ETV Bharat / assembly-elections

ಬೇರೆಯವರಿಗೆ ಅವಕಾಶ ಮಾಡಿ ಕೊಡಿ ಎಂದ ಹೈಕಮಾಂಡ್​ ; ನಾನು ಚುನಾವಣೆಗೆ ನಿಂತೇ ನಿಲ್ಲುತ್ತೇನೆ ಎಂದ ಶೆಟ್ಟರ್​​ - ಯುಪಿ ಮಾಡಲ್​​ ಬಗ್ಗೆ ಪರೋಕ್ಷವಾಗಿ ಅಸಮಾಧಾನ

ಕಳೆದ 30 ವರ್ಷ‌ಗಳಿಂದ ನಾನೂ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ ಎಂದು ಹೈಕಮಾಂಡ್​ಗೆ ತಿಳಿಸಿದ್ದೇನೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್​ ಪರೋಕ್ಷವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ.

Jagadish Shettar
ಜಗದೀಶ ಶೆಟ್ಟರ್​
author img

By

Published : Apr 11, 2023, 5:39 PM IST

Updated : Apr 11, 2023, 7:14 PM IST

ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್​ ಮಾತನಾಡಿದರು

ಹುಬ್ಬಳ್ಳಿ: ಹಿರಿಯರಿದ್ದೀರಿ ನೀವು ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಹೈಕಮಾಂಡ್​ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅವರಿಗೆ ನಿರ್ದೇಶನ ನೀಡಿದೆ. ಈ ಬಗ್ಗೆ ಮಾಜಿ ಸಿಎಂ ಅವರೇ ಸ್ಪಷ್ಟನೆ ನೀಡಿದ್ದಾರೆ. ಗುಜರಾತ್​ ಮಾಡೆಲ್ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ಜಗದೀಶ್​ ಶೆಟ್ಟರ್​ ''ನನಗೆ ವರಿಷ್ಠರಿಂದ ಪೋನ್ ಬಂದಿದ್ದು ಸತ್ಯ. ನೀವು ಹಿರಿಯರಿದ್ದೀರಿ, ಬೇರೆಯವರಿಗೆ ಅವಕಾಶ ಕೊಡಿ ಎಂದು ನನಗೆ ಹೈಕಮಾಂಡ್​ ಹೇಳಿದೆ. ಕಳೆದ 30 ವರ್ಷ‌ಗಳಿಂದ ನಾನೂ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ ಎಂದು ಹೈಕಮಾಂಡ್​ಗೆ​ ತಿಳಿಸಿದ್ದೇನೆ'' ಎಂದಿದ್ದಾರೆ.

''ನೂರಾರು ಜನರಿಗೆ ಟಿಕೆಟ್ ಕೊಡುವ ಕೆಲಸ ನಾನೂ ಮಾಡಿದ್ದೇನೆ. ನನಗೆ ಟಿಕೆಟ್ ನೀಡಬಾರದು ಎನ್ನಲ್ಲಿಕ್ಕೆ ಕಾರಣ ಏನು? ಸರ್ವೆಯಲ್ಲಿ ಪಾಸಿಟಿವ್ ಇದೆ. ನನ್ನ ಮೇಲೆ ಕಪ್ಪು ಚುಕ್ಕೆ ಇಲ್ಲ. ಪಕ್ಷಕ್ಕೆ ರಾಯಲ್ ಆಗಿ ಕೆಲಸ ಮಾಡಿದ್ದೇನೆ. ರಾಯಲ್‌ ಆಗಿ ಕೆಲಸ ಮಾಡಿದ್ದಕ್ಕೆ ಈ ಶಿಕ್ಷೆ ಏನು? ಹೈಕಮಾಂಡ್​​​ ಹೇಳಿದ್ದಕ್ಕೆ ನನ್ನ ಮನಸ್ಸಿಗೆ ಬೇಜಾರಾಗಿದೆ ಎಂದರು. ನಾಮಪತ್ರ ಸಲ್ಲಿಸಲು ಇನ್ನೂ ಎರಡೂ ದಿನ ಸಮಯವಿದೆ. ಈಗ ಪೋನ್ ಮಾಡಿದರೆ ಏನ್ ಮಾಡಬೇಕು. ಬಂದು ಭೇಟಿಯಾಗಿ ಎಂದು ಹೇಳಿದ್ದಾರೆ. 'ಸರಿಯಾದ ಸ್ಥಾನಮಾನವನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ. ಪಕ್ಷದ ವರಿಷ್ಠರ ಮೇಲೆ ನನಗೆ ನಂಬಿಕೆ ಇದೆ. ಕಾದು ನೋಡಬೇಕಿದೆ‘‘ ಎಂದು ಜಗದೀಶ್ ಶೆಟ್ಟರ್ ತುಸು ಬೇಜಾರಿನಿಂದಲೇ ಸ್ಪಷ್ಟನೆ ಕೊಟ್ಟಿದ್ದಾರೆ.

ಈಶ್ವರಪ್ಪ ಸ್ಟ್ಯಾಂಡ್ ಬೇರೆ, ನನ್ನ ಸ್ಟ್ಯಾಂಡ್ ಬೇರೆ: ಮುಂದುವರಿದು ಮಾತನಾಡಿದ ಅವರು, ಈಶ್ವರಪ್ಪ ಸ್ಟ್ಯಾಂಡ್ ಬೇರೆ, ನನ್ನ ಸ್ಟ್ಯಾಂಡ್ ಬೇರೆ, ನಾನು ಸ್ಪರ್ಧೆ ಮಾಡುತ್ತೇನೆ. ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬರ್ತೆನಿ. ಶೆಟ್ಟರ್ ರಾಜಕಾರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಾನು ಇನ್ನೂ ಹತ್ತು ವರ್ಷಗಳ ಸಕ್ರೀಯ ರಾಜಕಾರಣದಲ್ಲಿ ಇರ್ತೆನಿ. ನೂರಾರು ಜನರಿಗೆ ಟಿಕೆಟ್‌ ಕೊಟ್ಟಿದ್ದೇನೆ. ಪಕ್ಷವನ್ನ ಸಂಘಟನೆ ಮಾಡಿದ್ದೇನೆ. ನನಗೆ ಈ ರೀತಿ ಆಗಿದ್ದು ಮನಸ್ಸಿಗೆ ನೋವಾಗಿದೆ ಎಂದು ಮಾಜಿ ಸಿಎಂ ಶೆಟ್ಟರ್​ ಬೇಸರ ವ್ಯಕ್ತಪಡಿಸಿದರು.

ನನ್ನ ಮೈನಸ್​ ಪಾಯಿಂಟ್​ ಏನು ಹೇಳಿ- ಹೈಕಮಾಂಡ್​ಗೆ ಶೆಟ್ಟರ್​ ಪ್ರಶ್ನೆ: ನಾನು ಸ್ಪರ್ಧೆ ಮಾಡುತ್ತೇನೆ, ನನಗೆ ಟಿಕೆಟ್ ತಪ್ಪಿಸಲಿಕ್ಕೆ ಮೈನಸ್ ಪಾಯಿಂಟ್ ಹೇಳಿ. ಇನ್ನೂ ಇದುವರೆಗೂ ಅಭ್ಯರ್ಥಿಗಳ ಘೋಷಣೆ ಆಗಿಲ್ಲ. ನಾನೇ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೇನಿ. ನಾನು ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಜನರು ನನಗೆ ಪ್ರೀತಿ ವಿಶ್ವಾಸ ಇಟ್ಟಿದ್ದಾರೆ‌. ನಾನು ಸ್ಪರ್ಧೆ ಮಾಡುತ್ತೇನೆ, ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬರ್ತೆನಿ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೊಮ್ಮೆ ಅವಕಾಶ ನೀಡುವಂತೆ ಮನವಿ: ಹೈಕಮಾಂಡ್ ತನ್ನ ನಿಲುವು ಬದಲಿಸಿ, ಮತ್ತೊಮ್ಮೆ ಅವಕಾಶ ಕೊಡುವಂತೆ ಮನವಿ ಮಾಡಿದ್ದೇವೆ.‌ ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವದಾಗಿ ಹೈಕಮಾಂಡ್ ಹೇಳಿದೆ. ನಾಳೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ಕೊನೆ ದಿನ ಈ ರೀತಿ ಪೋನ್ ಮಾಡಿದ್ದು, ಮನಸ್ಸಿಗೆ ಆಘಾತ ತಂದಿದೆ ಎಂದು ಶೆಟ್ಟರ್​ ಅಸಮಾಧಾನ ವ್ಯಕ್ತಪಡಿಸಿದರು.

ವ್ಯತರಿಕ್ತ ತೀರ್ಮಾನ ಬಂದ್ರೆ ನಿಮ್ಮ ಮುಂದೆ ಬಂದು ನನ್ನ ತೀರ್ಮಾನ ಹೇಳುತ್ತೇನೆ. ನಾನು ಚುನಾವಣೆಗೆ ನಿಂತೇ ನಿಲ್ಲುತ್ತೇನೆ.‌ ಇನ್ನು 10 ವರ್ಷ ರಾಜಕೀಯದಲ್ಲಿ ಇರುತ್ತೇನೆ ಎಂದು ಹೈಕಮಾಂಡ್​​ಗೆ ಶೆಟ್ಟರ್​ ಟಾಂಗ್ ಕೊಟ್ಟರು.

ಇದನ್ನೂ ಓದಿ: ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ..! ನಡ್ಡಾಗೆ ಪತ್ರ

Last Updated : Apr 11, 2023, 7:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.