ಕರ್ನಾಟಕ

karnataka

ETV Bharat / snippets

ಬೆಂಗಳೂರು: ಕೊರಿಯರ್ ಬಾಯ್‌ಗೆ ಚಾಕು ಇರಿದ ಗ್ರಾಹಕ; ಕಾರಣ?

courier boy
ಕೊರಿಯರ್ ಬಾಯ್‌ (ETV Bharat)

By ETV Bharat Karnataka Team

Published : Aug 31, 2024, 9:38 AM IST

ಬೆಂಗಳೂರು:ಮನೆ ವಿಳಾಸದ ಬಳಿ ಬರಲು ವಿಳಂಬ ಮಾಡಿದ ಎಂದು ಸಿಟ್ಟಿಗೆದ್ದ ಗ್ರಾಹಕನೊಬ್ಬ ಕೊರಿಯರ್ ಡಿಲೆವರಿ ಬಾಯ್‌ಗೆ ಚಾಕು ಇರಿದಿರುವ ಘಟನೆ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಮ್ಮದ್ ಶಫಿ ಎಂಬಾತನಿಗೆ ಇರಿಯಲಾಗಿದ್ದು, ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರಿಯರ್ ಡಿಲೆವರಿ ಮಾಡಲು ಬಂದಿದ್ದ ಮೊಹಮ್ಮದ್ ಶಫಿ, ಗ್ರಾಹಕ ಕಳಿಸಿದ್ದ ವಿಳಾಸ ತಿಳಿಯದೇ ಲ್ಯಾಂಡ್ ಮಾರ್ಕ್ ಕೇಳಿದ್ದ. ಕೆಲ ಸಮಯದ ಬಳಿಕ ಕೊರಿಯರ್ ಡಿಲೆವರಿಗೆ ಬಂದಾಗ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಸಿಟ್ಟಿಗೆದ್ದ ಆರೋಪಿ ಗ್ರಾಹಕ ಕೊರಿಯರ್ ಬಾಯ್‌ಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಅಶೋಕ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ವಿವಾಹವಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ: ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ - Young Woman Rape Case

ABOUT THE AUTHOR

...view details