ಕರ್ನಾಟಕ

karnataka

ETV Bharat / technology

ಸೂರ್ಯಗ್ರಹಣದ ಅದ್ಭುತ ವಿಡಿಯೋ ಹಂಚಿಕೊಂಡ ನಾಸಾ, ಎಲೋನ್ ಮಸ್ಕ್ - Solar Eclipse video - SOLAR ECLIPSE VIDEO

ಖಗೋಳದಲ್ಲಿ ನಡೆದ ಸೂರ್ಯಗ್ರಹಣದ ಚಮತ್ಕಾರದ ವಿಡಿಯೋವನ್ನು ನಾಸಾ ಮತ್ತು ಎಲೋನ್ ಮಸ್ಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸೂರ್ಯಗ್ರಹಣದ
ಸೂರ್ಯಗ್ರಹಣದ

By ETV Bharat Karnataka Team

Published : Apr 9, 2024, 4:52 PM IST

ಭೂಮಿಯ ಕಕ್ಷೆಯಿಂದ ಸ್ಟಾರ್​ಲಿಂಕ್​ ಉಪಗ್ರಹ ಸೆರೆಹಿಡಿದ ಸಂಪೂರ್ಣ ಸೂರ್ಯಗ್ರಹಣದ ಕಿರು ವಿಡಿಯೋವನ್ನು ಖಾಸಗಿ ಬಾಹ್ಯಾಕಾಶ ನೌಕೆ 'ಸ್ಪೇಸ್-ಎಕ್ಸ್'ನ ಸಂಸ್ಥಾಪಕ ಮತ್ತು ಖ್ಯಾತ ಉದ್ಯಮಿ​ ಎಲೋನ್​ ಮಸ್ಕ್​ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸ್ಟಾರ್‌ಲಿಂಕ್ ಏರೋಸ್ಪೇಸ್ ಕಂಪನಿ ಸ್ಪೇಸ್‌ಎಕ್ಸ್‌ನ ಉಪಗ್ರಹವಾಗಿದ್ದು, ಎಲೋನ್​ ಮಸ್ಕ್ ಅವರ ಒಡೆತನದಲ್ಲಿದೆ.​ ಎಕ್ಸ್​ ಆ್ಯಪ್​ನಲ್ಲಿ ವಿಡಿಯೋ ಹಂಚಿಕೊಂಡಿರುವ ಎಲೋನ್​ ಮಸ್ಕ್, ​"ಆಸ್ಟಿನ್‌ನಿಂದ ಗ್ರಹಣವನ್ನು ನೋಡಲು ತಂಪಾಗಿತ್ತು. 27 ವರ್ಷಗಳ ಹಿಂದೆ ಇಂತಹದೇ ಗ್ರಹಣ ಸಂಭವಿಸಿತ್ತು. ಇದೀಗ ಮತ್ತೆ ಗ್ರಹಣ ಸಂಭವಿಸಿದೆ ಎಂದು ಬರೆದು ಕೊಂಡಿದ್ದಾರೆ.

ಅಮೆರಿಕನ್ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಸಹ ಬಾಹ್ಯಾಕಾಶದಲ್ಲಿ ಜರುಗಿದ ಸೂರ್ಯಗ್ರಹಣ ವಿಸ್ಮಯ ವಿಡಿಯೋವನ್ನು ಇಂಡಿಯಾನಾಪೊಲೀಸ್‌ ನಗರದಲ್ಲಿ ಹಂಚಿಕೊಂಡಿದೆ. ನಾಸಾದ ಪ್ರಕಾರ, 800 ವರ್ಷಗಳ ನಂತರ ಇದೇ ಮೊದಲು ಇಂಡಿಯಾನಾಪೊಲಿಸ್‌ ನಗರವು ಸೂರ್ಯಗ್ರಹಣವನ್ನು ನೋಡಿರುವುದಾಗಿ ಹೇಳಿದೆ. ಸೂರ್ಯಗ್ರಹಣದ ಖಗೋಳ ಘಟನೆಯನ್ನು ತೋರಿಸಲು ನಾಸಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಕೂಡಾ ಪ್ರಸಾರ ಮಾಡಿತ್ತು.

ನ್ಯೂಯಾರ್ಕ್‌ನ ಪಶ್ಚಿಮ ಮತ್ತು ಉತ್ತರ ಪ್ರದೇಶಗಳಲ್ಲಿ ಸಂಪೂರ್ಣ ಗ್ರಹಣ ಕಂಡುಬಂದಿದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ವಿಶೇಷ ಕನ್ನಡಕಗಳ ವ್ಯವಸ್ಥೆ ಮಾಡಲಾಗಿತ್ತು. ಆಕಾಶದಿಂದ ಈ ಅದ್ಭುತ ನೋಟವನ್ನು ನೋಡಲು ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಾಗಿತ್ತು. ಸಂಪೂರ್ಣ ಸೂರ್ಯಗ್ರಹಣವು ಸೋಮವಾರ ಉತ್ತರ ಅಮೆರಿಕಾದಾದ್ಯಂತ ಕಾಣಿಸಿಕೊಂಡಿದೆ. ಸೂರ್ಯ ಗ್ರಹಣದ ಚಮತ್ಕಾರವನ್ನು ವೀಕ್ಷಿಸಲು ಸಾಕಷ್ಟು ಜನರು ರೋಮಾಂಚನಗೊಂಡಿದ್ದರು.

ಇದನ್ನೂ ಓದಿ :ದೊಡ್ಡ ಫಾಲೋವರ್ ಖಾತೆಗೆ ಮತ್ತೆ ಉಚಿತವಾಗಿ ಬ್ಲೂ ಟಿಕ್ ನೀಡಿದ ಎಕ್ಸ್ - X Free Blue tick

ABOUT THE AUTHOR

...view details