ETV Bharat / assembly-elections

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗದ್ದುಗೆ ಗುದ್ದಾಟಕ್ಕೆ ಅಖಾಡ ಸಿದ್ಧ: ರಾಜ್ಯದ ಹೈವೋಲ್ಟೇಜ್ ಕ್ಷೇತ್ರದ ಚಿತ್ರಣ ಇಲ್ಲಿದೆ - ರಾಜ್ಯದ ಹೈವೋಲ್ಟೇಜ್ ಕ್ಷೇತ್ರದ ಚಿತ್ರಣ

ಬೆಳಗಾವಿ ಗ್ರಾಮೀಣ ಮತಕ್ಷೇತ್ರ ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು. ಸದ್ಯ ಕ್ಷೇತ್ರದಲ್ಲಿ ಗದ್ದುಗೆ ಗುದ್ದಾಟಕ್ಕೆ ಅಖಾಡ ಸಿದ್ಧಗೊಂಡಿದ್ದು ಎಲ್ಲ ರಾಜಕೀಯ ಪಕ್ಷಗಳು ಭರದ ಪ್ರಚಾರದಲ್ಲಿ ತೊಡಗಿವೆ. ಕಾಂಗ್ರೆಸ್‍ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆ ಖಚಿತವಾಗಿದ್ದರೆ ಬಿಜೆಪಿಯಲ್ಲಿ ಟಿಕೆಟ್​ ಆಕಾಂಕ್ಷಿಗಳು ಹೆಚ್ಚಿರುವ ಹಿನ್ನೆಲೆ ಪೈಪೋಟಿ ಜೋರಾಗಿದೆ. ಜೆಡಿಎಸ್ ಪಕ್ಷದಿಂದ ಶಂಕರಗೌಡ ಪಾಟೀಲ್​ ಎಂಬುವರಿಗೆ ಟಿಕೆಟ್ ಘೋಷಿಸಲಾಗಿದೆ. ಎಂಇಎಸ್ ಇನ್ನು ಕೂಡ ಅಭ್ಯರ್ಥಿ‌ ಆಯ್ಕೆ ಮಾಡಿಲ್ಲ.

Belagavi Rural Constituency Profile
Belagavi Rural Constituency Profile
author img

By

Published : Apr 6, 2023, 2:02 PM IST

ಬೆಳಗಾವಿ: ರಾಜ್ಯದ ಎರಡನೇ ಶಕ್ತಿ ಕೇಂದ್ರವಾದ ಸುವರ್ಣ ವಿಧಾನಸೌಧವನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಸದ್ಯ ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ‌ ಒಂದಾಗಿದೆ. ಬಿಜೆಪಿ‌ ಮತ್ತು ಕಾಂಗ್ರೆಸ್ ಮಧ್ಯ ನೇರ ಹಣಾಹಣಿ ಏರ್ಪಟ್ಟಿದ್ದು, ಚುನಾವಣಾ ಅಖಾಡದಲ್ಲಿ ಗದ್ದುಗೆಗಾಗಿ ಗುದ್ದಾಟ ನಡೆಯಲಿದೆ.

Belagavi Rural Constituency Profile
ಲಕ್ಷ್ಮೀ ಹೆಬ್ಬಾಳ್ಕರ್

ಹೌದು, ಕೃಷಿಯೇ ಮೂಲ ಆಧಾರವಾಗಿರುವ ಗ್ರಾಮೀಣ ಕ್ಷೇತ್ರದಲ್ಲಿ ಮರಾಠ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಎಸ್ಸಿ, ಎಸ್ಟಿ, ಮುಸ್ಲಿಮರು, ಜೈನರು, ಲಿಂಗಾಯತರಿದ್ದಾರೆ. ಮರಾಠಿ ಭಾಷಿಕರ ಮತಗಳು ನಿರ್ಣಾಯಕ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮರಾಠಿಗರ ಓಲೈಕೆಗೆ ನಾನಾ ರೀತಿಯ ಸರ್ಕಸ್ ಮಾಡುತ್ತಿವೆ. ಇನ್ನೂ ಚುನಾವಣೆ ಘೋಷಣೆ ಆಗುವ ಮೊದಲೇ ಕಾಂಗ್ರೆಸ್-ಬಿಜೆಪಿ ನಡುವೆ ಹಣಾಹಣಿ ಏರ್ಪಟ್ಟಿತ್ತು. ಕಾಂಗ್ರೆಸ್‍ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆ ಖಚಿತವಾಗಿದ್ದರೆ ಬಿಜೆಪಿಯಲ್ಲಿ ಟಿಕೆಟ್​ ಆಕಾಂಕ್ಷಿಗಳು ಹೆಚ್ಚಿರುವ ಹಿನ್ನೆಲೆ ಪೈಪೋಟಿ ಜೋರಾಗಿದೆ. ಇನ್ನೂ ರಮೇಶ್​ ಜಾರಕಿಹೊಳಿ ಗೋಕಾಕ ಕ್ಷೇತ್ರದಿಂದ ಸ್ಪರ್ಧಿಸಿದರೂ ಗ್ರಾಮೀಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವರ್ಸಸ್ ರಮೇಶ್​ ಜಾರಕಿಹೊಳಿ ಎಂಬ ಸ್ಥಿತಿ ಕೂಡ ಇದೆ.

Belagavi Rural Constituency Profile
ಸಂಜಯ ಪಾಟೀಲ್

ಸದ್ಯ ಶಾಸಕಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ 2018ರಲ್ಲಿ ಸ್ಪರ್ಧಿಸಿದಾಗ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರೇ, ಅವರ ಪರವಾಗಿ ಪ್ರಚಾರ ಮಾಡಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಿಂದ ರಮೇಶ ಜಾರಕಿಹೊಳಿ ಬಿಜೆಪಿ ಸೇರಿದರು. ಬಳಿಕ ಇಬ್ಬರೂ ಬದ್ಧ ವೈರಿಗಳಾಗಿದ್ದಾರೆ. ಶತಾಯಗತಾಯ ಈ ಬಾರಿ ಹೆಬ್ಬಾಳ್ಕರ್ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ರಮೇಶ್ ಜಾರಕಿಹೊಳಿ​, ಗ್ರಾಮೀಣ ಕ್ಷೇತ್ರದ ವಿವಿಧ ಕಡೆ ಕಳೆದೆರಡು ತಿಂಗಳು ಅಭಿಮಾನಿಗಳ ಸಮಾವೇಶ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಆಪ್ತ ನಾಗೇಶ ಮನ್ನೋಳಕರ್​ಗೆ ಬಿಜೆಪಿ ಟಿಕೆಟ್​ ಕೊಡಿಸಲು ಹರಸಾಹಸ ಕೂಡ ಮಾಡುತ್ತಿದ್ದಾರೆ. ಇನ್ನೂ ಮಾಜಿ‌ ಶಾಸಕ‌ ಸಂಜಯ ಪಾಟೀಲ್, ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ ಕೂಡ ಟಿಕೆಟ್​ ಆಕಾಂಕ್ಷಿಯಾಗಿದ್ದು, ತಮಗೆ ಟಿಕೆಟ್​ ಸಿಗುವ ವಿಶ್ವಾಸದಲ್ಲಿದ್ದಾರೆ. ಎಂಇಎಸ್ ಇನ್ನು ಕೂಡ ಅಭ್ಯರ್ಥಿ‌ ಆಯ್ಕೆ ಮಾಡಿಲ್ಲ. ಜೆಡಿಎಸ್ ಪಕ್ಷದಿಂದ ಶಂಕರಗೌಡ ಪಾಟೀಲ್​ ಎಂಬುವರಿಗೆ ಟಿಕೆಟ್ ಘೋಷಿಸಲಾಗಿದೆ.

Belagavi Rural Constituency Profile
ನಾಗೇಶ ಮನ್ನೋಳಕರ್

ಶಿವಾಜಿ ಮೂರ್ತಿ ಪೊಲಿಟಿಕ್ಸ್: ರಾಜಹಂಸಗಡ ಕೋಟೆ ಮೇಲೆ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿಚಾರವನ್ನು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಅದರಲ್ಲೂ ಜಿದ್ದಿಗೆ ಬಿದ್ದಂತೆ ರಮೇಶ್​ ಜಾರಕಿಹೊಳಿ, ಮುಖ್ಯಮಂತ್ರಿ‌ ಬಸವರಾಜ ಬೊಮ್ಮಾಯಿ ಅವರನ್ನೇ ಕರೆಸಿ‌ ಶಿವಾಜಿ ಮೂರ್ತಿ ಉದ್ಘಾಟಿಸಿದರೆ, ಲಕ್ಷ್ಮೀ ಹೆಬ್ಬಾಳ್ಕರ್ ಶಿವಾಜಿ ಮಹಾರಾಜರ ವಂಶಸ್ಥರನ್ನು ಕರೆಸಿ ಮೂರ್ತಿ ಉದ್ಘಾಟಿಸುವ ಮೂಲಕ ಕೇಸರಿ ಕಲಿಗಳಿಗೆ ತಿರುಗೇಟು ಕೊಟ್ಟಿದ್ದರು. ಇನ್ನೂ ರಾಜಕೀಯವಾಗಿ ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಿರುವ ಎಂಇಎಸ್ ಕೂಡ, ಶಿವಾಜಿ ಮೂರ್ತಿ ಶುದ್ಧೀಕರಣ ನೆಪದಲ್ಲಿ ಮರಾಠಿಗರನ್ನು ಓಲೈಸುವ ಕೆಲಸ ಮಾಡಿದೆ. ಮತದಾರರನ್ನು ಸೆಳೆಯಲು ಎಲ್ಲ ರಾಜಕೀಯ ಪಕ್ಷಗಳು ನಾನಾ ಕಸರತ್ತುಗಳ ಮೊರೆ ಹೋಗಿದ್ದು ಸದ್ಯದ ಮಾಹಿತಿ.

Belagavi Rural Constituency Profile
ಧನಂಜಯ ಜಾಧವ

ಕ್ಷೇತ್ರದ ಹಿನ್ನೆಲೆ: ಬೆಳಗಾವಿ ಗ್ರಾಮೀಣ ಕ್ಷೇತ್ರ ಈ ಮೊದಲು ಹಿರೇಬಾಗೇವಾಡಿ ಕ್ಷೇತ್ರವಾಗಿತ್ತು. 2008ರ ಕ್ಷೇತ್ರ ವಿಂಗಡಣೆಯ ಬಳಿಕ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ರಚನೆಯಾಗಿದೆ. 1972ರಿಂದ ಈವರೆಗಿನ ಚುನಾವಣೆಯಲ್ಲಿ ವಿವಿಧ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಇಲ್ಲಿನ ಮತದಾರರು ಒಲವು ತೋರಿದ್ದು, ಮೊದಲ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐಎನ್‍ಸಿ) ಅಭ್ಯರ್ಥಿ ಬಿ.ಎಸ್.ಪಾಟೀಲ ಆಯ್ಕೆಯಾಗಿದ್ದರೆ, 1978 ಮತ್ತು 1983ರಲ್ಲಿ ಎಂಇಎಸ್​ನ ಗೋವಿಂದ ಅಷ್ಟೇಕರ್ ಸತತವಾಗಿ ಎರಡು ಬಾರಿ ಗೆದ್ದಿದ್ದರು. 1989ರಲ್ಲಿ ಎಂಇಎಸ್​ನ ಕೃಷ್ಣರಾವ್ ಮೊದಗೇಕರ್ ಶಾಸಕರಾಗಿದ್ದರು. ಇನ್ನು ಎಸ್.ಸಿ. ಮಾಳಗಿ ಅವರು‌ 1985ರಲ್ಲಿ ಜನತಾ ಪಕ್ಷದಿಂದ ಹಾಗೂ 1994 ಮತ್ತು 1999ರ ಚುನಾವಣೆಗಳಲ್ಲಿ ಜನತಾದಳದಿಂದ ಗೆಲ್ಲುವ ಮೂಲಕ ಮೂರು ಬಾರಿ ಶಾಸಕರಾಗಿದ್ದರು. 2004ರ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಬಿಜೆಪಿಯ ಅಭಯ ಪಾಟೀಲ್‍ ಗೆಲ್ಲಿಸಿ, ಮೊದಲ ಬಾರಿಗೆ ಕಮಲ ಅರಳಿಸಿದ್ದರು. 2008ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ರಚನೆಯಾದ ಬಳಿಕ ಬಿಜೆಪಿಯ ಸಂಜಯ ಪಾಟೀಲ್ ಆಯ್ಕೆಯಾಗಿದ್ದರು.

Belagavi Rural Constituency Profile
ರಮೇಶ ಜಾರಕಿಹೊಳಿ

2013ರ ಚುನಾವಣೆಯಲ್ಲಿ ಸಂಜಯ ಪಾಟೀಲ್ ವಿರುದ್ಧ ಸುಮಾರು 3 ಸಾವಿರ ಮತಗಳ ಅಂತರದಿಂದ ಸೋತಿದ್ದ ಕಾಂಗ್ರೆಸ್‍ನ ಲಕ್ಷ್ಮೀ ಹೆಬ್ಬಾಳ್ಕರ್ 2018ರ ಚುನಾವಣೆಯಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹಲವು ದಶಕಗಳಿಂದ ಗ್ರಾಮೀಣ ಕ್ಷೇತ್ರದಲ್ಲಿ ಅಸ್ತಿತ್ವ ಕಳೆದುಕೊಂಡಿದ್ದ ಎಂಇಎಸ್ ಈ ಬಾರಿ ಮತ್ತೆ ಸ್ಪರ್ಧೆಗೆ ಅಣಿಯಾಗಿದೆ. ಆದರೆ, ಅಭ್ಯರ್ಥಿ‌ ಆಯ್ಕೆ ಅಂತಿಮ ಆಗಿಲ್ಲ. ಎಂಇಎಸ್ ನಾಯಕರು ಒಗ್ಗಟ್ಟಾದರೆ ಅದು ನೇರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮತಗಳಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಒಟ್ಟಾರೆ, ಮತ್ತೆ ಗೆಲುವಿನ ವಿಶ್ವಾಸದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಇದ್ದರೆ, ಬಿಜೆಪಿ ಮತ್ತೆ ಕ್ಷೇತ್ರ ವಶಕ್ಕೆ ಪಡೆಯುವ ತವಕದಲ್ಲಿದೆ. ಸೋತು ಸುಣ್ಣವಾಗಿರುವ ಎಂಇಎಸ್ ಕೂಡ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಅಂತಿಮವಾಗಿ ಮತದಾರ ಪ್ರಭುಗಳು ಯಾರಿಗೆ ಮಣೆ ಹಾಕುತ್ತಾರೆ ಎಂದು ಕಾದು ನೋಡಬೇಕಿದೆ.

Belagavi Rural Constituency Profile
ಛತ್ರಪತಿ ಶಿವಾಜಿ ಮೂರ್ತಿ

ಮತದಾರರ ಮಾಹಿತಿ: 2,40,255 ಒಟ್ಟು ಮತದಾರರಿದ್ದು, 1,22,387 ಪುರುಷ ಮತದಾರರು, 1,17,868 ಮಹಿಳಾ ಮತದಾರರಿದ್ದಾರೆ. ಈ ಹಿಂದಿನ ಹಿರೇಬಾಗೇವಾಡಿ ಮತ್ತು ಈಗಿನ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈವರೆಗೆ ಒಟ್ಟು 11 ಬಾರಿ ನಡೆದ ಚುನಾವಣೆಯಲ್ಲಿ 3 ಬಾರಿ ಬಿಜೆಪಿ, 3 ಬಾರಿ ಎಂಇಎಸ್, 2 ಬಾರಿ ಕಾಂಗ್ರೆಸ್, 2 ಬಾರಿ ಜೆಡಿಎಸ್, 1 ಬಾರಿ ಜನತಾ ಪಕ್ಷದ ಶಾಸಕರು ಆಯ್ಕೆಯಾಗಿದ್ದಾರೆ. ಯಾರು, ಯಾವಾಗ ಮತ್ತು ಯಾವ ಪಕ್ಷದಿಂದ ಆರಿಸಿ ಬಂದರು ಎಂಬ ಮಾಹಿತಿ ಪಟ್ಟಿ ಇಲ್ಲಿದೆ.

Belagavi Rural Constituency Profile
ಬೆಳಗಾವಿ ಗ್ರಾಮೀಣ ಮತಕ್ಷೇತ್ರ ವಿವರ

1972 - ಬಿ.ಎಸ್.ಪಾಟೀಲ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1978 - ಗೋವಿಂದ ಲಕ್ಷ್ಮಣ ಅಷ್ಟೇಕರ್ - ಪಕ್ಷೇತರ
1983 - ಗೋವಿಂದ ಲಕ್ಷ್ಮಣ ಅಷ್ಟೇಕರ್ - ಪಕ್ಷೇತರ
1985 - ಶಿವಪುತ್ರಪ್ಪ ಚನ್ನಬಸಪ್ಪ ಮಾಳಗಿ - ಜನತಾ ಪಕ್ಷ
1989 - ಕೃಷ್ಣರಾವ ಚೂಡಾಮನಿ ಮೊದಗೇಕರ್ - ಪಕ್ಷೇತರ
1994 - ಶಿವಪುತ್ರಪ್ಪ ಚನ್ನಬಸಪ್ಪ ಮಾಳಗಿ - ಜನತಾ ದಳ
1999 - ಶಿವಪುತ್ರಪ್ಪ ಚನ್ನಬಸಪ್ಪ ಮಾಳಗಿ - ಜನತಾ ದಳ
2004 - ಅಭಯ ಪಾಟೀಲ್ - ಬಿಜೆಪಿ
2008 - ಸಂಜಯ ಪಾಟೀಲ್ - ಬಿಜೆಪಿ
2013 - ಸಂಜಯ ಪಾಟೀಲ್ - ಬಿಜೆಪಿ
2018 - ಲಕ್ಷ್ಮೀ ಹೆಬ್ಬಾಳ್ಕರ್ - ಕಾಂಗ್ರೆಸ್

ಇದನ್ನೂ ಓದಿ: ಕಾಂಗ್ರೆಸ್​ನಿಂದ​ 42​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ.. ಯಾವ ಕ್ಷೇತ್ರಕ್ಕೆ ಯಾರು ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.