ಕರ್ನಾಟಕ

karnataka

ETV Bharat / snippets

ಉಡುಪಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ಕಪಾಟು ಖರೀದಿಸಿದ ಕೂಲಿ ಕಾರ್ಮಿಕ ಮಹಿಳೆ

ಉಡುಪಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ಕಪಾಟು ಖರೀದಿಸಿದ ಕೂಲಿ ಕಾರ್ಮಿಕ ಮಹಿಳೆ
ಉಡುಪಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ಕಪಾಟು ಖರೀದಿಸಿದ ಕೂಲಿ ಕಾರ್ಮಿಕ ಮಹಿಳೆ (ETV Bharat)

By ETV Bharat Karnataka Team

Published : Nov 6, 2024, 2:40 PM IST

ಉಡುಪಿ:ಗೃಹಲಕ್ಷ್ಮೀ ಯೋಜನೆಯಲ್ಲಿ ಬಂದ ಹಣವನ್ನು ಕೂಡಿಟ್ಟ ಕೂಲಿಕಾರ್ಮಿಕ ಮಹಿಳೆಯೊಬ್ಬರು ಮನೆಗೆ ಕಪಾಟೊಂದನ್ನು ಖರೀದಿಸಿ ಖುಷಿ ಪಟ್ಟಿದ್ದಾರೆ.

ಪರ್ಕಳದ ಮೋಹನದಾಸ್​ ನಾಯಕ್​ ಅವರ ಸ್ವಾಗತ್ ಹೊಟೇಲ್‌ನಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುವ ಹಾವೇರಿ ಮೂಲದ ಕುಸುಮಾ ಮಾಡಿವಾಲ್ತಿ ಅವರೇ ಈ ಮಹಿಳೆ. ಕುಸುಮಾ ಅವರ ರೇಷನ್ ಕಾರ್ಡ್​ನಲ್ಲಿ ಕೆಲವು ದೋಷಗಳಿದ್ದವು. ಅವುಗಳನ್ನು ಪರ್ಕಳದ ಸಾಮಾಜಿಕ ಕಾರ್ಯಕರ್ತರಾದ ಗಣೇಶ್ ರಾಜ್ ಸರಳೆಬೆಟ್ಟು ಅವರ ಸಹಾಯದಿಂದ ತಿದ್ದುಪಡಿ ಮಾಡಿ ಬಳಿಕ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಿದ್ದರು. ಬಳಿಕ ಬಂದ ಗೃಹಲಕ್ಷ್ಮೀ ಹಣ 2000ರೂ.ಗಳನ್ನು ಕೂಡಿಟ್ಟು ಮನೆಗೆ ಹೊಸ ಕಪಾಟನ್ನು ಖರೀದಿಸಿದ್ದಾರೆ. ಅಲ್ಲದೇ ಇನ್ನೂ ನಾಲ್ಕು ಕಂತಿನ ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಾಗಿ ಇರಿಸಿದ್ದಾರೆ.

'ನಮ್ಮಂತ ಬಡ ಕೂಲಿಕಾರ್ಮಿಕರಿಗೆ ಗೃಹಲಕ್ಷ್ಮೀ ಯೋಜನೆ ವರದಾನವಾಗಿ ಬಂದಿದೆ. ಈ ಹಣದಿಂದ ಬಹುಕಾಲದಿಂದ ಖರೀದಿಸಲು ಯೋಜಿಸಿದ್ದ ಮನೆಗೆ ಅತ್ಯವಶ್ಯಕಗಳನ್ನು ಖರೀದಿಸಲು ಸಾಧ್ಯವಾಗಲಿದೆ' ಎಂದು ಕುಸುಮಾ ಖುಷಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಗೃಹಲಕ್ಷ್ಮಿ ಹಣದಿಂದ ಗ್ರಂಥಾಲಯ ನಿರ್ಮಿಸಿದ ಮಹಿಳೆಗೆ ಪುಸ್ತಕ ನೀಡಿ ಶ್ಲಾಘಿಸಿದ ಲಕ್ಷ್ಮೀ ಹೆಬ್ಬಾಳ್ಕರ್

ABOUT THE AUTHOR

...view details