ಕರ್ನಾಟಕ

karnataka

ETV Bharat / technology

ಹೊಸ ಫೀಚರ್​ ಪರಿಚಯಿಸಿದ ಜೊಮ್ಯಾಟೊ: ಇನ್ಮುಂದೆ ನಿಮ್ಮ ಇಷ್ಟದ ಸಮಯಕ್ಕೆ ಹೀಗೆ ಆರ್ಡರ್​ ಶೆಡ್ಯೂಲ್​ ಮಾಡಿಕೊಳ್ಳಿ!

Zomato New Order Scheduling Feature: ಜೊಮ್ಯಾಟೊ ತನ್ನ ಗ್ರಾಹಕರಿಗೆ ಹೊಸ ಫೀಚರ್​ವೊಂದನ್ನು ಪರಿಚಯಿಸಿದೆ. ಆನ್​ನಲ್ಲಿ ಫುಡ್​ ಆರ್ಡರ್​ ಮಾಡುವ ಗ್ರಾಹಕರು ತಮ್ಮ ಇಷ್ಟವಾದ ಸಮಯಕ್ಕೆ ಬೇಕಾದಂತೆ ಶೆಡ್ಯೂಲ್ ಬುಕ್​ ಮಾಡಬಹುದಾಗಿದೆ.

ZOMATO NEW FEATURE  ZOMATO FOOD DELIVERY  HOW TO SCHEDULE DELIVERY ON ZOMATO
ಹೊಸ ಫೀಚರ್​ ಪರಿಚಯಿಸಿದ ಜೊಮ್ಯಾಟೊ (Getty Images)

By ETV Bharat Tech Team

Published : 4 hours ago

Zomato New Order Scheduling Feature:ಪ್ರಮುಖ ಆಹಾರ ವಿತರಣಾ ವೇದಿಕೆಯಾಗಿರುವ ಜೊಮ್ಯಾಟೋ ತನ್ನ ಗ್ರಾಹಕರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಜೊಮ್ಯಾಟೊ ತನ್ನ ಆಹಾರ ಪ್ರಿಯರಿಗೆ ತುಂಬಾ ಉಪಯುಕ್ತವಾಗುವ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. 'ಆರ್ಡರ್ ಶೆಡ್ಯೂಲಿಂಗ್' ಎಂಬ ಈ ವೈಶಿಷ್ಟ್ಯದೊಂದಿಗೆ ಅಪ್ಲಿಕೇಶನ್ ಬಳಕೆದಾರರು ಎರಡು ದಿನ ಮುಂಚಿತವಾಗಿ ಆಹಾರವನ್ನು ಆರ್ಡರ್ ಮಾಡಬಹುದು. ನೀವು ಡೆಲಿವರಿ ಸಮಯವನ್ನು ಸಹ ಆಯ್ಕೆ ಮಾಡಬಹುದು.

ಆಫೀಸ್​ ಲಂಚ್​, ವಿಕೆಂಡ್​ ಮೀಟಿಂಗ್ಸ್​ ಮತ್ತು ಇತರ ಯಾವುದೇ ಸಂದರ್ಭದಲ್ಲಿ ಆಹಾರವನ್ನು 2 ಗಂಟೆಗಳಿಂದ ಎರಡು ದಿನಗಳವರೆಗೆ ಮುಂಚಿತವಾಗಿ ನಿಗದಿಪಡಿಸಬಹುದು. ಈ ವೈಶಿಷ್ಟ್ಯವು ಪ್ರಸ್ತುತ ದೆಹಲಿ, ಬೆಂಗಳೂರು, ಮುಂಬೈ, ಪುಣೆ, ರಾಯಪುರ, ಅಹಮದಾಬಾದ್ ಸೇರಿದಂತೆ 30 ಪ್ರಮುಖ ನಗರಗಳಲ್ಲಿ 35,000 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಲ್ಲಿ ಲಭ್ಯವಿದೆ. ಆಹಾರ ಆರ್ಡರ್ ಮಾಡುವ ಪ್ರಕ್ರಿಯೆಯನ್ನು ಗ್ರಾಹಕರಿಗೆ ಸಾಧ್ಯವಾದಷ್ಟು ಅನುಕೂಲಕರವಾಗಿಸುವ ಉದ್ದೇಶದಿಂದ ಕಂಪನಿಯು ಈ ವೈಶಿಷ್ಟ್ಯ ಪರಿಚಯಿಸಿದೆ.

ಹೊಸ ವೈಶಿಷ್ಟ್ಯದ ಕಾರ್ಯ ವಿಧಾನ:

  • ಆರ್ಡರ್ ಶೆಡ್ಯೂಲಿಂಗ್ ವೈಶಿಷ್ಟ್ಯದೊಂದಿಗೆ, ಬಳಕೆದಾರರು ತಮ್ಮ ಆಯ್ಕೆಯ ಆಹಾರವನ್ನು 2 ಗಂಟೆಗಳಿಂದ ಎರಡು ದಿನಗಳವರೆಗೆ ಮುಂಚಿತವಾಗಿ ಆರ್ಡರ್ ಮಾಡಬಹುದು ಮತ್ತು ನಿಗದಿಪಡಿಸಬಹುದು.
  • ಈ ವೈಶಿಷ್ಟ್ಯವನ್ನು ಬಳಸಲು ಮೊದಲು ಜೊಮ್ಯಾಟೊ ಅಪ್ಲಿಕೇಶನ್ ತೆರೆಯಿರಿ. ಅಲ್ಲಿ ಡೆಲಿವರಿ ಟ್ಯಾಬ್‌ನ ಅಡಿ 'ಆಲ್​ ರೆಸ್ಟೋರೆಂಟ್ಸ್​' ವಿಭಾಗಕ್ಕೆ ಹೋಗಿ.
  • ಆಗ ‘ಶೆಡ್ಯೂಲ್’ ಹೆಸರಿನ ಹೊಸ ಆಯ್ಕೆ ಕಾಣಿಸುತ್ತದೆ.
  • ಅದರ ಮೇಲೆ ಕ್ಲಿಕ್​ ಮಾಡಿ ಮತ್ತು ನಿಮ್ಮ ಆದ್ಯತೆಯ ದಿನಾಂಕ ಅಥವಾ ಸಮಯವನ್ನು ಆಯ್ಕೆಮಾಡಿ.
  • ಈಗ ಜೊಮ್ಯಾಟೊ ಅಪ್ಲಿಕೇಶನ್ ನಿಮ್ಮ ಪ್ರದೇಶದಲ್ಲಿ ಲಭ್ಯವಿರುವ ರೆಸ್ಟೋರೆಂಟ್‌ಗಳ ಪಟ್ಟಿಯನ್ನು ತೋರಿಸುತ್ತದೆ.
  • ನಿಮಗೆ ಬೇಕಾದ ಆಹಾರವನ್ನು ಕಾರ್ಟ್‌ಗೆ ಸೇರಿಸಿ.
  • ಈಗ ಬಿಲ್ ಸಾರಾಂಶ ಪುಟದಲ್ಲಿ 'ಇದು ಶೆಡ್ಯೂಲ್ಡ್ ಡೆಲಿವರಿ' ಎಂದು ಹೇಳುವ ಕಾರ್ಡ್ ಕಾಣಿಸುತ್ತದೆ. ಆಗ ನಿಮ್ಮ ಡೆಲಿವರಿ ಸಮಯಕ್ಕೆ ಕೆಲವು ನಿಮಿಷಗಳ ಮೊದಲು ಆರ್ಡರ್ ಸಿದ್ಧವಾಗುತ್ತದೆ.
  • ನಿಮ್ಮ ಯೋಜನೆಗಳನ್ನು ನೀವು ಬದಲಾಯಿಸಿದರೆ ಅಥವಾ ನಿಗದಿತ ಆಹಾರ ವಿತರಣೆಯನ್ನು ಬಯಸದಿದ್ದರೆ, ನಿಗದಿತ ಸಮಯಕ್ಕಿಂತ ಮೂರು ಗಂಟೆಗಳ ಮೊದಲು ನಿಮ್ಮ ಆರ್ಡರ್ ನೀವು ಕ್ಯಾನ್ಸಲ್​ ಮಾಡಬಹುದು.

ಭದ್ರತಾ ಕ್ರಮಗಳು:

  • ಎಲ್ಲವೂ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಜೊಮ್ಯಾಟೊ ಈ ಹೊಸ ವೈಶಿಷ್ಟ್ಯದೊಂದಿಗೆ ಭದ್ರತಾ ಕ್ರಮಗಳನ್ನು ಪರಿಚಯಿಸಿದೆ. ಸಮಯೋಚಿತ ತಯಾರಿ ಮತ್ತು ಹೆಚ್ಚಿನ ಲಭ್ಯತೆಯ ದಾಖಲೆ ಹೊಂದಿರುವ ರೆಸ್ಟೋರೆಂಟ್‌ಗಳು ಮಾತ್ರ ಈ ವೈಶಿಷ್ಟ್ಯಕ್ಕೆ ಅರ್ಹವಾಗಿರುತ್ತವೆ.
  • ಗ್ರಾಹಕರ ನಿಗದಿತ ಆರ್ಡರ್‌ಗಳಿಗಿಂತ ಮುಂಚಿತವಾಗಿ ರೆಸ್ಟೋರೆಂಟ್‌ಗಳಿಗೆ ನೋಟಿಫಿಕೆಷನ್ ಹೋಗುತ್ತದೆ.
  • ಪ್ರಿ-ಆರ್ಡರ್‌ಗಾಗಿ ಲಭ್ಯವಿರುವ ವಸ್ತುಗಳ ವಿವರಗಳು ಸಹ ರೆಸ್ಟೋರೆಂಟ್‌ಗಳ ನಿಯಂತ್ರಣದಲ್ಲಿರುತ್ತವೆ.
  • ಇದು ಕೊನೆಯ ನಿಮಿಷದ ಬದಲಿ ಮತ್ತು ಕೊರತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಓದಿ:ನ್ಯೂ ಜನರೇಷನ್​ ಮಾರುತಿ ಸುಜುಕಿ ಡಿಜೈರ್​ ಬಿಡುಗಡೆ ದಿನಾಂಕ ಘೋಷಣೆ: ಇದರ ವೈಶಿಷ್ಟ್ಯ, ವಿನ್ಯಾಸ ಹೇಗಿದೆ ಗೊತ್ತಾ?

ABOUT THE AUTHOR

...view details