ರಾಮನಗರ: ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಭೇಟಿ - Big Boss Varthur Santhosh
Published : Feb 5, 2024, 10:13 PM IST
ರಾಮನಗರ: ಕನ್ನಡ ಬಿಗ್ಬಾಸ್ ರಿಯಾಲಿಟಿ ಶೋ ಖ್ಯಾತಿಯ ವರ್ತೂರ್ ಸಂತೋಷ್ (ಹಳ್ಳಿಕಾರ್ ಸಂತೋಷ್) ಇಂದು ಚನ್ನಪಟ್ಟಣ ತಾಲೂಕಿನ ಪ್ರಸಿದ್ಧ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.
ಹಳ್ಳಿಕಾರ್ ಸಂತೋಷ್ ಕ್ಷೇತ್ರದ ಭಕ್ತರಾಗಿದ್ದು, ದೇವಾಲಯದೊಂದಿಗೆ ವಿಶೇಷ ನಂಟು ಹೊಂದಿದ್ದಾರೆ. ಬಿಗ್ ಬಾಸ್ ಶೋ ನಂತರ ಸೋಮವಾರ ಇದೇ ಮೊದಲ ಬಾರಿ ಕ್ಷೇತ್ರಕ್ಕೆ ಆಗಮಿಸಿ ತಾಯಿಗೆ ಪೂಜೆ ಸಲ್ಲಿಸಿದರು. ಈ ವಿಚಾರ ತಿಳಿದು ಸುತ್ತಮುತ್ತಲ ಗ್ರಾಮದ ಅಭಿಮಾನಿಗಳು ದೇಗುಲದಲ್ಲಿ ನೆರೆದಿದ್ದರು.
ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಅವರು ಕ್ಷೇತ್ರದ ಪವಾಡ ಬಸವಪ್ಪನ ಆಶೀರ್ವಾದವನ್ನೂ ಪಡೆದರು. ಹಲವು ಗಂಟೆಗಳ ಕಾಲ ದೇವಾಲಯದಲ್ಲಿ ತಂಗಿದ್ದು ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗೂರೂಜಿ ಆಶೀರ್ವಾದ ಪಡೆದರು. ಕ್ಷೇತ್ರದ ವತಿಯಿಂದ ವರ್ತೂರ್ ಸಂತೋಷ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೇಸ್ ದಿನಾಂಕ ಗೊತ್ತುಪಡಿಸಿದ ಹಳ್ಳಿಕಾರ್: ಬೆಂಗಳೂರಿನಲ್ಲಿ ತಮ್ಮ ನೇತೃತ್ವದಲ್ಲಿ ಎರಡನೇ ಬಾರಿಗೆ ಆಯೋಜಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಮಟ್ಟದ ಹಳ್ಳಿಕಾರ್ ರೇಸ್ಗೆ ವರ್ತೂರ್ ಸಂತೋಷ್ ಕ್ಷೇತ್ರದಲ್ಲಿ ದಿನಾಂಕ ನಿಗದಿ ಮಾಡಿದ್ದು ವಿಶೇಷವಾಗಿತ್ತು. ಧರ್ಮದರ್ಶಿಗಳ ಬಳಿ ಚರ್ಚಿಸಿ ಅವರು ದಿನಾಂಕ ನಿಗದಿಪಡಿಸಿಕೊಂಡರು. ಆದರೆ, ಈ ಕುರಿತು ಮಾಹಿತಿ ಬಹಿರಂಗಪಡಿಸಲಿಲ್ಲ.
ಇದನ್ನೂ ಓದಿ: ಹಳ್ಳಿಕಾರ್ ಒಡೆಯನ ಭರ್ಜರಿ ಬಿಗ್ ಬಾಸ್ ಜರ್ನಿ; ವರ್ತೂರ್ ಸಂತೋಷ್ ನಿಮ್ಮ ಮೆಚ್ಚಿನ ಸ್ಪರ್ಧಿಯೇ?