ಸಚಿವ ರಾಜಣ್ಣ ಕುಟುಂಬದಿಂದ ತುಮಕೂರಿನ ರಾಮಮಂದಿರದಲ್ಲಿ ವಿಶೇಷ ಪೂಜೆ - Ayodhye Rama Mandira
Published : Jan 22, 2024, 1:29 PM IST
ತುಮಕೂರು: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಲಕ್ಷಾಂತರ ಮಂದಿ ಅಯೋಧ್ಯೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಇನ್ನೂ ಕೆಲವರು ತಮ್ಮ ತಮ್ಮ ಊರಿನಲ್ಲೇ ಇರುವ ರಾಮ ಮಂದಿರಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇದೇ ರೀತಿ ಸಚಿವ ಕೆ. ಎನ್. ರಾಜಣ್ಣ ಅವರ ಕುಟುಂಬಸ್ಥರು ಮಧುಗಿರಿ ತಾಲೂಕಿನ ಕಿತ್ತಗಳ್ಳಿ ಗ್ರಾಮದಲ್ಲಿರುವ ರಾಮ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಕಿತ್ತಗಳ್ಳಿ ಗ್ರಾಮದಲ್ಲಿ ಇರುವ ರಾಮ ದೇವಸ್ಥಾನದಲ್ಲಿ ಇಂದು ಬೆಳಗ್ಗೆಯಿಂದಲೇ ಹೋಮ-ಹವನ ನಡೆಸಿ ಪೂಜೆ ಸಲ್ಲಿಸುತ್ತಿರುವ ಸಚಿವರ ಕುಟುಂಬದವರು ವಿಧಿ ವಿಧಾನದಂತೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಪೂಜಾ ಕಾರ್ಯಕ್ರಮದಲ್ಲಿ ಸಚಿವ ಕೆ.ಎನ್ ರಾಜಣ್ಣ ಅವರ ಪತ್ನಿ ಶಾಂತಲ ಹಾಗೂ ಸಂಬಂಧಿಕರು ಪಾಲ್ಗೊಂಡರು.
ಪಾಳು ಬಿದ್ದಿದ್ದ ಈ ದೇವಸ್ಥಾನವನ್ನು 2006ರಲ್ಲಿ ಕೆ.ಎನ್. ರಾಜಣ್ಣ ಜೀರ್ಣೋದ್ಧಾರ ಮಾಡಿದ್ದರು. ಅಂದಾಜು 20 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿದ್ದ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜಾ ಕಾರ್ಯಕ್ರಮಗಳು ಮುಂಜಾನೆಯಿಂದಲೇ ನೆರವೇರುತ್ತಿವೆ. ಅಯೋಧ್ಯೆಯ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಯಕ್ಕೆ ಸರಿಯಾಗಿ ಇಲ್ಲೂ ಪೂಜೆ ಸಲ್ಲಿಸಲಾಯಿತು.
ಇದನ್ನೂ ನೋಡಿ: ಧಾರವಾಡ: ಮರಳಿನಲ್ಲಿ ಅರಳಿದ ರಾಮಮಂದಿರ, ಕಲಾವಿದನ ಕೈಚಳಕ ನೋಡಿ