ETV Bharat / assembly-elections

ನಮ್ಮ ರಿಪೋರ್ಟ್ ಕಾರ್ಡ್ ಇಟ್ಟು ಮತ ಕೇಳುತ್ತೇವೆ: ಮುಖ್ಯಮಂತ್ರಿ ಬೊಮ್ಮಾಯಿ - ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರ ಉದ್ಘಾಟಿಸಲಾಗಿದೆ. ಇದೇ ವೇಳೆ ಬಿಜೆಪಿ ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಲಾಯಿತು.

bjp
ಬಿಜೆಪಿಯ ರಾಜ್ಯ ಮಾಧ್ಯಮ ಕೇಂದ್ರಕ್ಕೆ ಚಾಲನೆ
author img

By

Published : Apr 3, 2023, 12:19 PM IST

Updated : Apr 3, 2023, 1:32 PM IST

ಬಿಜೆಪಿಯ ರಾಜ್ಯ ಮಾಧ್ಯಮ ಕೇಂದ್ರಕ್ಕೆ ಚಾಲನೆ

ಬೆಂಗಳೂರು: ನಾವು ಈ ಬಾರಿ ಜನರ ಮುಂದೆ ನೆಗೆಟಿವ್ ಮ್ಯಾಂಡೇಟ್ ಕೇಳುತ್ತಿಲ್ಲ, ಪಾಸಿಟಿವ್ ಮ್ಯಾಂಡೇಟ್ ಕೇಳುತ್ತಿದ್ದೇವೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎನ್ನುವುದು ಕೇವಲ ಊಹೆ ಮಾತ್ರ. ಸಮೀಕ್ಷೆ ನಡೆಸಿರುವ ಸಂಸ್ಥೆಗಳೂ ಇದೇ ಮನಸ್ಥಿತಿಯಲ್ಲಿವೆ. ಆದರೆ ವಾಸ್ತವವೇ ಬೇರೆಯೇ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಮಲ್ಲೇಶ್ವರಂನಲ್ಲಿಂದು ಬಿಜೆಪಿಯ ರಾಜ್ಯ ಮಾಧ್ಯಮ ಕೇಂದ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಚಾಲನೆ ನೀಡಿ, ಬಿಜೆಪಿ ಪ್ರಚಾರ ಗೀತೆ ಬಿಡುಗಡೆ ಮಾಡಿದರು. ನಂತರ ನೂತನ ಮಾಧ್ಯಮ ಕೇಂದ್ರದಲ್ಲಿ ಮೊದಲ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿಎಂ, ಜನರ ಮುಂದೆ ಪ್ರತಿಪಕ್ಷಗಳ ವೈಫಲ್ಯದ ವಿಚಾರ ಇಟ್ಟು ಅದರ ಲಾಭ ಮಾಡಿಕೊಳ್ಳುವುದಿಲ್ಲ. ನಕಾರಾತ್ಮಕ ರಾಜಕಾರಣ ಮಾಡಲ್ಲ, ನಮ್ಮ ಅಭಿವೃದ್ಧಿ ಕಾರ್ಯಸೂಚಿಯನ್ನು ಜನರ ಮುಂದಿಟ್ಟುಕೊಂಡು ಮತ ಯಾಚಿಸುತ್ತೇವೆ. ನಮ್ಮ ರಿಪೋರ್ಟ್ ಕಾರ್ಡ್ ಇಟ್ಟು ಚುನಾವಣೆ ಎದುರಿಸುತ್ತೇವೆ ಎಂದರು.

ಬಿಜೆಪಿಯ ರಾಜ್ಯ ಮಾಧ್ಯಮ ಕೇಂದ್ರಕ್ಕೆ ಚಾಲನೆ

ಕಾಂಗ್ರೆಸ್ ಆಡಳಿತದಲ್ಲಿ ಧರ್ಮ ವಿಭಜನೆ, ಕೋಮುಗಲಭೆ ಆಯಿತು, ಅದೆಲ್ಲಾ ನಮ್ಮ ಅವಧಿಯಲ್ಲಿ ಆಗಿಲ್ಲ, ಕಾಂಗ್ರೆಸ್ ಆಡಳಿತದ ವೇಳೆ ಕಾನೂನು ಸುವ್ಯವಸ್ಥಿತ ಸಂಪೂರ್ಣ ಹದಗೆಟ್ಟಿತ್ತು, ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿತ್ತು. ಕೋವಿಡ್ ಇಲ್ಲದಾಗಲೂ ದಾಖಲೆ ಸಾಲ ಸಿದ್ದರಾಮಯ್ಯ ಮಾಡಿದ್ದರು, ಅದು ಕರಾಳ ದಿನ, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಕಾಲದಲ್ಲಿ 50 ಕ್ಕೂ ಹೆಚ್ಚು ಹಗರಣವಾಯಿತು. ಎಸಿಬಿಯಲ್ಲಿ ಎಲ್ಲದಕ್ಕೂ ಬಿ ರಿಪೋರ್ಟ್ ಹಾಕಲಾಯಿತು.

ಲೋಕಾಯುಕ್ತ ಅಧಿಕಾರ ಮೊಟಕು ಮಾಡಿ ಎಸಿಬಿ ರಚಿಸಿ ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಇಲ್ಲ ಎಂದು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಲಾಯಿತು. ಆದರೆ ನಾವು ಲೋಕಾಯುಕ್ತ ತಂದಿದ್ದೇವೆ, ಭ್ರಷ್ಟಾಚಾರದ ವಿಷಯದಲ್ಲಿ ರಾಜಿ ಇಲ್ಲ, ಕಾಂಗ್ರೆಸ್ ಅವಧಿಯಲ್ಲಿ ಲೋಕಾಯುಕ್ತ ಇದ್ದಿದ್ದರೆ ಇಂತಹ 50 ಕೇಸ್ ಆಗುತ್ತಿದ್ದವು ಎಂದು ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖಿಸದರು. ಹಾಗೆಯೇ ಸಮಾಜ ಸ್ವಚ್ಛ ಮಾಡುವ ಕೆಲಸ ಆಗಬೇಕು, ರಾಜಕೀಯ ಕಾರಣಕ್ಕೆ ಆರೋಪ ಮಾಡಬಾರದು, ಇವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳಿಗೆ ಸಿಎಂ ಟಾಂಗ್ ನೀಡಿದರು.

ನಾವು ಕ್ರಿಯಾಶೀಲ, ಬಡವರ, ದೀನದಲಿತ, ಹೆಣ್ಣುಮಕ್ಕಳು, ಯುವಕರು, ದುಡಿಯುವ ಸಮುದಾಯದ ಪರ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಎಲ್ಲ ವರ್ಗ ಬಿಜೆಪಿ ಕಡೆ ನೋಡುತ್ತಿದ್ದಾರೆ. ಮೋದಿ ಸರ್ಕಾರ, ನಮ್ಮ ಆಡಳಿತ ಮೆಚ್ಚಿ ನಮಗೆ ಅವಕಾಶ ನೀಡಿದಲ್ಲಿ ಜನರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಾಣಕ್ಕೆ ಬದ್ದರಿದ್ದೇವೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಲ್ಲಿ 1 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಯೋಜನೆ ರೂಪಿಸಿದ್ದೇವೆ. ಇನ್ನಷ್ಟು ಶಕ್ತಿಶಾಲಿ ಕರ್ನಾಟಕ, ರೈತರಿಗೆ ಸದೃಢ ಸಮೃದ್ಧ ಕೊಡುವ ಕರ್ನಾಟಕ ನಿರ್ಮಾಣ ಮಾಡಲು ನಾವು ಬದ್ದರಿದ್ದೇವೆ ಎನ್ನುವ ಭರವಸೆ ನೀಡಿದರು.

ಮೀಸಲಾತಿ ಕುರಿತು ಮಾತನಾಡಿದ ಸಿಎಂ, ಬಂಜಾರ ಸಮುದಾಯದವರನ್ನು ಕರೆದು ಮಾತುಕತೆ ನಡೆಸಲಾಗುತ್ತದೆ. ಸದಾಶಿವ ಆಯೋಗದ ವರದಿ ಮೂಲಕ ನಮ್ಮನ್ನು ಎಸ್ಸಿ ಪಟ್ಟಿಯಿಂದ ಹೊರಗಿಡಲಾಗುತ್ತದೆ ಎನ್ನುವ ಆತಂಕ ಅವರದ್ದು, ಆದರೆ ಅವರನ್ನು ತೆಗೆಯುವ ಪ್ರಶ್ನೆಯೇ ಇಲ್ಲ, ಸದಾಶಿವ ಆಯೋಗದ ವರದಿ ಬಿಟ್ಟು ನಮ್ಮ ಸಚಿವ ಸಂಪುಟ ಉಪ ಸಮಿತಿ ರಚಿಸಿ ಅದರ ವರದಿಯಂತೆ ಎಸ್ಸಿಯಲ್ಲೇ ಮುಂದುವರೆಸಲಾಗಿದೆ. ತಪ್ಪು ತಿಳುವಳಿಕೆಯಿಂದ ಈ ರೀತಿ ಆಗಿದೆ. ಕಾಂಗ್ರೆಸ್ ನಾಯಕರು ಈ ರೀತಿ ಮಾಡುತ್ತಿದ್ದಾರೆ, ಅದನ್ನು ರಾಜಕೀಯವಾಗಿ ಎದುರಿಸಲಾಗುತ್ತದೆ ಎಂದರು.

ಯಾವುದೇ ರಾಜ್ಯದ ಚುನಾವಣೆ ಆರಂಭದಲ್ಲಿ ಆಡಳಿತ ವಿರೋಧಿ ಅಲೆ ಇರಲಿದೆ ಎನ್ನುವ ವಾತಾವರಣ ಸಹಜ, ಆ ಮನಸ್ಥಿತಿ ಮೊದಲಿನಿಂದಲೂ ಬೆಳೆದು ಬಂದಿದೆ. ಆದರೆ ಮೋದಿ ಆಡಳಿತ ಬಂದ ನಂತರ ಆಡಳಿತ ಪೂರಕ ವಾತಾವರಣ ಇದೆ ಎನ್ನುವುದು ಸಾಬೀತಾಗಿದೆ. ಖಾಸಗಿ ಸಂಸ್ಥೆಗಳ ಸಮೀಕ್ಷೆಗಳು ಏನೇ ಇದ್ದರೂ ಗ್ರೌಂಡ್ ರಿಪೋರ್ಟ್ ಸ್ಪಷ್ಟವಿದೆ ಎಂದು ತಿಳಿಸಿದರು.

ಶಿಗ್ಗಾವಿಯಿಂದಲೇ ಸ್ಪರ್ಧೆ: ನನ್ನ ಕ್ಷೇತ್ರ ಶಿಗ್ಗಾವಿ, ನಾನು ಅಲ್ಲೇ ಸ್ಪರ್ಧೆ ಮಾಡುತ್ತೇನೆ ಎನ್ನುವ ಮೂಲಕ ಸುರಕ್ಷಿತ ಕ್ಷೇತ್ರಗಳ ಹುಡುಕಾಟದ ಸುದ್ದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ‌ ಅಲ್ಲಗಳೆದರು. ಇನ್ನು ಎರಡು ದಿನದಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಪಟ್ಟಿ ಅಂತಿಮಗೊಳಿಸಿ ಹೈಕಮಾಂಡ್​ಗೆ ಕಳುಹಿಸಿಕೊಡಲಾಗುತ್ತದೆ. ಸಂಸದೀಯ ಮಂಡಳಿ ಸಭೆಯಲ್ಲಿ ಟಿಕೆಟ್ ಆಯ್ಕೆ ಅಂತಿಮವಾಗಲಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಬಿಜೆಪಿ ಇಡೀ ವಿಶ್ವದಲ್ಲೇ ಅತಿ ದೊಡ್ಡ ಪಕ್ಷ, ಅತಿ ಹೆಚ್ಚು ಸದಸ್ಯರಿರುವ ಪಕ್ಷ, ರಾಜ್ಯದಲ್ಲೂ ಬಹಳ ಆಳವಾಗಿ ಬೇರೂರಿರುವ ರಾಜ್ಯಾದ್ಯಂತ ವ್ಯಾಪಕವಾಗಿ ಹರಡಿ ಮನೆ ಮನೆಗೂ ತಲುಪಿದೆ. ಉತ್ತಮ ಸಂಘಟನೆ, ಸೈದ್ದಾಂತಿಕ ವಿಚಾರವನ್ನು ಒಳಗೊಂಡ ಪಕ್ಷ, ರಾಜ್ಯದಲ್ಲಿ ಬಿಜೆಪಿ ಬೆಳೆದು ಬಂದಿದ್ದಕ್ಕೆ ತನ್ನದೇ ಆದ ಇತಿಹಾಸ ಹೊಂದಿದೆ. ನಾಲ್ಕು ಸದಸ್ಯರ ಜನಸಂಘದಿಂದ ಆರಂಭಗೊಂಡು ಬಿಜೆಪಿ ಆದಾಗ ಇಬ್ಬರೇ ಸದಸ್ಯರು, ಅದರಲ್ಲಿ ಒಬ್ಬರು ಪಕ್ಷ ತೊರೆದಾಗ ಯಡಿಯೂರಪ್ಪ ಏಕಾಂಗಿಯಾಗಿ ಹೋರಾಟ ನಡೆಸಿದ್ದು ಪಕ್ಷದ ಬೆಳವಣಿಗೆಗೆ ಭದ್ರ ಬುನಾದಿಯಾಯಿತು.

ಒಬ್ಬರೇ ಇದ್ದರೂ ಹೋರಾಟ ಮಾಡಿ ಜನಮಾನಸದಲ್ಲಿ ಪಕ್ಷದ ಸೈದ್ದಾಂತಿಕ ವಿಚಾರ ಬಿತ್ತುವಲ್ಲಿ ಯಡಿಯೂರಪ್ಪ ಸಫಲರಾದರು. ಅವರ ನೇತೃತ್ವದಲ್ಲಿ ಪಕ್ಷ ಬೆಳವಣಿಗೆ ಕಂಡಿತು, ಅನಂತ್ ಕುಮಾರ್ ಕೊಡುಗೆಯೂ ಇದೆ. 2006-08 ಸಮ್ಮಿಶ್ರ ಸರ್ಕಾರ, 2008-2013 ರವರೆಗೆ ಹಲವು ಯೋಜನೆ, ಜನಪರ ಕಾರ್ಯದಿಂದ ಪ್ರಾರಂಭವಾಗಿ ರೈತರಿಗೆ ವಿಶೇಷ ಬಜೆಟ್ ಕೊಟ್ಟ ಪಕ್ಷ, 2004-14 ರ ಯುಪಿಎ ಸರ್ಕಾರ ದೇಶದ ಆಡಳಿತ ಸಂಪೂರ್ಣ ಹದಗೆಡಿಸಿ ಅಸ್ತಿರತೆ ಸೃಷ್ಟಿಸಿತು.

ಆದರೆ, 2014 ರಲ್ಲಿ ಮೋದಿ ಮೂಲಕ ಬಿಜೆಪಿ ಸರ್ಕಾರ ಬಹಳ ದೊಡ್ಡ ಬದಲಾವಣೆ ತಂದಿತು. ಪ್ರತಿಯೊಬ್ಬ ನಾಗರಿಕನಿಗೂ ಆತ್ಮವಿಶ್ವಾಸ ಮೂಡಿದೆ, ಸುರಕ್ಷಿತವಾಗಿದ್ದೇವೆ ಎನ್ನುವ ವಾತಾವರಣ ಬಂದಿದೆ ಎಂದು ಬಿಜೆಪಿ ನಡೆದು ಬಂದ ಹಾದಿ ಕುರಿತು ವಿವರ ನೀಡಿದರು. ಯಡಿಯೂರಪ್ಪರವರು ಸಮರ್ಥವಾಗಿ ಕೋವಿಡ್ ವೇಳೆ ಕೆಲಸ ಮಾಡಿದರು, ಮೋದಿ ವ್ಯಾಕ್ಸಿನ್, ಯಡಿಯೂರಪ್ಪ ಪರಿಶ್ರಮದಿಂದ ಕೋವಿಡ್ ನಿಂದ ನಾವು ಚೇತರಿಸಿಕೊಂಡಿದ್ದು, ನನ್ನ ಪರಿಶ್ರಮವೂ ಸೇರಿ ಅಭಿವೃದ್ಧಿಯತ್ತ ರಾಜ್ಯ ಸಾಗುತ್ತಿದೆ ಎಂದು ತಮ್ಮ ಪಕ್ಷವನ್ನು ಮುಖ್ಯಮಂತ್ರಿ ಬೊಮ್ಮಾಯಿ ಸಮರ್ಥಿಸಿಕೊಂಡರು.

ಇದನ್ನೂ ಓದಿ: ಮಾಸ್ ಲೀಡರ್​​ಗಳ ಕೊರತೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್​​ಗೆ 'ಮಾಜಿ ಸಿಎಂ'ಗಳೇ ಪಿಲ್ಲರ್!

Last Updated : Apr 3, 2023, 1:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.