ಕರ್ನಾಟಕ

karnataka

ETV Bharat / videos

Union Budget 2025-26 Live: ಕೇಂದ್ರ ಬಜೆಟ್ ಮಂಡನೆ ಆರಂಭ - ನೇರ ಪ್ರಸಾರ - UNION BUDGET LIVE

By ETV Bharat Karnataka Team

Published : Feb 1, 2025, 11:02 AM IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತವಾಗಿ 8ನೇ ಬಾರಿ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. ಈ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಈ ಬಾರಿಗೂ ಪೇಪರ್ ರಹಿತ ಬಜೆಟ್ ಮಂಡನೆಗೆ ಆದ್ಯತೆ ನೀಡಿದ್ದಾರೆ. ಕೆಂಪು ಕವರ್ ಟ್ಯಾಬ್​ನಲ್ಲಿರುವ ಬಜೆಟ್ ಪ್ರತಿಯನ್ನೇ ಸಂಸತ್ತಿನಲ್ಲಿ ಮಂಡಿಸುತ್ತಿದ್ದಾರೆ. ಪ್ರತಿ ಬಾರಿ ವಿಶೇಷ ಸೀರೆಯಲ್ಲಿ ಬಜೆಟ್ ಮಂಡಿಸುವ ಸೀತಾರಾಮನ್ ಅವರು ಈ ಬಾರಿ ಮಧುಬನಿ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಬಜೆಟ್ ಮಂಡನೆ ನೇರ ಪ್ರಸಾರ ಇಲ್ಲಿದೆ.  ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ಹಣಕಾಸು ಸಚಿವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಬಳಿಕ ಸಂಸತ್​ಗೆ ಆಗಮಿಸಿದರು. ನಂತರ ಕೇಂದ್ರ ಸಚಿವ ಸಂಪುಟ ಸಭೆಯು ಬಜೆಟ್​ಗೆ ಅನುಮೋದನೆ ನೀಡಿತು. ಆ ಬಳಿಕ 11 ಗಂಟೆಗೆ ಬಜೆಟ್​ ಮಂಡನೆ ಆರಂಭವಾಗಿದೆ.  ಮಂದಗತಿಯ ಆರ್ಥಿಕ ಬೆಳವಣಿಗೆ, ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ ಏರಿಕೆ ಸವಾಲುಗಳ ಮಧ್ಯೆಯೂ ನಿರ್ಮಲಾ ಸೀತಾರಾಮನ್ ಮಂಡಿಸುವ ಬಜೆಟ್ ಮೇಲೆ ದೇಶದ ಕಣ್ಣು ನೆಟ್ಟಿದೆ. ಬಡವರು, ಮಧ್ಯಮ ವರ್ಗ ಮತ್ತು ಮಹಿಳೆಯರಿಗೆ ವಿಶೇಷ ಕೊಡುಗೆ ಸಿಗುವ ನಿರೀಕ್ಷೆ ಇದೆ. ಇನ್ನು ಪ್ರಮುಖವಾಗಿ ಆದಾಯ ತೆರಿಗೆ ಸ್ಲ್ಯಾಬ್​ಗಳಲ್ಲಿ ಪ್ರಮುಖ ಬದಲಾವಣೆ ಬಗ್ಗೆ ಕುತೂಹಲ ಹೆಚ್ಚಿದೆ.

ABOUT THE AUTHOR

...view details