ETV Bharat / bharat

ಭಾರತಕ್ಕೆ ಬರುವ ಯುಕೆ ನಾಗರಿಕರಿಗೆ 10 ದಿನ ಕ್ವಾರಂಟೈನ್; ಬ್ರಿಟನ್‌ಗೆ ಭಾರತದ ತಿರುಗೇಟು

author img

By

Published : Oct 1, 2021, 6:11 PM IST

Updated : Oct 1, 2021, 6:24 PM IST

ಕೋವಿಡ್​ ವಿಚಾರವಾಗಿ ಭಾರತದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದ ಬ್ರಿಟನ್‌ ಸರ್ಕಾರಕ್ಕೆ ಇದೀಗ ಭಾರತ ತಕ್ಕ ತಿರುಗೇಟು ನೀಡಿದೆ.

UK Citizens
UK Citizens

ನವದೆಹಲಿ: ಲಂಡನ್​ಗೆ ತೆರಳುವ ಭಾರತೀಯ ನಾಗರಿಕರಿಗೆ 10 ದಿನಗಳ ಕ್ವಾರಂಟೈನ್​ ಕಡ್ಡಾಯಗೊಳಿಸಿರುವ ಯುಕೆ ಸರ್ಕಾರಕ್ಕೆ ಇದೀಗ ಭಾರತ ಕೂಡ ತಿರುಗೇಟು ನೀಡಿದೆ. ಅಲ್ಲಿಂದ ಬರುವ ಜನರಿಗೆ (ಲಂಡನ್ ನಾಗರಿಕರು) 10 ದಿನಗಳ ಕಾಲ ಕ್ವಾರಂಟೈನ್​ ಕಡ್ಡಾಯಗೊಳಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅಕ್ಟೋಬರ್ 4ರಿಂದ ನಿಯಮ ಜಾರಿಗೊಳ್ಳಲಿದೆ ಎನ್ನಲಾಗಿದೆ.

  • India has decided to impose reciprocity on UK nationals arriving in India from the UK. New regulations will come into effect from October 4, and will be applicable to all UK nationals arriving from the UK: Sources#COVID19

    — ANI (@ANI) October 1, 2021 " class="align-text-top noRightClick twitterSection" data=" ">

ಕೋವಿಡ್ ಲಸಿಕೆ ಪಡೆದುಕೊಂಡಿರುವ ಹೊರತಾಗಿ ಕಡ್ಡಾಯವಾಗಿ 10 ದಿನಗಳ ಕಾಲ ಕ್ವಾರಂಟೈನ್​ಗೊಳಗಾಗಬೇಕೆಂದು ಕೇಂದ್ರ ಸರ್ಕಾರ ತಿಳಿಸಿದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.

ಕೋವಿಡ್ ಮಾರ್ಗಸೂಚಿ ಕುರಿತಾಗಿ ಲಂಡನ್​ ಹೊರಡಿಸಿರುವ ನಿಯಮಕ್ಕೆ ಈಗಾಗಲೇ ಭಾರತ ಸೇರಿದಂತೆ ಅನೇಕ ದೇಶಗಳಿಂದ ಅಪಸ್ವರ ಕೇಳಿ ಬಂದಿದ್ದು, ಇದರ ಬೆನ್ನಲ್ಲೇ ಭಾರತ ಮಹತ್ವದ ನಿರ್ಧಾರ ಕೈಗೊಂಡಿದೆ.

ಪ್ರಯಾಣ ಆರಂಭಿಸುವ 72 ಗಂಟೆಗಳ ಮೊದಲು ಕೋವಿಡ್​ ಆರ್​ಟಿ-ಪಿಸಿಆರ್​ ಪರೀಕ್ಷೆ ಮಾಡಿಸಿರಬೇಕು. ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ಮತ್ತೆ ಆರ್​​ಟಿ-ಪಿಸಿಆರ್ ಪರೀಕ್ಷೆಗೊಳಪಡುವುದು ಕಡ್ಡಾಯ ಎಂದು ತಿಳಿಸಿದೆ. ಇದರ ಜೊತೆಗೆ 10 ದಿನಗಳ ಕಾಲ ಕ್ವಾರಂಟೈನ್​ಗೊಳಗಾಗುವುದು ಕೂಡಾ ಕಡ್ಡಾಯ ಎಂದಿದೆ.

ಕಳೆದ ಕೆಲವು ದಿನಗಳ ಹಿಂದೆ ಹೊಸದಾಗಿ ಮಾರ್ಗಸೂಚಿ ಹೊರಡಿಸಿದ್ದ ಲಂಡನ್​ ಸರ್ಕಾರ ಭಾರತದ ಕೋವಿಶೀಲ್ಡ್​ ಲಸಿಕೆಯನ್ನು ಅರ್ಹತಾ ಪಟ್ಟಿಯಲ್ಲಿ ಸೇರಿಸಿತ್ತು. ಆದರೆ ಭಾರತದಿಂದ ಬ್ರಿಟನ್​ಗೆ ಪ್ರಯಾಣಿಸುವವರು ಲಸಿಕೆ ಪಡೆದುಕೊಂಡಿದ್ದರೂ 10 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯ ಎಂದು ಹೇಳಿತ್ತು. ಇದು ಭಾರತದ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ತಕ್ಕ ತಿರುಗೇಟು ನೀಡಿದೆ.

Last Updated : Oct 1, 2021, 6:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.