Redmi 14C 5G:Xiaomi ಉಪ-ಬ್ರ್ಯಾಂಡ್ ರೆಡ್ಮಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ 5G ಸ್ಮಾರ್ಟ್‌ಫೋನ್ ರಿಲೀಸ್ ಮಾಡಿದೆ. ಚೀನಾದ ಸ್ಮಾರ್ಟ್‌ಫೋನ್ ಕಂಪನಿ Xiaomi ಬಜೆಟ್ ಶ್ರೇಣಿಯಲ್ಲಿ ರೆಡ್ಮಿ 14ಸಿ 5ಜಿ ಸ್ಮಾರ್ಟ್‌ಫೋನ್ ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಬೆಲೆ 10 ಸಾವಿರ ರೂಪಾಯಿ.
ರೆಡ್ಮಿ 13ಸಿ ಅಪ್ಡೇಟೇಡ್ ಆವೃತ್ತಿಯಾಗಿದೆ. ಇದರಲ್ಲಿ ಬಳಕೆದಾರರು ಹೊಸ ವಿನ್ಯಾಸ, ಬಿಗ್ ಸ್ಕ್ರೀನ್ ಮತ್ತು ಬ್ಯಾಟರಿ, ವೇಗದ ಪ್ರೊಸೆಸರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆಯಬಹುದು.
ಡಿಸ್‌ಪ್ಲೇ: Redmi 14C 5G ಸ್ಮಾರ್ಟ್‌ಫೋನ್ 6.88-ಇಂಚಿನ HD ಪ್ಲಸ್ ಪಂಚ್-ಹೋಲ್ ಡಿಸ್‌ಪ್ಲೇ ಹೊಂದಿದೆ. ರಿಫ್ರೆಶ್ ರೇಟ್ 120Hz. ಫೋನ್‌ನ ಹಿಂಭಾಗ ಗ್ಲಾಸ್ ಬ್ಯಾಕ್ ಡಿಸೈನ್ ಹೊಂದಿದೆ.
ಪ್ರೊಸೆಸರ್: Qualcomm Snapdragon 4 Gen 2 ಚಿಪ್‌ಸೆಟ್ ಹೊಂದಿದೆ.
ಸಾಫ್ಟ್‌ವೇರ್:ಆಂಡ್ರಾಯ್ಡ್ 14 ಆಧಾರಿತ Xiaomi HyperOS.
ಕ್ಯಾಮೆರಾ:50MP ರಿಯರ್ ಕ್ಯಾಮೆರಾ ಮತ್ತು 2MP ಸೆಕೆಂಡರಿ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ:5160mAh ಬ್ಯಾಟರಿ ಹೊಂದಿದೆ. 18W ಸ್ಪೀಡ್ ಚಾರ್ಜಿಂಗ್ ಸಪೋರ್ಟ್ ಜೊತೆ ಬರುತ್ತದೆ. ಫೋನ್ ಬಾಕ್ಸ್‌ನಲ್ಲಿ ನೀವು 33W ಸ್ಪೀಡ್ ಚಾರ್ಜರ್ ಪಡೆಯುತ್ತೀರಿ.