ನಾಗರಹೊಳೆ ಅರಣ್ಯ ಪ್ರದೇಶದ ಹಾಡಿಯಲ್ಲಿ ಸರಸರನೆ ಮರವೇರಿದ ಹೆಬ್ಬಾವು: ವಿಡಿಯೋ - A PYTHON CLIMBED THE TREE
Published : Nov 11, 2024, 9:24 PM IST
ಮೈಸೂರು: ಜಿಲ್ಲೆಯ ಹೆಚ್. ಡಿ ಕೋಟೆ ತಾಲೂಕಿನ ನಾಗರಹೊಳೆ ಅರಣ್ಯ ಪ್ರದೇಶದ ಹಾಡಿಯೊಂದರಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಸರಸರನೆ ಮರವೇರುವ ಅಪರೂಪದ ದೃಶ್ಯ ಹಾಡಿ ಜನರ ಮೊಬೈಲ್ನಲ್ಲಿ ಸೆರೆಯಾಗಿದೆ.
ಹಾಡಿ ಜನರನ್ನ ಕಂಡು ಹೆಬ್ಬಾವು ಸಮೀಪದಲ್ಲೇ ಇದ್ದ ಮರವನ್ನು ಏರಿದೆ. ಹಾವು ಮರವನ್ನು ಏರುತ್ತಿದ್ದಾಗ ಅಲ್ಲಿನ ಜನರು ಬಾಲವನ್ನು ಹಿಡಿದು ಆಶ್ಚರ್ಯಪಟ್ಟಿದ್ದಾರೆ.
''ಸಾಮಾನ್ಯವಾಗಿ ದಟ್ಟ ಅರಣ್ಯ ಪ್ರದೇಶಗಳಲ್ಲಿರುವ ಹೆಬ್ಬಾವು ಆಹಾರ ಹುಡುಕಿಕೊಂಡು ಕಾಡಂಚಿನ ಹಾಡಿ ಕಡೆ ಬರುತ್ತವೆ. ಆದರೆ, ಹೆಬ್ಬಾವು ಅಷ್ಟೊಂದು ಅಪಾಯಕಾರಿ ಅಲ್ಲ. ಅವು ತನ್ನ ಆಹಾರಕ್ಕಾಗಿ ಒಂದೆಡೆಯಿಂದ ಮತ್ತೊಂದೆಡೆ ಚಲಿಸುತ್ತವೆ. ಸಾಮಾನ್ಯವಾಗಿ ದಟ್ಟ ಅರಣ್ಯಗಳಲ್ಲಿ ಇವು ಹೆಚ್ಚಾಗಿ ಇರುತ್ತವೆ'' ಎಂದು ವನ್ಯಜೀವಿ ತಜ್ಞ ರಾಜಕುಮಾರ್ ಅರಸು ಈಟಿವಿ ಭಾರತಗೆ ಮಾಹಿತಿ ನೀಡಿದರು.
ಮಡಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಹೆಬ್ಬಾವು ಪತ್ತೆ : ಮಂಡ್ಯ ಜಿಲ್ಲೆ ಹಲಗೂರು ಸಮೀಪದ ಮಡಳ್ಳಿ ಗ್ರಾಮದಲ್ಲಿ ಚಲುವರಾಜು ಎಂಬವರ ಜಮೀನಿನಲ್ಲಿ (ಅಕ್ಟೋಬರ್- 27-24) 12 ಅಡಿ ಉದ್ದದ ಬೃಹತ್ ಹೆಬ್ಬಾವು ಪ್ರತ್ಯಕ್ಷವಾಗಿತ್ತು.
ಇದನ್ನೂ ಓದಿ : ಮಂಡ್ಯ: ಮಡಳ್ಳಿ ಗ್ರಾಮದ ರೈತರ ಜಮೀನಿನಲ್ಲಿ 12 ಅಡಿ ಉದ್ದದ ಹೆಬ್ಬಾವು ಪತ್ತೆ