ETV Bharat / bharat

ದಂತೇವಾಡದಲ್ಲಿ ನಕ್ಸಲರಿಂದ ವಾಹನ ಸ್ಫೋಟ: ಓರ್ವ ಸಾವು, 11 ಮಂದಿಗೆ ಗಾಯ - ದಂತೇವಾಡ ಸ್ಪೋಟ

ಛತ್ತೀಸ್​ಗಢದ ದಂತೇವಾಡದ ಘೋಟಿಯಾ ಗ್ರಾಮದಲ್ಲಿ ಎಸ್‌ಯುವಿ ವಾಹನವನ್ನು ಮಾವೋವಾದಿಗಳು ಸ್ಫೋಟಿಸಿದ್ದು, ಓರ್ವ ಸಾವನ್ನಪ್ಪಿದ್ದರೆ, 11 ಮಂದಿ ಗಾಯಗೊಂಡಿದ್ದಾರೆ.

1 dead, 11 Injured As Maoists Blow Up SUV In Chhattisgarh
SUV ಸ್ಫೋಟಿಸಿದ ನಕ್ಸಲರು
author img

By

Published : Aug 5, 2021, 2:01 PM IST

ದಂತೇವಾಡ (ಛತ್ತೀಸ್​ಗಢ): ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಎಸ್‌ಯುವಿ ವಾಹನವನ್ನು ಮಾವೋವಾದಿಗಳು ಸ್ಫೋಟಿಸಿದ್ದಾರೆ. ಛತ್ತೀಸ್​ಗಢದ ದಂತೇವಾಡದ ಘೋಟಿಯಾ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು,11 ಮಂದಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮಸ್ಥರಿದ್ದ ಎಸ್‌ಯುವಿ ವಾಹನ ಸ್ಫೋಟಿಸಿದ ಮಾವೋವಾದಿಗಳು

ಕಾರಿನಲ್ಲಿ 12 ಮಂದಿ ಗ್ರಾಮಸ್ಥರಿದ್ದರು. ಇವರೆಲ್ಲಾ ನೆರೆಯ ತೆಲಂಗಾಣಕ್ಕೆ ಹೋಗುತ್ತಿದ್ದರು. ಭದ್ರತಾ ಪಡೆಗಳನ್ನು ಗುರಿಯಾಗಿಸಲು ನಕ್ಸಲರು ದಾಳಿ ನಡೆಸಿರಬಹುದೆಂದು ಶಂಕಿಸಲಾಗಿದೆ.

ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.