ತೂತುಕುಡಿ (ತಮಿಳುನಾಡು): ಇಲ್ಲಿನ ವಿಒಸಿ ಬಂದರಿನಲ್ಲಿ ಮಂಗಳವಾರ ಹಡಗಿನಲ್ಲಿ ಬಂದ 400 ಕೆ.ಜಿ ಕೊಕೇನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ವಶಪಡಿಸಿಕೊಂಡಿದೆ.
ಅಕ್ರಮದ ಸುಳಿವು ದೊರೆತ ಅಧಿಕಾರಿಗಳು ಶ್ರೀಲಂಕಾದಿಂದ ಸರಕುಗಳನ್ನು ಹೊತ್ತು ತಂದ ಹಡಗಿನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅವರು ದಾಖಲೆಗಳನ್ನು ಪರಿಶೀಲಿಸಿದಾಗ, ಹಲವಾರು ಚೀಲಗಳಲ್ಲಿ ತುಂಬಿದ್ದ ಕೊಕೇನ್ ಅನ್ನು ಕಟ್ಟಿಗೆಗಳ ಕೆಳಗೆ ಅಡಗಿಸಿಟ್ಟಿರುವುದನ್ನು ಪತ್ತೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು ₹1,000 ಕೋಟಿಯಾಗಿದ್ದು, ಇದರ ಮೂಲದ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಅಸ್ಸೋಂನಲ್ಲಿ ಮೂವರು ONGC ಅಧಿಕಾರಿಗಳ ಅಪಹರಣ