ಒಂದೇ ತಿಂಗಳಲ್ಲಿ ಘಾಟಿ ಕ್ಷೇತ್ರದ ಹುಂಡಿಯಲ್ಲಿ ಹರಿದು ಬಂತು 55 ಲಕ್ಷಕ್ಕೂ ಹೆಚ್ಚು ಹಣ - ಹಣ ಸಂಗ್ರಹ
Published : Feb 6, 2024, 11:06 AM IST
ದೊಡ್ಡಬಳ್ಳಾಪುರ: ಕರ್ನಾಟಕದ ಅತಿ ಹೆಚ್ಚು ಆದಾಯ ಇರುವ ಮೊದಲ 10 ಮುಜರಾಯಿ ದೇವಸ್ಥಾನಗಳ ಪಟ್ಟಿಯಲ್ಲಿ ದೊಡ್ಡಬಳ್ಳಾಪುರದ ಘಾಟಿ ಸುಬ್ರಮ್ಯಣ್ಯ ಕ್ಷೇತ್ರಕ್ಕೂ ಸ್ಥಾನವಿದೆ. ಪ್ರತಿ ತಿಂಗಳಿಗೊಮ್ಮೆ ಕ್ಷೇತ್ರದಲ್ಲಿ ಭಕ್ತರ ಹುಂಡಿ ಹಣ ಎಣಿಕೆ ಕಾರ್ಯ ಮಾಡಲಾಗುತ್ತದೆ. ಈ ಜನವರಿ ತಿಂಗಳಲ್ಲಿ ಒಟ್ಟು 55,24,663 ರೂಪಾಯಿ ಸಂಗ್ರಹವಾಗಿದೆ.
ಕಳೆದ ಜನವರಿ 16 ರಂದು ಘಾಟಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ ಕಾರ್ಯಕ್ರಮ ನೆರೆವೇರಿದ್ದು, ಜಾತ್ರೆ ನಿಮಿತ್ತ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಬಂದ ಹಿನ್ನೆಲೆ ಭಕ್ತರ ಹುಂಡಿ ಹಣದಲ್ಲಿ ಏರಿಕೆಯಾಗಿದೆ. ಸೋಮವಾರ ದೇವಸ್ಥಾನದ ಆವರಣದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ಮಾಡಲಾಗಿದ್ದು, ಈ ವೇಳೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಡಿ.ನಾಗರಾಜು, ಮುಜರಾಯಿ ಇಲಾಖೆ ತಹಶೀಲ್ದಾರ್ ಜೆ.ಜೆ. ಹೇಮಾವತಿ, ಪ್ರಧಾನ ಅರ್ಚಕರಾದ ನಾಗೇಂದ್ರ ಶರ್ಮಾ, ಕೆನರಾ ಬ್ಯಾಂಕ್ ಸಿಬ್ಬಂದಿ, ದೇವಸ್ಥಾನದ ಸಿಬ್ಬಂದಿ, ಪೊಲೀಸ್ ಇಲಾಖೆ ಮತ್ತು ಭಕ್ತರ ಸಮ್ಮುಖದಲ್ಲಿ ಎಣಿಕೆ ಕಾರ್ಯ ಮಾಡಲಾಗಿತ್ತು.
ಒಟ್ಟು ಸಂಗ್ರಹವಾದ 55,24,663 ರೂಪಾಯಿಯಲ್ಲಿ ಅತಿ ಹೆಚ್ಚಿನ ಹಣ ನೂರು ರೂಪಾಯಿ ನೋಟ್ಗಳ ಮೂಲಕ ಬಂದಿದೆ. ಅದರ ಒಟ್ಟಾರೆ ಮೌಲ್ಯ 21,57,600 ರೂಪಾಯಿ ಆಗಿದೆ. ನ್ಯಾಣಗಳಿಂದ 1,06,566 ರೂಪಾಯಿ ಸಂಗ್ರಹವಾಗಿದೆ. ಇದರ ಜೊತೆಗೆ 1. ಕೆಜಿ 390 ಗ್ರಾಂ ಬೆಳ್ಳಿ, 4 ಗ್ರಾಂ 600 ಮಿ.ಗ್ರಾ ಚಿನ್ನ ಕೂಡಾ ಹುಂಡಿಗೆ ಹರಿದು ಬಂದಿದೆ.
ಇದನ್ನೂ ಓದಿ: ರಾಮನಗರ: ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಭೇಟಿ