ಕರ್ನಾಟಕ

karnataka

ETV Bharat / videos

ಕರ್ಕಶ ಶಬ್ದ ಮಾಡುತ್ತಿದ್ದ ಬೈಕ್​ಗಳ ಸೈಲೆನ್ಸರ್ ನಾಶ ಮಾಡಿದ ಪೊಲೀಸರು: ವಿಡಿಯೋ - Noisy bike silencer destroyed - NOISY BIKE SILENCER DESTROYED

By ETV Bharat Karnataka Team

Published : May 24, 2024, 7:19 PM IST

ಚಿಕ್ಕಮಗಳೂರು : ಜಿಲ್ಲೆಯ ಕಡೂರು ತಾಲೂಕಿನ ಪೊಲೀಸರು ಇಡೀ ತಾಲೂಕಿನ ಜನತೆ ಮೆಚ್ಚುವಂತಹ ಹಾಗೂ ಶ್ಲಾಘನೆ ವ್ಯಕ್ತಪಡಿಸುವಂತಹ ಕೆಲಸವನ್ನು ಮಾಡಿದ್ದಾರೆ. ನಿತ್ಯ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕರ್ಕಶ ಶಬ್ದ ಮಾಡುತ್ತಿದ್ದ ಕೆಲ ಯುವಕರ ಬೈಕ್​ಗಳಲ್ಲಿನ ಸೈಲೆನ್ಸರ್​ಗಳನ್ನು ವಶಕ್ಕೆ ಪಡೆದು ನಾಶ ಮಾಡಿದ್ದಾರೆ. 

ಕಡೂರು ಪೊಲೀಸರಿಂದ ಡಿಫೆಕ್ಟಿವ್ ಸೈಲೆನ್ಸರ್ ಕಾರ್ಯಾಚರಣೆ ತುಂಬಾ ಜೋರಾಗಿ ಮುಂದುವರೆದಿದೆ. ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್​ಗಳನ್ನು ಕಿತ್ತು ಹಾಕಿಸಿ, ಬೈಕ್ ಸವಾರರ ಮುಂದೆಯೇ ರೋಡ್ ರೋಲರ್ ಹತ್ತಿಸುವ ಮೂಲಕ ನೂರಾರು ಸೈಲೆನ್ಸರ್​ಗಳನ್ನು ನಾಶ ಮಾಡಿದ್ದಾರೆ.  

ಇತ್ತೀಚಿಗೆ ಪಟ್ಟಣದಲ್ಲಿ ಕರ್ಕಶ ಶಬ್ದವನ್ನುಂಟು ಮಾಡುವ ಬೈಕುಗಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದವು. ಈ ಬಗ್ಗೆ ಸಾರ್ವಜನಿಕರು ಹಾಗೂ ಕೆಲ ಪ್ರಜ್ಞಾವಂತರು ಕೂಡಲೇ ಪೊಲೀಸರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಎಚ್ಚೆತ್ತ ಪೊಲೀಸರು ದಿಟ್ಟ ಕ್ರಮ ಜರುಗಿಸಿದ್ದಾರೆ. ಡಿಫೆಕ್ಟಿವ್ ಸೈಲೆನ್ಸರ್ ಅಳವಡಿಸದಂತೆ ‌ವಾರ್ನಿಂಗ್ ಕೂಡ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಯಾರಾದರೂ ಈ ರೀತಿಯ ಸೈಲೆನ್ಸರ್ ಅಳವಡಿಸಿ ರಸ್ತೆಗೆ ಇಳಿದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಹಾಗೂ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ :  ಕರ್ಕಶ ಶಬ್ಧ ಮಾಡುವ ಬೈಕ್​ ಸೈಲೆನ್ಸರ್​ ಸದ್ದಡಗಿಸಿದ ಹುಬ್ಬಳ್ಳಿ ಪೊಲೀಸರು; ರೋಡ್ ರೋಲರ್​ನಿಂದ ಪುಡಿ ಪುಡಿ - BIKE SILENCER

ABOUT THE AUTHOR

...view details