ಕರ್ನಾಟಕ

karnataka

ETV Bharat / videos

ಕೊಪ್ಪಳ ಗವಿಮಠ ಜಾತ್ರೆ ನೋಡೋದಕ್ಕೆ ಜನ್ಮಾಂತರದ ಪುಣ್ಯಬೇಕು; ಚಿತ್ರನಟ ದೊಡ್ಡಣ್ಣ - Actor Doddanna

By ETV Bharat Karnataka Team

Published : Jan 29, 2024, 5:28 PM IST

ಕೊಪ್ಪಳ: ಇತಿಹಾಸ ಪ್ರಸಿದ್ಧ ಕೊಪ್ಪಳದ ಗವಿಮಠ ಜಾತ್ರೆಯನ್ನು ಕಣ್ತುಂಬಿಕೊಳ್ಳಬೇಕೆಂದರೆ ಜನ್ಮಾಂತರದ ಪುಣ್ಯಬೇಕು ಎಂದು ಕನ್ನಡದ ಹಿರಿಯ ನಟ ದೊಡ್ಡಣ್ಣ ಹೇಳಿದರು. 

ಇಂದು ಸಮಾರೋಪ ಸಮಾರಂಭ ನಡೆಯುತ್ತಿದ್ದು, ಅದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಿ ಅನ್ನದಾನ ಯಥೇಚ್ಛವಾಗಿ ನಡೆಯುತ್ತದೆಯೋ ಅಲ್ಲಿ ಸಾಕ್ಷಾತ್‌ ಈಶ್ವರ ನೆಲೆಸಿರುತ್ತಾನೆ. ನಾನು ಪೂರ್ವದ ಕುಂಭಮೇಳ ನೋಡಿದ್ದೇನೆ. ದಕ್ಷಿಣದ ಕುಂಭಮೇಳಕ್ಕೂ ಕೊಪ್ಪಳದ ಗವಿಮಠ ಜಾತ್ರೆಗೂ ಯಾವುದೇ ವ್ಯತ್ಯಾಸವಿಲ್ಲ. ಮಹಾರಥೋತ್ಸವಕ್ಕೆ ಇಷ್ಟು ಜನ ಸೇರುತ್ತಾರೆ ಅಂದರೆ ಅದು ಗವಿಸಿದ್ಧೇಶ್ವರರ ತಪಸ್ಸಿನ ಫಲ. ಹೇಳಿದರೆ ಸಾಲದು, ಅದನ್ನು ನೋಡಿಯೇ ಅನುಭವಿಸಬೇಕು. ನನ್ನ ಪತ್ನಿ ಕೂಡ ಕೊಪ್ಪಳ ಗವಿಸಿದ್ಧೇಶ್ವರನ ಪರಮಭಕ್ತೆ. ಈ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದರು. 

ದಕ್ಷಿಣ ಭಾರತದ ಕುಂಭ ಮೇಳ ಎಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳ ಗವಿಸಿದ್ದೇಶ್ವರ ಮಹಾರಥೋತ್ಸವ ಗವಿಮಠದ ಅಂಗಳದಲ್ಲಿ ಶನಿವಾರ ಸಂಜೆ 6 ಗಂಟೆಗೆ ಸುಮಾರು 7 ಲಕ್ಷಕ್ಕೂ ಅಧಿಕ ಭಕ್ತಸಾಗರದ ಮಧ್ಯೆ ವೈಭವದಿಂದ ಜರುಗಿತು. ಮಹಾರಥೋತ್ಸವಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಧ್ವಜಾರೋಹಣದ ಮೂಲಕ ಚಾಲನೆ ನೀಡಿದ್ದರು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ಫೆ.10ರ ವರೆಗೂ ಇಲ್ಲಿ ಮಹಾದಾಸೋಹ ನಡೆಯುತ್ತದೆ. 

ಇದನ್ನೂ ಓದಿ: ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಹಾದಾಸೋಹಕ್ಕೆ ಸಕಲ ಸಿದ್ಧತೆ: ವಿಡಿಯೋ

ABOUT THE AUTHOR

...view details