ETV Bharat / bharat

ಈ ಗಿಳಿಯನ್ನು ಎಲ್ಲಾದ್ರೂ ನೋಡಿದ್ದೀರಾ?.. ಹುಡುಕಿಕೊಟ್ಟವರಿಗೆ 10 ಸಾವಿರ ರೂ. ಬಹುಮಾನ - parrot

ವಿದೇಶಿ ತಳಿಯ ಗಿಳಿಯೊಂದು ಉತ್ತರ ಪ್ರದೇಶದ ಅಲಿಗಢದಲ್ಲಿ ಕಾಣೆಯಾಗಿದ್ದು, ಅದನ್ನು ಹುಡುಕಿ ಮಾಲೀಕನಿಗೆ ಒಪ್ಪಿಸಿದವರಿಗೆ 10 ಸಾವಿರ ರೂ. ನಗದು ಬಹುಮಾನ ಸಿಗಲಿದೆ.

parrot
ವಿದೇಶಿ ತಳಿಯ ಗಿಳಿ
author img

By

Published : Mar 8, 2021, 3:30 PM IST

ಅಲಿಗಢ: ಉತ್ತರ ಪ್ರದೇಶದ ಅಲಿಗಢದ ವ್ಯಕ್ತಿಯೊಬ್ಬರು ತಾವು ಸಾಕಿದ್ದ ಗಿಳಿಯನ್ನು ಕಳೆದುಕೊಂಡಿದ್ದು, ಅದನ್ನು ಹುಡುಕಿಕೊಟ್ಟವರಿಗೆ 10,000 ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ದೀನ್ ​ದಯಾಳ್​​ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಎಸ್.ಕೆ. ವರ್ಶ್ನಿ ಅವರು ವಿದೇಶಿ ತಳಿಯ ಗಿಳಿಯೊಂದನ್ನು ಸಾಕಿದ್ದರು. ಕೆಲ ದಿನಗಳ ಹಿಂದೆ ಆ ಗಿಳಿ ಮನೆಯಿಂದ ಕಾಣೆಯಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರನ್ನೂ ನೀಡಿದ್ದಾರೆ.

ಇದನ್ನೂ ಓದಿ: 'ಮಹಿಳೆಗೆ ಅಸಾಧ್ಯವಾದದ್ದು ಏನೂ ಇಲ್ಲ': 2ನೇ ಮಗುವಿನ ಮೊದಲ ಫೋಟೋ ಶೇರ್​ ಮಾಡಿದ ಬೆಬೊ

ಇದೀಗ ಕರಪತ್ರಗಳನ್ನು ಮುದ್ರಿಸಿ ಎಲ್ಲೆಡೆ ವಿತರಿಸಿ, ತಮ್ಮ ಗಿಳಿಯನ್ನು ಮರಳಿ ಪಡೆಯಲು ಸಹಾಯ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಈ ಮೊದಲು ಗಿಳಿಯನ್ನು ಹುಡುಕಿ ಒಪ್ಪಿಸಿದವರಿಗೆ 5 ಸಾವಿರ ರೂ. ನೀಡುವುದಾಗಿ ಘೋಷಿಸಿದ್ದ ವರ್ಶ್ನಿ, ಈಗ ನಗದು ಬಹುಮಾನವನ್ನು 10 ಸಾವಿರ ರೂ.ಗೆ ಹೆಚ್ಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.