ETV Bharat / bharat

ಪ್ರಾಥಮಿಕ ಶಾಲೆಗಳು ಪುನಾರಂಭ... ಚಿಣ್ಣರಿಗೆ ಸ್ವಾಗತ ಕೋರಿದ ಗಜರಾಜ - ಮಕ್ಕಳನ್ನು ಬರ ಮಾಡಿಕೊಂಡ ಆನೆ

ಕರ್ನಾಟಕದಂತೆ ತಮಿಳುನಾಡಿನಲ್ಲೂ ಪ್ರಾಥಮಿಕ ಶಾಲೆಗಳು ಪುನಾರಂಭವಾಗಿದ್ದು, ಚಿಣ್ಣರಿಗೆ ಆನೆಯೊಂದು ಸ್ವಾಗತ ಕೋರಿದೆ.

student received a warm welcome, student received a warm welcome by an elephant, sivaganga school reopened, Tamilnadu school reopened news, ಪ್ರಾಥಮಿಕ ಶಾಲೆಗಳು ಆರಂಭ, ತಮಿಳುನಾಡಿನಲ್ಲಿ ಪ್ರಾಥಮಿಕ ಶಾಲೆಗಳು ಆರಂಭ, ಮಕ್ಕಳನ್ನು ಬರ ಮಾಡಿಕೊಂಡ ಆನೆ, ಶಾಲಾ ಮಕ್ಕಳನ್ನು ಬರ ಮಾಡಕೊಂಡ ಆನೆ,
ಮಕ್ಕಳಿಗೆ ಆತ್ಮೀಯ ಸ್ವಾಗತ ಕೋರಿದ ಗಜರಾಜ
author img

By

Published : Nov 2, 2021, 6:21 AM IST

ಶಿವಗಂಗಾ(ತಮಿಳುನಾಡು): ಕೊರೊನಾ ಹಿನ್ನೆಲೆ ಈವರೆಗೆ ಪ್ರಾಥಮಿಕ ಶಾಲೆಗಳನ್ನು ತೆರೆಯರಲು ಶಿಕ್ಷಣ ಇಲಾಖೆ ಹಿಂದೇಟು ಹಾಕಿತ್ತು. ಸೋಂಕಿನ ತೀವ್ರತೆ ಕಡಿಮೆಯಾದ ಹಿನ್ನೆಲೆ ಸೋಮವಾರದಿಂದ ತಮಿಳುನಾಡು ರಾಜ್ಯದಲ್ಲಿ 1 ರಿಂದ 8 ನೇ ತರಗತಿಗಳು ಪುನಾರಂಭವಾಗಿವೆ.

ಚಿಣ್ಣರಿಗೆ ಸ್ವಾಗತ ಕೋರಿದ ಗಜರಾಜ

ನಿನ್ನೆಯಿಂದ 1 ರಿಂದ 8ನೇ ತರಗತಿಯ ಭೌತಿಕ ಪಾಠ-ಪ್ರವಚನಗಳು ಆರಂಭವಾಗಿವೆ. ಬರೋಬ್ಬರಿಗೆ ಒಂದೂವರೆ ವರ್ಷಗಳ ನಂತರ ಭೌತಿಕ ತರಗತಿಗಳು ಪುನಾರಂಭವಾಗಿದ್ದು, ಶಾಲೆಗಳ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಎಚ್ಚರಿಕೆ ನೀಡಿದೆ.

ಶಾಲೆಗೆ ಆಗಮಿಸಿದ ಮಕ್ಕಳನ್ನು ಕಂಡು ಶಿಕ್ಷಕರು ಸಂತಸಗೊಂಡಿದ್ದಾರೆ. ಶಿವಗಂಗಾದಲ್ಲಿ ಶಾಲೆಗಳು ಪುನರಾರಂಭವಾಗುತ್ತಿದ್ದಂತೆ, 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳು ಅರುಲ್ಮಿಗು ಷಣ್ಮುಗನಾಥನ್ ದೇವಸ್ಥಾನದಿಂದ ಆನೆಯ ಮೂಲಕ ಆತ್ಮೀಯ ಸ್ವಾಗತ ಪಡೆದರು. ಗಣಪತಿಯ ಆಶೀರ್ವಾದ ಪಡೆದ ಮಕ್ಕಳು ಸಂತೋಷದಿಂದ ಶಾಲೆಗೆ ಬರುತ್ತಿರುವುದು ಕಂಡುಬಂತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.