ರಾಯಚೂರು:ರೈತನಿಂದ ಲಂಚ ಪಡೆಯುತ್ತಿದ್ದ ಸರ್ವೆ ಇಲಾಖೆಯ ರೆಕಾರ್ಡ್ ಕೀಪರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ರಾಯಚೂರಿನ ಲಿಂಗಸೂಗೂರಿನಲ್ಲಿ ನಡೆದಿದೆ.
ಲಿಂಗಸೂಗೂರು ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ವೆ ಇಲಾಖೆಯ ರೆಕಾರ್ಡ್ ಕೀಪರ್ (ಅಭಿಲೇಖ ಪಾಲಕ) ಆದಪ್ಪ ಅಮರೇಢ ಹಡಪದ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ. ದೂರುದಾರ ರಾಮಣ್ಣ ಎಂಬವರಿಗೆ ಕನಸಾವಿ ಬೆಳ್ಳಿಹಾಳದ ಸರ್ವೆ ನಂಬರ್ 92ರ ಟೋಂಚ್ ಟಿಪ್ಪಣಿ ನೀಡಲು ಆದಪ್ಪ ಹಡಪದ 24 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ರೈತ ರಾಮಣ್ಣ ಲೋಕಾಯುಕ್ತರಿಗೆ ದೂರು ನೀಡಿದ್ದರು.