ETV Bharat / bharat

ಬಾತ್‌ರೂಂನಲ್ಲಿದ್ದ ಆ್ಯಸಿಡ್ ಕುಡಿದು ಮಗು ಸಾವು - ಈಟಿವಿ ಭಾರತ ಕನ್ನಡ ನ್ಯೂಸ್​​

ಆಟ ಆಡುತ್ತಿದ್ದಾಗ ಬಾತ್​ ರೂಂ​​ನಲ್ಲಿದ್ದ ಆ್ಯಸಿಡ್​ ಸೇವಿಸಿ ಮಗು ಸಾವನ್ನಪ್ಪಿದ ಘಟನೆ ಗುಜರಾತ್​ನಲ್ಲಿ ನಡೆದಿದೆ.

1-year-old-girl-died-of-drinking-acid-in-surat-gujarat
ಆಟವಾಡುತ್ತಿದ್ದಾಗ ಬಾತ್​ರೂಮ್​​ನಲ್ಲಿದ್ದ ಆ್ಯಸಿಡ್ ಕುಡಿದು ಹೆಣ್ಣು ಮಗು ಸಾವು
author img

By

Published : Apr 5, 2023, 6:18 PM IST

ಸೂರತ್ (ಗುಜರಾತ್​): ಮನೆಯ ಹೊರಗಡೆ ಆಟ ಆಡುತ್ತಿದ್ದ ಒಂದು ವರ್ಷದ ಹೆಣ್ಣು ಮಗು ಆ್ಯಸಿಡ್​ ಸೇವಿಸಿ ಮೃತಪಟ್ಟಿರುವ ದಾರುಣ ಘಟನೆ ಸೂರತ್​ನ ಲಿಂಬಾಯತ್​ ಎಂಬಲ್ಲಿ ನಡೆದಿದೆ. ಮೃತ ಮಗುವನ್ನು ಅಮಿನಾ ಶಾಹಿದ್​ ಮನ್ಸೂರಿ (1) ಎಂದು ಗುರುತಿಸಲಾಗಿದೆ.

ಮಾರ್ಚ್​ 30ರ ಗುರುವಾರ ಸಂಜೆ 7.30 ಸುಮಾರಿಗೆ ಘಟನೆ ನಡೆದಿದೆ. ಮಗುವಿನ ತಾಯಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದರು. ಮಗು ಮನೆಯ ಹೊರಗಡೆ ಆಟ ಆಡುತ್ತಿತ್ತು. ಆಟ ಆಡುತ್ತಲೇ ಹೊರಗಿದ್ದ ಸ್ನಾನಗೃಹಕ್ಕೆ ತೆರಳಿದ್ದು, ಅಲ್ಲಿದ್ದ ಬಾಟಲಿಯ ಮುಚ್ಚಳ ತೆಗೆದು ಆ್ಯಸಿಡ್ ಕುಡಿದಿದೆ. ಜೋರಾಗಿ ಅಳಲಾರಂಭಿಸಿದೆ. ತಕ್ಷಣ ಓಡಿ ಬಂದ ತಾಯಿ ಮಗುವನ್ನು ಆಸ್ಪತ್ರೆಗೆ ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಆರೋಗ್ಯ ತೀರಾ ಹದಗೆಟ್ಟಿತ್ತು. ವೈದ್ಯರು ಮಗುವಿನ ಪ್ರಾಣ ಉಳಿಸಲು ಎಷ್ಟೇ ಪ್ರಯತ್ನಪಟ್ಟರೂ ಏಪ್ರಿಲ್​ 4 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ನ್ಯೂ ಸಿವಿಲ್ ಆಸ್ಪತ್ರೆಯ ಡಾ. ಶೀತಲ್ ಮಾತನಾಡಿ, ಮಾರ್ಚ್​ 30ರಂದು ಘಟನೆ ನಡೆದಿದೆ. ಮಗುವಿನ ತಾಯಿ ಬೆಳಗ್ಗೆ ಸುಮಾರು 7.15ರ ವೇಳೆಗೆ ಆಟೋ ರಿಕ್ಷಾದಲ್ಲಿ ಮಗುವನ್ನು ಆಸ್ಪತ್ರೆಗೆ ಕರೆತಂದರು. ಅವರು ಆಸ್ಪತ್ರೆಯ ಹೊರಗಡೆ ಮಗು ಆ್ಯಸಿಡ್​ ಕುಡಿದಿರುವುದಾಗಿ ಜೋರಾಗಿ ಅಳಲು ಆರಂಭಿಸಿದರು. ಅಲ್ಲಿಗೆ ಧಾವಿಸಿದ ವೈದ್ಯರ ತಂಡ ತಕ್ಷಣ ಮಗುವಿಗೆ ಚಿಕಿತ್ಸೆ ನೀಡಲು ಆರಂಭಿಸಿತು. ಆದರೆ ಕಳೆದ ದಿನ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿತು ಎಂದು ಮಾಹಿತಿ ನೀಡಿದರು.

''ನಾನು ಮನೆಯಲ್ಲಿ ಅಡುಗೆ ಮಾಡುತ್ತಿದ್ದೆ. ನನ್ನ ಮಗಳು ಹೊರಗಡೆ ಆಡುತ್ತಿದ್ದಳು. ಆಟ ಆಡುತ್ತಿದ್ದಾಗ ಬಾತ್​ ರೂಮ್​​ಗೆ ತೆರಳಿದ್ದು, ಅಲ್ಲಿದ್ದ ಆ್ಯಸಿಡ್​ ಬಾಟಲಿ ತೆಗೆದು ಕುಡಿದಿದ್ದಾಳೆ. ಆ ಬಳಿಕ ಅಲ್ಲೇ ಜೋರಾಗಿ ಅಳಲು ಆರಂಭಿಸಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆ ತಂದಿದ್ದೇನೆ. ಆಸ್ಪತ್ರೆಯ ಇಡೀ ವೈದ್ಯರು ಮಗುವನ್ನು ಉಳಿಸಲು ಪ್ರಯತ್ನಪಟ್ಟರು. ಆದರೆ ಮಗು ಏಪ್ರಿಲ್​​ 4 ತಡರಾತ್ರಿ ಸಾವನ್ನಪ್ಪಿದೆ'' ಎಂದು ತಾಯಿ ನಜ್ಮಾ ಮನ್ಸೂರಿ ತಿಳಿಸಿದ್ದಾರೆ.

ಇದನ್ನೂ ಓದಿ : ರಸ್ತೆಯಲ್ಲಿ ಜೋರಾಗಿ ಹಾಡು ಹಾಕಿದ್ದನ್ನು ಪ್ರಶ್ನಿಸಿದ್ದೇ ತಪ್ಪಾಯ್ತು: ಟೆಕ್ಕಿಗಳಿಂದ ಥಳಿತ, ವ್ಯಕ್ತಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.