ನವದೆಹಲಿ: ಸುರಕ್ಷತೆ, ಅತ್ಯುತ್ತಮ ಗುಣಮಟ್ಟದ ಜೊತೆಗೆ ಹೊಸ ನಾವೀನ್ಯತೆಯಿಂದಾಗಿ ಐಫೋನ್ ಗ್ರಾಹಕರನ್ನು ಸೆಳೆಯುತ್ತಲೇ ಇದೆ. ಇದರಿಂದಾಗಿ ಇದಕ್ಕೆ ಬೇಡಿಕೆ ಹೆಚ್ಚಿದ್ದು, ಮಾರಾಟದಿಂದ ಆದಾಯದ ಸಂಗ್ರಹ ಕೂಡ ಹೆಚ್ಚುತ್ತಲೇ ಇದೆ. ಆದರೆ, ಐಫೋನ್ ಇತಿಹಾಸದಲ್ಲೇ ದಾಖಲೆ ಮಟ್ಟದ ಆದಾಯ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಂದಿದೆ ಎಂದು ವರದಿ ತಿಳಿಸಿದೆ
ವರ್ಷ ಆರಂಭದ ಮೊದಲ ತ್ರೈಮಾಸಿಕದಲ್ಲಿ ಕುಸಿತ ಕಂಡರೂ ಟೆಕ್ ದೈತ್ಯ ಕಂಪನಿಯಾಗಿರುವ ಆಪಲ್ ಇದುವರೆಗೂ ಐಫೋನ್ ಮಾರಾಟದಿಂದ 1.95 ಟ್ರಿಲಿಯನ್ ಗಳಿಸಿದೆ ಎಂದು ವರದಿ ತಿಳಿಸಿದೆ. ಐಫೋನ್ ಆರಂಭವಾದಾಗಿನಿಂದಲೂ ಗಳಿಸಿದ ದಾಖಲೆ ಮಟ್ಟದ ಆದಾಯ ಇದಾಗಿದೆ.
2024ರ ಮೊದಲ ತ್ರೈಮಾಸಿಕದಲ್ಲಿ ಆಪಲ್ 50.1 ಮಿಲಿಯನ್ ಸ್ಮಾರ್ಟ್ಫೋನ್ ಅನ್ನು ರವಾನಿಸಿದೆ. ಕಳೆದ ತ್ರೈಮಾಸಿಕ ಅವಧಿಗೆ ಹೋಲಿಕೆ ಮಾಡಿದಾಗ ಐದು ಮಿಲಿಯನ್ ಕಡಿಮೆಯಾಗಿದೆ. ಆದಾಗ್ಯೂ ಐಫೋನ್ ಮಾರಾಟದ ಆದಾಯವೂ ಶೇ 10ರಷ್ಟು ಕುಸಿದಿದ್ದು, 45.9 ಟ್ರಿಲಿಯನ್ಗೆ ತಲುಪಿದೆ ಎಂದು ಸ್ಟಾಕ್ಲಿಟಿಕ್ಸ್.ಕಾಮ್ ದತ್ತಾಂಶದೊಂದಿಗೆ ವರದಿ ಮಾಡಿದೆ.
ಆಪಲ್ ತನ್ನ ಮೊದಲ ಐಫೋನ್ ಮಾರಾಟ ಮಾಡಿದ ಐದು ವರ್ಷಗಳ ನಂತರ ಐಫೋನ್ ಮಾರಾಟದಿಂದ 78.7 ಡಾಲರ್ ಬಿಲಿಯನ್ ಆದಾಯ ಗಳಿಸಿದೆ. ಇದಾದ ಎರಡು ವರ್ಷದ ಬಳಿಕ ಅಂದರೆ, 2014ರಲ್ಲಿ ಈ ಅಂಕಿ - ಅಂಶ 101.9 ಬಿಲಿಯನ್ ಡಾಲರ್ಗೆ ಜಿಗಿತಗೊಂಡಿತು ಎಂದು ಅಧಿಕೃತ ಕಂಪನಿಯ ಡೇಟಾ ತಿಳಿಸಿದೆ.