ETV Bharat / bharat

ವರ್ಷಕ್ಕೆ ಒಂದು ಸಾವಿರ ಅಪಹರಣ ಪ್ರಕರಣಗಳು: ಹೈದರಾಬಾದ್‌ ಪೊಲೀಸರ ನಿದ್ದೆಗೆಡಿಸಿದ ಆರೋಪಿಗಳು

author img

By ETV Bharat Karnataka Team

Published : Jan 10, 2024, 8:27 PM IST

ಅಪಹರಣ ಪ್ರಕರಣಗಳು ಹೈದರಾಬಾದ್‌ ಪೊಲೀಸರ ನಿದ್ದೆಗೆಡಿಸಿವೆ. ಅಂತಾರಾಜ್ಯ ಆರೋಪಿಗಳಿಗೆ ಸಂಪರ್ಕ ಹೊಂದಿರುವ ಕುಖ್ಯಾತ ಗ್ಯಾಂಗ್‌ಗಳು ಆಸಿಫ್ ನಗರ, ಪಹಡೆ ಷರೀಫ್, ಚಂದ್ರಾಯನಗುಟ್ಟ, ಕಾಟೇದನ್, ಬಾರ್ಕಾಸ್ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಸಕ್ರಿಯವಾಗಿವೆ.

ಅಪಹರಣ ಪ್ರಕರಣಗಳು  ಹೈದರಾಬಾದ್‌ ಪೊಲೀಸ್  Kidnapping cases  Hyderabad Police
ವರ್ಷಕ್ಕೆ ಒಂದು ಸಾವಿರ ಅಪಹರಣ ಪ್ರಕರಣಗಳು: ಹೈದರಾಬಾದ್‌ ಪೊಲೀಸರ ನಿದ್ದೆಗೆಡಿಸಿದ ಆರೋಪಿಗಳು

ಹೈದರಾಬಾದ್: ಹೈದರಾಬಾದ್​ನಲ್ಲಿ ಅಪಹರಣ ಪ್ರಕರಣಗಳು ಹೆಚ್ಚುತ್ತ್ತಿವೆ. ಈ ಕಿಡ್ನಾಪ್ ಪ್ರಕರಣಗಳು ಪೊಲೀಸರ ನಿದ್ದೆಗೆಡಿಸಿವೆ. ಹೈದರಾಬಾದ್​ನಲ್ಲಿ ವರ್ಷಕ್ಕೆ ಸುಮಾರು 1,000 ಕಿಡ್ನಾಪ್​ ಪ್ರಕರಣಗಳು ನಡೆಯುತ್ತಿವೆ ಎಂದು ಅಂದಾಜಿಸಲಾಗಿದೆ.

ಪೊಲೀಸ್ ಮಾಹಿತಿ ಪ್ರಕಾರ, ಆರರಿಂದ ಏಳು ಸುಪಾರಿ ಗ್ಯಾಂಗ್​ಗಳು ಆಸಿಫ್ ನಗರ, ಪಹಡೆ ಷರೀಫ್, ಚಂದ್ರಾಯನಗುಟ್ಟ, ಕಾಟೇದನ್, ಬಾರ್ಕಾಸ್ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಹೈಪರ್​ ಆ್ಯಕ್ಟಿವ್ ಆಗಿ ಕೆಲಸ ಮಾಡುತ್ತಿವೆ. ಅಂತಾರಾಜ್ಯ ಆರೋಪಿಗಳೊಂದಿಗೆ ಸಂಪರ್ಕ ಹೊಂದಿರುವ ಈ ಗ್ಯಾಂಗ್‌ಗಳು ನಟೋರಿಸ್​ ಆಗಿವೆ. ಈ ಆರೋಪಿಗಳು ಹಣಕ್ಕಾಗಿ ಯಾರಬೇಕಾದರೂ ಕೊಲ್ಲಲು ಹಿಂಜರಿಯುವುದಿಲ್ಲ.

ವರ್ಷಕ್ಕೆ ಒಂದು ಕೋಟಿಯವರೆಗೂ ಆದಾಯ ಗಳಿಸುವ ಶ್ರೀಮಂತನ ತಂಗಿಯ ಮಾತಿಗೆ ಮಣಿದ ನಟೋರಿಸ್ ಕ್ರಿಮಿನಲ್ ಒಬ್ಬನ ಬಂಧನವೇ ಈ ವಿಚಾರಗಳು ತಿಳಿದಿವೆ. ಸೈಬರಾಬಾದ್‌ ವ್ಯಾಪ್ತಿಯಲ್ಲಿ ನಡೆದಿದ್ದ ಅಪಹರಣ ಪ್ರಕರಣ ಆರೋಪಿಯಾಗಿದ್ದಾನೆ. ಈ ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಅಲಿಯಾಸ್ ಸೂರ್ಯ ಈ ಹಿಂದೆ 20 -30ಕ್ಕೂ ಹೆಚ್ಚು ಅಪಹರಣ ಪ್ರಕರಣಗಳಲ್ಲಿ ಮಾಸ್ಟರ್ ಮೈಂಡ್ ಆಗಿದ್ದ. ಈತನ ಬಂಧನದ ಹಿನ್ನೆಲೆ ಪೊಲೀಸರಿಗೆ ನಿಟ್ಟುಸಿರು ಬಿಟ್ಟಿದ್ದಾರೆ.

ನಟೋರಿಸ್ ಕ್ರಿಮಿನಲ್ ಸುರೇಶ್: ಭೋಜಗುಟ್ಟದ ಸುರೇಶ್ ಎಂಬಾತ ನಟೋರಿಸ್ ಕ್ರಿಮಿನಲ್ ಆಗಿದ್ದು, ಆತನ ಹಿರಿಯ ಸಹೋದರ ಸುಧಾಕರ್ ಕೂಡ ಅಪ್ರಾಪ್ತನಾಗಿದ್ದಾಗಲೇ ಕಳ್ಳತನ ಮಾಡುತ್ತಿದ್ದ. ಆತ 14 ವರ್ಷಗಳ ಕಾಲ ಜೈಲಿನಲ್ಲಿದ್ದ. ಹಿರಿಯ ಸೋಹೋದರನ ಹಾದಿಯಲ್ಲೇ ಸಾಗಿರುವ ಸುರೇಶ್​ನ ಕಾರ್ಯವೈಖರಿಯೇ ಬೇರೆಯಾಗಿತ್ತು. ಆತ ಸಾಮಾಜಿಕ ಮಾಧ್ಯಮದಲ್ಲಿ ಹುಡುಗಿಯರ ಹೆಸರಿನಲ್ಲಿ ನಕಲಿ ಪ್ರೊಫೈಲ್‌ಗಳಿಂದ ಸೃಷ್ಟಿಸಿ, ಯುವಕ, ಯುವತಿಯರಿಗೆ ಫ್ರೆಂಡ್​ ರಿಕ್ವೆಸ್ಟ್​​ಗಳನ್ನು ಕಳುಹಿಸುತ್ತಿದ್ದ. ಅವರಿಗೆ ವಿವಿಧ ಆಮಿಷಗಳನ್ನು ಒಡ್ಡಿ ಹಣ ವಂಚನೆ ಮಾಡುತ್ತಿದ್ದ. ಇದೇ ರೀತಿಯ ಹಲವು ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ದರೋಡೆ ಪ್ರಕರಣಗಳಲ್ಲಿ ಹೆಚ್ಚಳ- ಎನ್​ಸಿಆರ್​ಬಿ: ತೆಲಂಗಾಣ ರಾಜ್ಯದಲ್ಲಿ ಪ್ರತಿವರ್ಷ ದರೋಡೆ, ಕಳ್ಳತನ ಪ್ರಕರಣಗಳು ಹೆಚ್ಚಳ ಆಗುತ್ತಿವೆ. ಕಳೆದ ವರ್ಷ (2022ರಲ್ಲಿ) ದಿನವೂ ಕೂಡ 44.63 ಲಕ್ಷ ರೂ. ಮೌಲ್ಯದ ಸ್ವತ್ತು ಕಳ್ಳತನವಾಗಿರುವ ಪ್ರಕರಣಗಳು ಕಂಡು ಬಂದಿವೆ. ಸಮಾಜಘಾತುಕ ಚಟುವಟಿಕೆಗಳನ್ನು ತಡೆಯಲು ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡುತ್ತಿದ್ದಾರೆ. ಆದರೆ ಕಳ್ಳತನ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ, ಇರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಎನ್​ಸಿಆರ್​ಬಿ ವರದಿ: ರಾಷ್ಟ್ರೀಯ ಅಪರಾಧ ಅಂಕಿ - ಅಂಶ ಸಂಸ್ಥೆ (NCRB) ಪ್ರಕಾರ, ಕಳೆದ ವರ್ಷ (2022), ತೆಲಂಗಾಣದಲ್ಲಿ 23,557 ಕಳ್ಳತನ, 495 ಸುಲಿಗೆ ಹಾಗೂ 30 ಡಕಾಯಿತಿ ಪ್ರಕರಣಗಳು ನಡೆದಿವೆ. 162.9 ಕೋಟಿ ಮೌಲ್ಯದ ನಗದು, ಚಿನ್ನಾಭರಣ ಹಾಗೂ ಉಪಕರಣಗಳನ್ನು ಕಳವು ಮಾಡಲಾಗಿದೆ. ಕಳ್ಳರು 2020ರಲ್ಲಿ 104.3 ಕೋಟಿ ರೂ. ಹಾಗೂ 2021 ರಲ್ಲಿ 121.6 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದೋಚಿರುವ ಕುರಿತು ವರದಿಯಾಗಿದೆ. 2020 ರಿಂದ 2022ರ ಎರಡು ವರ್ಷಗಳ ಅವಧಿಯಲ್ಲಿ ದರೋಡೆಗೊಳಗಾದ ಜನರ ಆಸ್ತಿ ಮೌಲ್ಯವು ಸುಮಾರು ಶೇಕಡಾ 60ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಕೇರಳ ಪ್ರೊಫೆಸರ್ ಕೈ ಕಡಿದ ಪ್ರಕರಣ: 13 ವರ್ಷಗಳ ಬಳಿಕ ಮೊದಲ ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.