ಕರ್ನಾಟಕ

karnataka

ETV Bharat / snippets

₹12 ಲಕ್ಷ ಮೌಲ್ಯದ ಮೊಬೈಲ್​ಗಳನ್ನು ಹುಡುಕಿ ಕೊಟ್ಟ ದಾವಣಗೆರೆ ಪೊಲೀಸರು

davangere police
ವಾರಸುದಾರರಿಗೆ ಮೊಬೈಲ್​ ಹಸ್ತಾಂತರಿಸಿದ ಪೊಲೀಸರು (ETV Bharat)

By ETV Bharat Karnataka Team

Published : Aug 8, 2024, 10:08 AM IST

ದಾವಣಗೆರೆ: ಸಿಇಐಆರ್ ಪೋರ್ಟಲ್ ನೆರವಿನಿಂದ ದಾವಣಗೆರೆ ಪೊಲೀಸರು ಲಕ್ಷಾಂತರ ರೂ. ಮೌಲ್ಯದ 39 ಮೊಬೈಲ್​ಗಳನ್ನು ಪತ್ತೆ ಹಚ್ಚಿ, ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಚನ್ನಗಿರಿ ಪೊಲೀಸ್ ಉಪ ವಿಭಾಗ, ಸಂತೆಬೆನ್ನೂರು, ಬಸವಾಪಟ್ಟಣ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳುವು, ಸುಲಿಗೆ ಹಾಗೂ ಕಳೆದುಕೊಂಡಿರುವ ಮೊಬೈಲ್​ಗಳನ್ನು ಸಿಇಐರ್ ವೆಬ್ ಪೋರ್ಟಲ್​ನಲ್ಲಿ ನೋಂದಾಯಿಸಿ ಬ್ಲಾಕ್ ಮಾಡಿ, ಪತ್ತೆ ಹಚ್ಚಲಾಗಿದೆ.

ಎಸ್​​ಪಿ ಉಮಾ ಪ್ರಶಾಂತ್ ಸೂಚನೆ ಮೇರೆಗೆ ಮೊಬೈಲ್ ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ. ಚನ್ನಗಿರಿ ಡಿವೈಎಸ್​​​ಪಿ ರುದ್ರಪ್ಪ ಉಜ್ಜಿನಕೊಪ್ಪ ಅವರು ಚನ್ನಗಿರಿ ಕಚೇರಿಯಲ್ಲಿ ಮೊಬೈಲ್​ ಹಸ್ತಾಂತರಿಸಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣೆ ಪಿಐ ಲಿಂಗನಗೌಡ ನೆಗಳೂರು ಸೇರಿದಂತೆ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

ಮೊಬೈಲ್ ಕಳೆದ ಬಳಿಕ ದೂರುದಾರರು ಸಿಇಐಆರ್ ಪೋರ್ಟಲ್​ನಲ್ಲಿ ನೋಂದಾಯಿಸಿ ಮೊಬೈಲ್ ಹುಡುಕಿಕೊಡುವಂತೆ ಮನವಿ ಮಾಡಿದ್ದರು. ಸುಲಿಗೆ, ಕಳುವಾದ, ಕಳೆದುಕೊಂಡ ಮೊಬೈಲ್​ಗಳನ್ನು ಪತ್ತೆ ಹಚ್ಚಿದ ಪೊಲೀಸರ ಕಾರ್ಯಕ್ಕೆ ವಾರಸುದಾರರು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ನಿಮ್ಮ ಮೊಬೈಲ್ ಕಳುವಾಗಿದೆಯೇ ? ಹಾಗಾದ್ರೆ ಸಿಇಐಆರ್ ಪೋರ್ಟಲ್​ಗೆ ದೂರು ನೀಡಿ

ABOUT THE AUTHOR

...view details