ಕರ್ನಾಟಕ

karnataka

ಚಿಕ್ಕಮಗಳೂರು: ಸುಪ್ರಸಿದ್ಧ ಪ್ರವಾಸಿತಾಣಕ್ಕೆ ಚಾರಣಿಗರ ಭೇಟಿಗೆ ನಿರ್ಬಂಧ; ಕಾರಣ?

By ETV Bharat Karnataka Team

Published : Jun 22, 2024, 7:33 AM IST

ettina bhuja
ಎತ್ತಿನಭುಜ ಪ್ರವಾಸಿತಾಣ (ETV Bharat)

ಚಿಕ್ಕಮಗಳೂರು:ಮಳೆಗಾಲದಲ್ಲಿ ಜಿಲ್ಲೆಯ ಪ್ರವಾಸಿತಾಣಗಳ ಸೌಂದರ್ಯ ಸವಿಯಲು ಹೆಚ್ಚಾಗಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂದರ ತಾಣ ಎತ್ತಿನಭುಜಕ್ಕೆ ಪ್ರವಾಸಿಗರ ಭೇಟಿ ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಪ್ರವಾಸೋದ್ಯಮದ ಅಡಿ ರಾಜ್ಯದ ವಿವಿಧೆಡೆ ಆನ್​ಲೈನ್​ ಟಿಕೆಟ್​ ವ್ಯವಸ್ಥೆ ಮಾಡಿ ಪ್ರವಾಸಿಗರ ಸಂಖ್ಯೆಯನ್ನು ಸೀಮಿತಗೊಳಿಸುವವರೆಗೆ ಚಾರಣ ಪ್ರದೇಶಗಳಲ್ಲಿ ಪ್ರವೇಶ ನಿರ್ಬಂಧಿಸಿ ಈಗಾಗಲೇ ಸೂಚನೆ ನೀಡಲಾಗಿದೆ. ಆದರೂ ಕೂಡ ಹಲವೆಡೆ ಪ್ರವಾಸಿಗರು ಓಡಾಡುತ್ತಿರುವುದು ವರದಿಯಾಗಿದೆ. ಜೂ. 15, 16, 17ರಂದು ರಜೆ ಇದ್ದ ಕಾರಣ ಮುಳ್ಳಯನಗಿರಿ, ಎತ್ತಿನಭುಜದಲ್ಲಿ ಸಾವಿರಾರು ಚಾರಣಿಗರು ಬಂದು ಹೋಗಿರುವುದಾಗಿ ಮಾಧ್ಯಮಗಳಲ್ಲಿ ವರದಿಗಳಾಗಿವೆ. ತಾತ್ಕಾಲಿಕವಾಗಿ ಚಾರಣ ನಿರ್ಬಂಧವಾಗಿದ್ದರೂ ಅವಕಾಶ ನೀಡಿರುವ ಬಗ್ಗೆ ಪರಿಶೀಲಿಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ.

ಅಲ್ಲದೇ, ಅಗತ್ಯ ಮೂಲಸೌಕರ್ಯ ಒದಗಿಸುವವರಗೆ ಮುಂದಿನ ಆದೇಶದವೆರೆಗೆ ಎತ್ತಿನಭುಜಕ್ಕೆ ಚಾರಣ ನಿರ್ಬಂಧಿಸಲಾಗಿದೆ ಎಂದು ಚಿಕ್ಕಮಗಳೂರು ಅರಣ್ಯ ಇಲಾಖೆಯು ಬ್ಯಾನರ್​ ಅಳವಡಿಸಿ ಎಚ್ಚರಿಕೆ ನೀಡಿದೆ.

ABOUT THE AUTHOR

...view details