ETV Bharat / assembly-elections

ಕಾಂಗ್ರೆಸ್​ನ ಸೋಲಿಲ್ಲದ ಸರದಾರನಿಗೆ ಸೋಲಿನ ರುಚಿ ತೋರಿಸಲು ಜೆಡಿಎಸ್ - ಬಿಜೆಪಿ ತಂತ್ರ!

ಇಂಡಿ ಮತಕ್ಷೇತ್ರದಲ್ಲಿ ಈ ಬಾರಿ ಮತ್ತೆ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್​ನ ಹಾಲಿ ಶಾಸಕರ ಗೆಲುವಿಗೆ ಈ ಬಾರಿ ಪ್ರತಿರೋಧವಾಗಿ ಬಿಜೆಪಿ ಮತ್ತು ಜೆಡಿಎಸ್​ ಪ್ರಬಲ ಅಭ್ಯರ್ಥಿಗಳು ಪೈಪೋಟಿ ನೀಡಲಿದ್ದಾರೆ ಎಂಬ ಮಾತುಗಳಿವೆ.

Indi Assembly constituency profile
Indi Assembly constituency profile
author img

By

Published : Apr 13, 2023, 2:33 PM IST

Updated : Apr 13, 2023, 2:57 PM IST

ವಿಜಯಪುರ: ಇಂಡಿ ಮತಕ್ಷೇತ್ರದಲ್ಲಿ ಚುನಾವಣೆ ಜೋರಾಗಿದೆ. ಭೀಮಾತೀರದ ಮತಕ್ಷೇತ್ರ ಎಂದು ಖ್ಯಾತಿ ಪಡೆದಿರುವ ಇಲ್ಲಿ ಕೆಲವೊಮ್ಮೆ ಅತಿವೃಷ್ಟಿ ಇನ್ನೊಮ್ಮೆ ಅನಾವೃಷ್ಠಿ ಸಾಮಾನ್ಯ. ಸದ್ಯ ಈ ಕ್ಷೇತ್ರದಲ್ಲಿ ರಾಜಕೀಯ ರಂಗು ಪಡೆದಿದೆ. ಕಾಂಗ್ರೆಸ್​​ನಿಂದ ಹಾಲಿ ಶಾಸಕ ಯಶವಂತರಾಯಗೌಡ ಪಾಟೀಲ್​ಗೆ ಟಿಕೆಟ್​ ನೀಡಿದರೆ, ಬಿಜೆಪಿಯಿಂದ ಕಾಸುಗೌಡ ಬಿರಾದಾರ್​ ಅವರಿಗೆ ಟಿಕೆಟ್​ ನೀಡಲಾಗಿದೆ. ಜೆಡಿಎಸ್​ ಪಕ್ಷ ಬಿ.ಡಿ. ಪಾಟೀಲ್​ ಅವರನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದೆ. ಹಾಗಾಗಿ ಕ್ಷೇತ್ರದ ಕಾತುರತೆ ಏರ ತೋಡಗಿದೆ.

Indi Assembly constituency profile
ಶಾಸಕ ಯಶವಂತರಾಯಗೌಡ ಪಾಟೀಲ್​

ಇಂಡಿ ಮತಕ್ಷೇತ್ರದಲ್ಲಿ ಪೈಪೋಟಿ: ಯಶವಂತರಾಯಗೌಡ ಪಾಟೀಲ್​ಗೆ ಈ ಬಾರಿ ಗೆಲುವು ಪ್ರತಿಷ್ಠೆಯಾಗಿದೆ. ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ್​ ಕೂಡ ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿದ್ದಾರೆ. ಇದರ ನಡುವೆ ಕಳೆದ ಬಾರಿ ಅತೀ ಕಡಿಮೆ ಮತದಿಂದ ಸೋತಿರುವ ಜೆಡಿಎಸ್ ಅಭ್ಯರ್ಥಿ ಬಿ.ಡಿ. ಪಾಟೀಲ್ ಕೂಡ​, ಈ ಬಾರಿ ತಮ್ಮನ್ನು ಮತದಾರ ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂಬ ವಿಶ್ವಾಸದಲ್ಲಿದ್ದಾರೆ. ಆಪ್​ನಿಂದ ಗೋಪಾಲ್ ಆರ್​ ಪಾಟೀಲ್​ ಎಂಬುವರು ಕಣಕ್ಕಿಳಿಯುತ್ತಿದ್ದು, ಕ್ಷೇತ್ರದ ಮತದಾರರ ಯಾರಿಗೆ ವಿಜಯದ ಮಾಲೆ ಹಾಕಲಿದ್ದಾನೆ ಅನ್ನೋದನ್ನು ಕಾದು ನೋಡಬೇಕಿದೆ ಎನ್ನುತ್ತಿದ್ದಾರೆ ಸ್ಥಳೀಯ ರಾಜಕೀಯ ಚಿಂತಕರು.

Indi Assembly constituency profile
ಕಾಸುಗೌಡ ಬಿರಾದಾರ್

ಮತಕ್ಷೇತ್ರದ ವೈಶಿಷ್ಟ್ಯ: ಇಂಡಿ ಮತಕ್ಷೇತ್ರ ವಿವಿಧ ಕಾರಣಗಳಿಂದ ಪ್ರಾಮುಖ್ಯತೆ ಪಡೆದುಕೊಂಡ ಕ್ಷೇತ್ರ. ರಾಜಕೀಯವಾಗಿ ಕಾಂಗ್ರೆಸ್​ ಮತ್ತು ಬಿಜೆಪಿ ಹೆಚ್ಚು ಕಡಿಮೆ ಸಮಬಲ ಪ್ರಾಬಲ್ಯ ಹೊಂದಿದ್ದರಿಂದ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಯಶವಂತರಾಯಗೌಡ ಪಾಟೀಲ್ ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಮಿನಿ‌ ವಿಧಾನಸೌಧ ನಿರ್ಮಾಣ, ಮೆಗಾ ಮಾರುಕಟ್ಟೆ, ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ, ಭೀಮಾ ಶಂಕರ ಸಕ್ಕರೆ ಕಾರ್ಖಾನೆ ಆರಂಭ, ರೋಡಗಿ - ಉಡಚಾಣ ಬ್ರಿಡ್ಜ್​ ನಿರ್ಮಾಣ, ಶಾಶ್ವತ ಕುಡಿವ ನೀರಿನ ಯೋಜನೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಾಗಿದ್ದರೂ ಕೆಲವು ವಿಚಾರವಾಗಿ ಅಪಸ್ವರ ಕೇಳಿ ಬರುತ್ತಿವೆ.

Indi Assembly constituency profile
ಶಾಸಕ ಯಶವಂತರಾಯಗೌಡ ಪಾಟೀಲ್​

ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಇಂಡಿ ಧೂಳಾಪುರವಾಗಿ ಮಾರ್ಪಟ್ಟಿದೆ. ಮತ ಕ್ಷೇತ್ರದ ಹಲವು ಹಳ್ಳಿಗಳಿಗೆ ಸರಿಯಾದ ರಸ್ತೆಗಳಿಲ್ಲ. ಕೆಲವೆಡೆ ಕುಡಿಯುವ ನೀರಿನ‌ ಸಮಸ್ಯೆ ಇದೆ. ಇನ್ನೂ ಕೆಲವೊಮ್ಮೆ ಭೀಮಾ‌ನದಿಯ ಪ್ರವಾಹಕ್ಕೆ ಜನರು ತುತ್ತಾಗುತ್ತಾರೆ. ಅವರಿಗೆ ಶಾಶ್ವತ ಪರಿಹಾರಬೇಕು ಎಂಬುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಈ ಬೇಡಿಕೆಗಳನ್ನೇ ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್​ ಅಭ್ಯರ್ಥಿ ಈ ಬಾರಿ ಮತಬೇಟೆ ಆರಂಭಿಸಿವೆ.

ಈ ಬಾರಿ ಯಶವಂತರಾಯಗೌಡ ಪಾಟೀಲ್​ಗೆ ಗೆಲುವು ಅಷ್ಟು ಸುಲಭವಲ್ಲ. ಯಾಕೆಂದರೆ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ದಯಾಸಾಗರ ಪಾಟೀಲ್​ ಅವರ ಹೆಸರನ್ನು ಕೊನೆಯ ಘಳಿಗೆಯಲ್ಲಿ ಬಿಜೆಪಿ ಘೋಷಣೆ ಮಾಡಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಗಲು ಕಾರಣವಾಯಿತು. ಈ ಬಾರಿ ರಾಜಕಾರಣ ಬದಲಾಗಿದೆ. ಜೊತೆಗೆ ಜೆಡಿಎಸ್ ಅಭ್ಯರ್ಥಿಯಾದ ಬಿ.ಡಿ‌. ಪಾಟೀಲ್​ ಪರ ಅನುಕಂಪದ ಅಲೆ ಕೂಡ ಹೆಚ್ಚಾಗಿದೆ. ಹೀಗಾಗಿ ಹಾಲಿ ಶಾಸಕರಿಗೆ ಗೆಲುವು ಅಷ್ಟೊಂದು ಸುಲಭವಲ್ಲ ಎನ್ನುವುದು ಮತದಾರರ ಅಭಿಪ್ರಾಯವಾಗಿದೆ.

Indi Assembly constituency profile
ಇಂಡಿ ಮತಕ್ಷೇತ್ರದ ವಿವರ

ಒಟ್ಟು ಮತದಾರರು: ಇಂಡಿ ಮತಕ್ಷೇತ್ರದಲ್ಲಿ ಒಟ್ಟು 2,37,397 ಮತದಾರರಿದ್ದಾರೆ. ಇದರಲ್ಲಿ 1,22,997 ಪುರುಷ ಮತದಾರರು, 1,14,381 ಮಹಿಳಾ ಮತದಾರರು, 18 ಇತರ ಮತದಾರರ ಸಂಖ್ಯೆ ಇದೆ. ಲಿಂಗಾಯತ, ಬಣಜಿಗ, ಕುರುಬ, ಗಾಣಿಗ ಸಮಮುದಾಯ ಇಲ್ಲಿ ನಿರ್ಣಾಯಕ.

ಕಳೆದ ಬಾರಿಯ ಚುನಾವಣಾ ಫಲಿತಾಂಶ: 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ್​ 50,401 ಮತ ಪಡೆದು ಕ್ಷೇತ್ರದ ಶಾಸಕರಾಗಿದ್ದರು. ಇವರ ಪ್ರತಿಸ್ಪರ್ಧಿಯಾದ ಜೆಡಿಎಸ್​ನ ಬಿ.ಡಿ. ಪಾಟೀಲ್​ 40,463 ಮತ ಪಡೆದು ಎರಡನೇ ಸ್ಥಾನಕ್ಕೆ ಕುಸಿದಿದ್ದರು. ಬಿಜೆಪಿ ಅಭ್ಯರ್ಥಿ ದಯಾಸಾಗರ ಪಾಟೀಲ್ 33,000 ಮತ ಮೂರನೇ ಸ್ಥಾನಕ್ಕೆ ಇಳಿದಿದ್ದರು. ಯಶವಂತರಾಯಗೌಡ ಪಾಟೀಲ್ ಈ ಚುನಾವಣೆಯಲ್ಲಿ 9,938 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಆರಂಭಿಕ ಶೂರತ್ವ ತೋರಿಸಿ ಕೇವಲ 160 ಅಭ್ಯರ್ಥಿಗಳ ಘೋಷಿಸಿದೆ: ಸಿಎಂ ಬೊಮ್ಮಾಯಿ

Last Updated : Apr 13, 2023, 2:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.