟೆ ಅವಧಿಯಲ್ಲಿ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿಯವರೆಗೆ, ನೀರಿನಲ್ಲಿ ಕೊಚ್ಚಿ ಹೋಗಿ 90 ಮತ್ತು ಭೂಕುಸಿತದ ಘಟನೆಗಳಲ್ಲಿ 17 ಮಂದಿ ಪ್ರಾಣ ತೆತ್ತಿದ್ದಾರೆ. ಒಟ್ಟಾರೆ 107 ಜನರು ಮಳೆ ಹಾನಿಗೆ ಜೀವ ಕಳೆದುಕೊಂಡಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.

ನಿರಂತರ ಮೇಲ್ವಿಚಾರಣೆ- ಮೋದಿ: ಅಸ್ಸೋಂನಲ್ಲಿ ಉಂಟಾದ ಭೀಕರ ಪ್ರವಾಹದ ಕುರಿತು ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕಳೆದ ಕೆಲವು ದಿನಗಳಿಂದ ಅಸ್ಸೋಂನ ಕೆಲವು ಭಾಗಗಳು ಭಾರಿ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿವೆ. ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಈ ಸವಾಲನ್ನು ಎದುರಿಸಲು ಸಾಧ್ಯವಿರುವ ಎಲ್ಲ ನೆರವನ್ನು ನೀಡಲು ರಾಜ್ಯ ಸರ್ಕಾರದೊಂದಿಗೆ ಕೇಂದ್ರ ಸರ್ಕಾರ ನಿಕಟ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.

ಪ್ರವಾಹಪೀಡಿತ ಪ್ರದೇಶಗಳಲ್ಲಿ ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ಬೀಡುಬಿಟ್ಟಿವೆ. ಅವರು ಸಂಕಷ್ಟಲ್ಲಿರುವ ಜನರನ್ನು ಸುರಕ್ಷುತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಸತತವಾಗಿ ನಡೆಸುತ್ತಿದ್ದಾರೆ. ಸ್ಥಳಾಂತರ ಪ್ರಕ್ರಿಯೆಯ ಭಾಗವಾಗಿ ವಾಯುಪಡೆಯ 250ಕ್ಕೂ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಇದನ್ನೂ ಓದಿ: ಮಂಗಳೂರಿನ ಬಟ್ಟಪಾಡಿ ಬಳಿ ಸಮುದ್ರದಲ್ಲಿ ‌ಅಪಾಯಕ್ಕೆ ಸಿಲುಕಿದ್ದ ಹಡಗು ಮುಳುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.