ಜೀನ್ಸ್ ಪ್ಯಾಂಟ್ನಲ್ಲಿ ಅಕ್ರಮ ಚಿನ್ನ ಸಾಗಣೆ: ಬೆಂಗಳೂರು ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ - ಅಕ್ರಮ ಚಿನ್ನ
Published : Feb 22, 2024, 11:32 AM IST
ದೇವನಹಳ್ಳಿ (ಬೆಂಗಳೂರು): ಜೀನ್ಸ್ ಪ್ಯಾಂಟ್ನಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡಲೆತ್ನಿಸಿದ ಪ್ರಯಾಣಿಕನೊಬ್ಬ ಸಿಕ್ಕಿಬಿದ್ದಿದ್ದಾನೆ. ಯಾರಿಗೂ ತಿಳಿಯ ಬಾರದು ಎಂದು ಪ್ಯಾಂಟ್ ಬಾಟಮ್ ಅನ್ನು ವಿಭಿನ್ನವಾಗಿ ವಿನ್ಯಾಸ ಮಾಡಲಾಗಿದ್ದು, ಅದರೊಳಗೆ ಚಿನ್ನವನ್ನು ಮರೆಮಾಚಿ ಸಾಗಿಸಲು ಯತ್ನಿಸಿದ ಪ್ರಯಾಣಿಕ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ 22.58 ಲಕ್ಷ ಮೌಲ್ಯದ 367 ಗ್ರಾಂ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ.
ಶಾರ್ಜಾದಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನ ತಪಾಸಣೆ ಮಾಡುವಾಗ ಅಕ್ರಮ ಚಿನ್ನಸಾಗಣೆ ಯತ್ನ ಪತ್ತೆಯಾಗಿದ್ದು, ಆತನನ್ನು ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇತ್ತೀಚಿನ ಪ್ರಕರಣ: ವಾರ ಹಿಂದಷ್ಟೇ ಅಲಂಕಾರಿಕ ಅಗರಬತ್ತಿ ಕಂಟೈನರ್ನಲ್ಲಿ ಚಿನ್ನ ಅಡಗಿಸಿ ಅಕ್ರಮವಾಗಿ ಸಾಗಣೆ ಮಾಡಲೆತ್ನಿಸಿದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ. ಆತನಿಂದ 17 ಲಕ್ಷ ಮೌಲ್ಯದ 279.5 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು.
ಇದನ್ನೂ ಓದಿ: ಅಕ್ರಮ ಚಿನ್ನ ಸಾಗಣೆ; ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಬಿದ್ದ ಪ್ರಯಾಣಿಕ
ಇದನ್ನೂ ಓದಿ: ಬಿಜೆಪಿ ಕೇಂದ್ರ ನಾಯಕರ ಕಲಬುರಗಿ ಭೇಟಿ: ಎಂದೂ ಇಲ್ಲದ ಪ್ರೀತಿ ಈಗೇಕೆ ಎಂದು ಖರ್ಗೆ ಪ್ರಶ್ನೆ