ಚೆನ್ನೈ(ತಮಿಳುನಾಡು) : ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 90.5 ಲಕ್ಷ ರೂ. ಮೌಲ್ಯದ 1.8 ಕಿಲೋ ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ದೇವರ ಮುಂದೆ 500 ನೋಟು ಇಟ್ಟು ವೃದ್ಧೆಯ 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಎಗರಿಸಿದ ಅಪರಿಚಿತರು
ಆರೋಪಿಗಳನ್ನು ತಿರುಚ್ಚಿಯ ಅಲಿ ಸಿರಾಜುದ್ದೀನ್ (36), ಬಾಬು ಬಾದ್‌ಶಾ (20) ಮತ್ತು ಚೆನ್ನೈನ ಮೊಹಮ್ಮದ್ ಗಡಾಫಿ (49) ಎಂದು ಗುರುತಿಸಲಾಗಿದೆ. ಚಿನ್ನದ ಕಳ್ಳಸಾಗಣೆ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಸಂಗ್ರಹಿಸಲಾಗಿತ್ತು. ಅದರಂತೆ ಶೋಧನೆ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಮೊದಲು ತಮ್ಮ ತಪ್ಪನ್ನು ಒಪ್ಪಿಕೊಂಡಿರಲಿಲ್ಲ. ಪೊಲೀಸರ ಡ್ರಿಲ್ ಬಳಿಕ ಅಡಗಿಸಿಟ್ಟಿದ್ದ ಚಿನ್ನದ ಪೇಸ್ಟ್‌ನ ಕಟ್ಟುಗಳನ್ನು ಕೊಂಡೊಯ್ಯುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇದಕ್ಕೂ ಮುನ್ನ ಅನುಮಾನ ಬಂದಿದ್ದರಿಂದ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಅವರನ್ನು ಪ್ರತ್ಯೇಕ ಕೊಠಡಿಗಳಿಗೆ ಕರೆದೊಯ್ದು ಪರಿಶೀಲಿನೆ ನಡೆಸಿದ್ದಾರೆ.
ಇದನ್ನೂ ಓದಿ: ಅಕ್ರಮ ಚಿನ್ನಾಭರಣ ಸಾಗಣೆ: ಪ್ರಕರಣ ಗಂಭೀರವಾಗಿ ಪರಿಗಣಿಸಿದ ವಾಣಿಜ್ಯ ತೆರಿಗೆ ಅಧಿಕಾರಿಗಳು
ಬಂಧಿತರಿಂದ 1.8 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದೇವೆ. ಇದರ ಅಂತಾರರಾಷ್ಟ್ರೀಯ ಮೌಲ್ಯ 90.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮುಂದಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.