ತುಮಕೂರು:ಇತ್ತೀಚೆಗೆ ನಾಪತ್ತೆಯಾಗಿದ್ದ ತಾಯಿ ಮತ್ತು ಮಗನ ಶವ ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದ ಕೆರೆಯಲ್ಲಿ ಪತ್ತೆಯಾಗಿದೆ.
ಶಶಿಕಲಾ (30) ಹಾಗೂ 6 ವರ್ಷದ ಬಾಲಕ ಮೃತರು. ಒರಗೆರೆಹಳ್ಳಿ ಗ್ರಾಮದವರಾದ ಶಶಿಕಲಾ, ಕಳೆದ ಮೂರು ದಿನಗಳಿಂದ ಮಗನ ಜೊತೆ ನಾಪತ್ತೆಯಾಗಿದ್ದರು. ಈ ಕುರಿತು ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಶಶಿಕಲಾ ಅವರ ಸಹೋದರ ನಾಪತ್ತೆ ದೂರು ದಾಖಲಿಸಿದ್ದರು. ಇಂದು ಬೆಳಿಗ್ಗೆ ತುರುವೇಕೆರೆ ಕೆರೆಯಲ್ಲಿ ಇಬ್ಬರ ಶವ ದೊರೆತಿದೆ. ಡೆತ್ನೋಟ್ ಸಿಕ್ಕಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.