ಬಾಗಲಕೋಟೆ:ಶೌಚಾಲಯದಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಎಸೆದು ಹೋಗಿರುವ ಘಟನೆ ಬಾಗಲಕೋಟೆ ನಗರದ ಶಿರೂರ ಅಗಸಿ ಬಳಿ ನಡೆದಿದೆ. ಶಿಶುವನ್ನು ಎಸೆದು ಹೋಗಿರುವುದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಬಾಗಲಕೋಟೆ: ಶೌಚಾಲಯದಲ್ಲಿ ಗಂಡು ಶಿಶುವಿನ ಮೃತದೇಹ ಎಸೆದ ಪಾಪಿಗಳು
Published : Sep 11, 2024, 5:52 PM IST
ಯಾರೂ ಇಲ್ಲದ ಸಮಯ ನೋಡಿಕೊಂಡು ರಟ್ಟಿನ ಬಾಕ್ಸ್ನಲ್ಲಿ ಶಿಶುವಿನ ಮೃತದೇಹ ಇಟ್ಟು ಹೋಗಲಾಗಿದೆ. ಶಿಶು ಇನ್ನೂ ಸರಿಯಾಗಿ ಬೆಳವಣಿಗೆ ಹೊಂದಿರಲಿಲ್ಲ. ಹೀಗಾಗಿ, ಭ್ರೂಣ ಹತ್ಯೆ ನಡೆದಿರುವ ಸಂಶಯ ಮೂಡಿದೆ ಎನ್ನುತ್ತಾರೆ ಸ್ಥಳೀಯರು.
ಇತ್ತೀಚೆಗೆ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಪ್ರಕರಣ ದಾಖಲಾದ ಬೆನ್ನಲ್ಲೇ, ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.