LIVE: ಬೆಳಗಾವಿ ಅಧಿವೇಶನ, ವಿಧಾನಸಭೆ ಕಲಾಪ: ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಚರ್ಚೆ - ASSEMBLY SESSION LIVE
Published : 4 hours ago
ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ರಾಜ್ಯ ಚಳಿಗಾಲದ ಅಧಿವೇಶನದ 5ನೇ ದಿನದ ವಿಧಾನಸಭೆಯ ಕಲಾಪ ನಡೆಯುತ್ತಿದೆ. ಸದನದಲ್ಲಿ ಇದುವರೆಗೆ ವಕ್ಫ್ ಆಸ್ತಿ ವಿಚಾರ, ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಸೇರಿದಂತೆ ಹಲವು ವಿಷಯಗಳು ಭಾರಿ ಗದ್ದಲ ಎಬ್ಬಿಸಿವೆ. ಲಾಠಿ ಚಾರ್ಜ್ ಖಂಡಿಸಿ ಬಿಜೆಪಿ ಶಾಸಕರು ಗುರುವಾರ ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಈಗಲೂ ಸಹ ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರೆದಿದೆ. ಸದನವು ನಿಯಮಾವಳಿಗಳಂತೆ ನಡೆಯುತ್ತಿಲ್ಲ ಎಂದು ವಕ್ಫ್, ಜಾತಿ ನಿಂದನೆ ಮತ್ತಿತರ ವಿಚಾರಗಳ ಬಗ್ಗೆ ಆಡಳಿತ ಪಕ್ಷದ ಸದಸ್ಯರ ಜೊತೆ ಮಾತಿನ ಚಕಮಕಿ ನಡೆದ ಬಳಿಕ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ಶುಕ್ರವಾರ ವಿಧಾನಸಭೆಯಲ್ಲಿ ನಡೆದಿತ್ತು. ಆದರೆ, ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್ ಮಾತ್ರ ಸಭಾತ್ಯಾಗ ಮಾಡದೆ ಸದನದಲ್ಲೇ ಕುಳಿತಿದ್ದರು. ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಅವರ ಬಳಿ ಬಂದು ಕುಳಿತುಕೊಂಡಿದ್ದರು. ಇಂದಿನ ವಿಧಾನಸಭೆ ಕಲಾಪದ ನೇರಪ್ರಸಾರ ವೀಕ್ಷಿಸಿ.