ವಾರಣಾಸಿ(ಉತ್ತರಪ್ರದೇಶ): ಶತಾಯುಷಿ ಅಜ್ಜಿಯೊಬ್ಬರು 100 ಮೀಟರ್ ಓಟದಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಅಷ್ಟೇ ಅಲ್ಲ, ಅವರ ಧೈರ್ಯ ಈಗ ನಗರದಲ್ಲಿ ಸದ್ದು ಮಾಡುತ್ತಿದೆ. ಹೌದು, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರೇರಿತರಾಗಿರುವ 103 ವರ್ಷದ ಕಲಾವತಿ ಅವರು ಸಂಸದ ಕ್ರೀಡಾ ಸ್ಪರ್ಧೆ ಕಾಶಿ 2023 ಅಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಉತ್ತರ ವಿಧಾನಸಭಾ ಕ್ಷೇತ್ರದ ಪರಮಾನಂದಪುರ ನಿವಾಸಿ ಕಲಾವತಿ 100 ಮೀಟರ್ ಓಟದಲ್ಲಿ ಭಾಗವಹಿಸಲಿದ್ದಾರೆ. ಅವರ ಧೈರ್ಯ ವಾರಣಾಸಿಯ ಜನರಲ್ಲಿ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಮಾತನಾಡಿದ ಅವರು, ನಾನು ಪ್ರಧಾನಿ ಮೋದಿಯವರ ‘ಖೇಲೆಗಾ ಭಾರತ ಥಭಿ ತೋ ಕಿಲೆಗಾ ಭಾರತ್’ ನೀತಿಯಿಂದ ಪ್ರಭಾವಿತನಾಗಿದ್ದೇನೆ. ಈ ಕಾರಣಕ್ಕಾಗಿ ಸಂಸದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ. ಈ ಸ್ಪರ್ಧೆಯಲ್ಲಿ ಹೆಚ್ಚು ಹೆಚ್ಚು ಜನರು ಭಾಗವಹಿಸಬೇಕು. ಇದರಿಂದ ಭಾರತವು ಕ್ರೀಡೆಯಲ್ಲೂ ಸೂಪರ್ ಪವರ್ ಆಗಬೇಕು ಎಂಬುದು ನನ್ನ ಆಸೆ ಅಂತಾ ಅವರು ಹೇಳುತ್ತಾರೆ.
103ರ ಹರೆಯದ ಕಲಾವತಿಯವರ ಈ ಚೇತನ ಎಲ್ಲರನ್ನೂ ಹುರಿದುಂಬಿಸುತ್ತಿದೆ. ಕಲಾವತಿ ಅವರಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ. ಮನೆಯ ಸುತ್ತ ಕ್ರೀಡಾ ಸ್ಪರ್ಧೆಗಳು ನಡೆಯುತ್ತಿದ್ದರೆ ಅವರು ಖಂಡಿತವಾಗಿಯೂ ಅವುಗಳನ್ನು ವೀಕ್ಷಿಸಲು ಹೋಗುತ್ತಾರೆ. ಅಷ್ಟೇ ಅಲ್ಲ ಆಟಗಾರರನ್ನು ಪ್ರೋತ್ಸಾಹಿಸುತ್ತಾರೆ. ಬೆಳಗಿನ ಜಾವ ಎರಡರಿಂದ ಮೂರು ಕಿಲೋಮೀಟರ್ ನಡಿಗೆ ಅವರ ದಿನಚರಿಯಲ್ಲಿದೆ. ಕಲಾವತಿ 10ನೇ ವಯಸ್ಸಿನಲ್ಲಿ ಮದುವೆಯಾದರು. ಮಕ್ಕಳಿಲ್ಲದ ಕಾರಣ ಪತಿ ಆಕೆಯನ್ನು ತೊರೆದಿದ್ದಾರೆ. ಆಗಿನಿಂದಲೂ ಅವರು ತನ್ನ ತಂದೆ-ತಾಯಿಯ ಮನೆಯಲ್ಲೇ ವಾಸಿಸಲು ಆರಂಭಿಸಿದರು. ಸದ್ಯ ಅವರು ತಮ್ಮ ಸೋದರಳಿಯ ಡಾ. ಅಶೋಕ್ ಕುಮಾರ್ ಸಿಂಗ್ ಅವರ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.
ವಯಸ್ಸಾದ ಕಲಾವತಿ ಕೂಡ ಪ್ರತಿದಿನ ಅಲ್ಪ ಆಹಾರವನ್ನು ಸೇವಿಸುತ್ತಾರೆ. ಕ್ರೀಡೆ ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರನ್ನಾಗಿಸುವುದರ ಜೊತೆಗೆ ಶಿಸ್ತುಬದ್ಧರನ್ನಾಗಿಸುತ್ತದೆ ಎನ್ನುತ್ತಾರೆ ಅವರು. ಸಂಸದ ಕ್ರೀಡಾ ಸ್ಪರ್ಧೆಯ ಮೂಲಕ ಹಳ್ಳಿಯಿಂದ ನಗರಕ್ಕೆ ಪ್ರತಿಭೆ ಅನಾವರಣಗೊಳ್ಳಲಿದೆ. ಹೆಚ್ಚು ಹೆಚ್ಚು ಜನರು ಇದರಲ್ಲಿ ಭಾಗವಹಿಸಬೇಕು. ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳುತ್ತಾರೆ. ಇನ್ನು ಈ ಬಾರಿ ಹೆಚ್ಚಿನ ಸಂಖ್ಯೆಯ ಆಟಗಾರರು ಎಂಪಿ ಕ್ರೀಡಾ ಸ್ಪರ್ಧೆ ಕಾಶಿ 2023 ರಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇದಕ್ಕಾಗಿ ನೋಂದಣಿ ಆರಂಭವಾಗಿದೆ. ಇದರಲ್ಲಿ ಭಾಗವಹಿಸಲು, ಆಟಗಾರರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
ಓದಿ: Cricket World Cup: ಡಚ್ಚರ ವಿರುದ್ಧ ಗೆಲುವಿಗಾಗಿ ಕಾತರದಿಂದ ಕಾಯುತ್ತಿರುವ ನ್ಯೂಜಿಲೆಂಡ್