ಕರ್ನಾಟಕ

karnataka

ETV Bharat / technology

ಭಾರತದಲ್ಲಿ 93 ಕೋಟಿ ದಾಟಿದ ಇಂಟರ್​ನೆಟ್​ ಬಳಕೆದಾರರ ಸಂಖ್ಯೆ: ಟ್ರಾಯ್​ - Internet Users In India - INTERNET USERS IN INDIA

ಭಾರತದಲ್ಲಿ ಇಂಟರ್​ನೆಟ್​ ಬಳಕೆದಾರರ ಸಂಖ್ಯೆ ಶೇ 1.96 ರಷ್ಟು ಏರಿಕೆಯಾಗಿದೆ.

Internet subscribers reach 936.16 million in India
Internet subscribers reach 936.16 million in India

By ETV Bharat Karnataka Team

Published : Apr 23, 2024, 8:07 PM IST

ನವದೆಹಲಿ: ಭಾರತದಲ್ಲಿ ಇಂಟರ್ ನೆಟ್ ಚಂದಾದಾರರ ಸಂಖ್ಯೆ 2023 ರ ಡಿಸೆಂಬರ್ ಅಂತ್ಯದ ವೇಳೆಗೆ 936.16 ಮಿಲಿಯನ್ (93 ಕೋಟಿ)ಗೆ ತಲುಪಿದ್ದು, ತ್ರೈಮಾಸಿಕದಲ್ಲಿ ಶೇ 1.96 ರಷ್ಟು ಬೆಳವಣಿಗೆಯಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿ ಇಂಟರ್​ ನೆಟ್​ ಬಳಕೆದಾರರ ಸಂಖ್ಯೆ 918.19 ಮಿಲಿಯನ್ ಆಗಿತ್ತು ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಮಂಗಳವಾರ ತಿಳಿಸಿದೆ.

936.16 ಮಿಲಿಯನ್ ಇಂಟರ್ ನೆಟ್ ಚಂದಾದಾರರ ಪೈಕಿ ವೈರ್ಡ್ ಇಂಟರ್​ ನೆಟ್ ಚಂದಾದಾರರ ಸಂಖ್ಯೆ 38.57 ಮಿಲಿಯನ್ ಮತ್ತು ವೈರ್ ಲೆಸ್ ಇಂಟರ್ ನೆಟ್ ಚಂದಾದಾರರ ಸಂಖ್ಯೆ 897.59 ಮಿಲಿಯನ್ ಆಗಿದೆ. ಇದರಲ್ಲಿ ಬ್ರಾಡ್​ಬ್ಯಾಂಡ್​ ಇಂಟರ್ ನೆಟ್ ಚಂದಾದಾರರ ಸಂಖ್ಯೆ 904.54 ಮಿಲಿಯನ್ ಮತ್ತು ನ್ಯಾರೋ ಬ್ಯಾಂಡ್ ಚಂದಾದಾರರ ಸಂಖ್ಯೆ 31.62 ಮಿಲಿಯನ್ ಆಗಿದೆ ಎಂದು ವರದಿ ತಿಳಿಸಿದೆ.

ವೈರ್ ಲೆಸ್ ಬಳಸುವ ಪ್ರತಿ ಬಳಕೆದಾರರಿಂದ ಬರುವ ಮಾಸಿಕ ಸರಾಸರಿ ಆದಾಯ (ಎಆರ್​ಪಿಯು) ಶೇಕಡಾ 1.93 ರಷ್ಟು ಹೆಚ್ಚಾಗಿದೆ. ಇದು ಸೆಪ್ಟೆಂಬರ್​ನಲ್ಲಿ 149.66 ರೂ. ಇದ್ದದ್ದು ಡಿಸೆಂಬರ್​ನಲ್ಲಿ 152.55 ರೂ.ಗೆ (ವರ್ಷದಿಂದ ವರ್ಷಕ್ಕೆ) ಏರಿಕೆಯಾಗಿದೆ.

ಟ್ರಾಯ್ ವರದಿಯ ಪ್ರಕಾರ, ಭಾರತದಲ್ಲಿ ದೂರವಾಣಿ ಚಂದಾದಾರರ ಸಂಖ್ಯೆ ಸೆಪ್ಟೆಂಬರ್ ಅಂತ್ಯದಲ್ಲಿ 1,181.13 ಮಿಲಿಯನ್ (1.18 ಬಿಲಿಯನ್ ಗಿಂತ ಹೆಚ್ಚು) ಇದ್ದುದು ಡಿಸೆಂಬರ್ ಅಂತ್ಯದ ವೇಳೆಗೆ 1,190.33 ಮಿಲಿಯನ್ (1.19 ಬಿಲಿಯನ್ ಗಿಂತ ಹೆಚ್ಚು) ಗೆ ಏರಿಕೆಯಾಗಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಶೇಕಡಾ 0.78 ರಷ್ಟು ಬೆಳವಣಿಗೆಯಾಗಿದೆ.

ಭಾರತದಲ್ಲಿ ಒಟ್ಟಾರೆ ದೂರಸಂಪರ್ಕ ದಟ್ಟಣೆ (ಟೆಲಿಡೆನ್ಸಿಟಿ) ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 84.76 ರಿಂದ ಶೇಕಡಾ 85.23 ಕ್ಕೆ ಏರಿದೆ. ನಗರ ಪ್ರದೇಶಗಳಲ್ಲಿ ದೂರವಾಣಿ ಚಂದಾದಾರರ ಸಂಖ್ಯೆ 658.46 ಮಿಲಿಯನ್ ನಿಂದ 662.56 ಮಿಲಿಯನ್​ಗೆ ಹೆಚ್ಚಾಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ದೂರವಾಣಿ ಚಂದಾದಾರರ ಸಂಖ್ಯೆ 522.66 ಮಿಲಿಯನ್​ನಿಂದ 527.77 ಮಿಲಿಯನ್​ಗೆ ಏರಿಕೆಯಾಗಿದೆ.

"ಪೇ ಡಿಟಿಎಚ್ (ಡೈರೆಕ್ಟ್​ ಟು ಹೋಮ್) ಒಟ್ಟು ಸಕ್ರಿಯ ಚಂದಾದಾರರ ಸಂಖ್ಯೆ ಸುಮಾರು 63.52 ಮಿಲಿಯನ್​ಗೆ ತಲುಪಿದೆ. ಇದು ಡಿಡಿ ಫ್ರೀ ಡಿಶ್ (ದೂರದರ್ಶನದ ಉಚಿತ ಡಿಟಿಎಚ್ ಸೇವೆಗಳು) ಹೊರತುಪಡಿಸಿದ ಸಂಖ್ಯೆಯಾಗಿದೆ" ಎಂದು ಟ್ರಾಯ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ಗೂಗಲ್, ಎನ್ವಿಡಿಯಾದ ಎಐ ತಂತ್ರಜ್ಞಾನದಿಂದ ಚಂಡಮಾರುತಗಳ ನಿಖರ ಮುನ್ಸೂಚನೆ ಸಾಧ್ಯ: ವರದಿ - Artificial intelligence

For All Latest Updates

ABOUT THE AUTHOR

...view details