ಕರ್ನಾಟಕ

karnataka

ETV Bharat / technology

ಹೆಣ್ಮಕ್ಕಳೇ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಆನ್‌ಲೈನ್‌ನಲ್ಲಿ ಈ ರೀತಿ ದೂರು ಸಲ್ಲಿಸಿ - HOW TO FILE COMPLAINT ON NWC - HOW TO FILE COMPLAINT ON NWC

HOW TO FILE COMPLAINT ON NWC: ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಆನ್‌ಲೈನ್‌ನ ಮೂಲಕ ದೂರು ಸಲ್ಲಿಸಬಹುದಾಗಿದೆ. ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರು NWC ಯ ಅಧಿಕೃತ ವೆಬ್‌ಸೈಟ್ ಮೂಲಕ ಕೇವಲ 5 ಹಂತಗಳಲ್ಲಿ ದೂರು ಸಲ್ಲಿಸಬಹುದು. ನಾವು ಯಾವರೀತಿ ದೂರು ಸಲ್ಲಿಸಬಹುದು ಎಂಬುದನ್ನ ಈ ಸುದ್ದಿಯಲ್ಲಿ ತಿಳಿಯುವ ಪ್ರಯತ್ನ ಮಾಡೋಣ.

NWC ONLINE COMPLAINT PROCEDURE  NATIONAL WOMEN COMMISSION  NATIONAL WOMEN COMMISSION WEBSITE  NATIONAL WOMEN COMMISSION NEWS
ಹೆಣ್ಮಕ್ಕಳೇ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಆನ್‌ಲೈನ್‌ನಲ್ಲಿ ಈ ರೀತಿ ದೂರು ಸಲ್ಲಿಸಿ (NWC)

By ETV Bharat Tech Team

Published : Sep 6, 2024, 5:06 PM IST

HOW TO FILE COMPLAINT ON NWC:ಹೆಚ್ಚಿನ ಮಹಿಳೆಯರು ಕೆಲಸದ ಸ್ಥಳಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯ ಎದುರಿಸುತ್ತಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಸಹಾಯಕ್ಕಾಗಿ ಏನು ಮಾಡಬೇಕು ಮತ್ತು ಯಾರನ್ನು ಸಂಪರ್ಕಿಸಬೇಕು ಎಂದು ತಿಳಿದಿರುವುದಿಲ್ಲ. ಮಹಿಳೆಯರು ಲೈಂಗಿಕ ದೌರ್ಜನ್ಯ, ಲಿಂಗ ತಾರತಮ್ಯ ಮತ್ತು ಕೌಟುಂಬಿಕ ಹಿಂಸೆಯಂತಹ ಹಿಂಸೆಯನ್ನು ಎದುರಿಸಿದರೆ, ಅವರು ರಾಷ್ಟ್ರೀಯ ಮಹಿಳಾ ಆಯೋಗವನ್ನು ಸಂಪರ್ಕಿಸಿಬೇಕು. ಆಗ ಅವರಿಗೆ ಕಾನೂನು ನೆರವು ಮತ್ತು ಪರಿಹಾರ ಕ್ರಮಗಳು ದೊರೆಯುತ್ತವೆ. ಈಗ ನೀವು ಮೊಬೈಲ್ ಫೋನ್ ಮೂಲಕವೂ ಆನ್‌ಲೈನ್‌ನಲ್ಲಿ ದೂರು ಸಲ್ಲಿಸಬಹುದು.

ಹಂತ 1 (NWC)
ಹಂತ 3 (NWC)

ರಾಷ್ಟ್ರೀಯ ಮಹಿಳಾ ಆಯೋಗದ ಕಾರ್ಯಗಳೇನು?: ರಾಷ್ಟ್ರೀಯ ಮಹಿಳಾ ಆಯೋಗವನ್ನು ಜನವರಿ 1992 ರಲ್ಲಿ ವುಮೆನ್​​ ಕಮಿಷನ್​ ಕಾಯಿದೆ 1990ರ ಅಡಿ ಸ್ಥಾಪಿಸಲಾಯಿತು. ಮಹಿಳಾ ಆಯೋಗದ ಉದ್ದೇಶಗಳು ಮಹಿಳೆಯರಿಗೆ ಸಾಂವಿಧಾನಿಕ ಮತ್ತು ಕಾನೂನು ರಕ್ಷಣೆಗಳನ್ನು ಪರಿಶೀಲಿಸುವುದು, ಪರಿಹಾರ ಶಾಸಕಾಂಗ ಕ್ರಮಗಳನ್ನು ಶಿಫಾರಸು ಮಾಡುವುದು, ಮಹಿಳೆಯರಿಗೆ ಸರಿಯಾದ ಹಕ್ಕುಗಳನ್ನು ಖಾತ್ರಿಪಡಿಸುವ ಮೂಲಕ ಸಮಾನ ಭಾಗವಹಿಸುವಿಕೆಯನ್ನು ಸಾಧಿಸಲು ಅನುವು ಮಾಡಿಕೊಡುವುದು, ಕುಂದುಕೊರತೆಗಳನ್ನು ನಿವಾರಿಸುವುದು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುವ ಎಲ್ಲ ನೀತಿ ವಿಷಯಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದಾಗಿದೆ. ಮಹಿಳಾ ಆಯೋಗವು ದೂರು ಮತ್ತು ತನಿಖಾ, ಕಾನೂನು, ಪಿಎಂಆರ್, ಅನಿವಾಸಿ ಭಾರತೀಯ ಸೇರಿದಂತೆ ಹಲವಾರು ವಿಭಾಗಗಳನ್ನು ಹೊಂದಿದೆ.

ಹಂತ 2 (NWC)

ದೂರು ದಾಖಲಿಸುವುದು ಹೇಗೆ?:ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಆನ್‌ಲೈನ್‌ನಲ್ಲಿ ದೂರು ಸಲ್ಲಿಸಲು ಉದ್ದೇಶಿಸಿರುವವರು ಆಯೋಗದ ಅಧಿಕೃತ ವೆಬ್‌ಸೈಟ್ http://ncw.nic.inಅಥವಾ http://ncwapps.nic.inಅಡಿ ದೂರು ಸಲ್ಲಿಸಬಹುದು. ನಿಮ್ಮ ದೂರನ್ನು ಬೆಂಬಲಿಸುವ ದಾಖಲೆಗಳನ್ನು ನೀವು ಹೊಂದಿದ್ದರೆ, ನೀವು ಅವುಗಳನ್ನು ಆನ್‌ಲೈನ್‌ನಲ್ಲಿ ಲಗತ್ತಿಸಬಹುದು, ಪೋಸ್ಟ್ ಮೂಲಕ ಕಳುಹಿಸಬಹುದು ಅಥವಾ ವೈಯಕ್ತಿಕವಾಗಿ ಅವುಗಳನ್ನು ತಲುಪಿಸಬಹುದು. ಸಹಾಯವಾಣಿ ಸಂಖ್ಯೆಗಳಾದ 011-26944880 ಮತ್ತು 26944883ಗೆ ಕರೆ ಮಾಡುವ ಮೂಲಕವೂ ಸಹಾಯ ಪಡೆಯಬಹುದು.

ಹಂತ 4 (NWC)

ರಾಷ್ಟ್ರೀಯ ಮಹಿಳಾ ಆಯೋಗದ ಕಾಯಿದೆಯ ಸೆಕ್ಷನ್ 10 ರ ಅಡಿ , ಮೌಖಿಕವಾಗಿ, ಲಿಖಿತವಾಗಿ ಅಥವಾ ಸ್ವಯಂಪ್ರೇರಣೆಯಿಂದ ಸ್ವೀಕರಿಸಿದ ಎಲ್ಲಾ ದೂರುಗಳನ್ನು ಆಯೋಗದ ದೂರುಗಳು ಮತ್ತು ಸಲಹಾ ವಿಭಾಗವು ಪರಿಶೀಲಿಸುತ್ತದೆ. ಕೌಟುಂಬಿಕ ಹಿಂಸೆ, ಮಾನನಷ್ಟ, ವರದಕ್ಷಿಣೆ, ಕಿರುಕುಳ, ತೊರೆದು ಹೋಗುವಿಕೆ, ದ್ವಿಪತ್ನಿತ್ವ, ಅತ್ಯಾಚಾರ, ಎಫ್‌ಐಆರ್ ದಾಖಲಿಸಲು ನಿರಾಕರಣೆ, ಪತಿಯಿಂದ ಕ್ರೌರ್ಯ, ಲಿಂಗ ತಾರತಮ್ಯ ಮತ್ತು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳಗಳು ಮಹಿಳಾ ಆಯೋಗದ ವ್ಯಾಪ್ತಿಯಲ್ಲಿ ಬರುತ್ತವೆ.

ಮಹಿಳಾ ಹಕ್ಕುಗಳ ಉಲ್ಲಂಘನೆ ಅಥವಾ ಮಹಿಳೆಯರಿಗೆ ಕಿರುಕುಳದ ಯಾವುದೇ ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ದಾಖಲಿಸಬಹುದು. ಆದ್ರೆ ಮಹಿಳಾ ಆಯೋಗವು ಅಸ್ಪಷ್ಟ ಅಥವಾ ಇತರ ಸಮಸ್ಯೆಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಗಣಿಸುವುದಿಲ್ಲ. ದೂರಿನ ಸಂಪೂರ್ಣ ವಿವರವನ್ನು ಮಹಿಳಾ ಆಯೋಗದ ಮುಂದೆ ಬಹಿರಂಗಪಡಿಸಬೇಕು ಎಂಬುದು ಗಮನಾರ್ಹ.

ಹಂತ 5 (NWC)

ದೂರು ದಾಖಲಿಸುವುದು ಹೇಗೆ?:

ಹಂತ 1:ರಾಷ್ಟ್ರೀಯ ಮಹಿಳಾ ಆಯೋಗದ ಅಧಿಕೃತ ವೆಬ್‌ಸೈಟ್http://ncw.nic.in ಅಥವಾ http://ncwapps.nic.inತೆರೆಯಿರಿ. ಆ ಪೇಜ್​ನಲ್ಲಿ'instructions for online complaint registration'ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ 2:ನೀಡಿರುವ ಸೂಚನೆಗಳನ್ನು ಓದಿದ ನಂತರ, ಕೆಳಗೆ ನೀಡಿರುವ'click here for registration of complaint'ಎಂಬ ಆಯ್ಕೆ ಮೇಲೆ ಬಟನ್​ ಪ್ರೆಸ್​ ಮಾಡಿ..

ಹಂತ 3:ಕೆಳಗಿನ ನಮೂನೆಯಲ್ಲಿ ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ ಮತ್ತು ದೂರಿನ ವಿವರಗಳನ್ನು ನಮೂದಿಸಿ. ಯಾರ ವಿರುದ್ಧ ದೂರು ದಾಖಲಾಗುತ್ತಿದೆಯೋ ಅವರ ಬಗ್ಗೆ ವಿವರ ತಿಳಿದಿದ್ದರೆ ಅದನ್ನೂ ನೀಡಬಹುದು. ಘಟನೆಯ ಸಂಪೂರ್ಣ ವಿವರಣೆಯನ್ನು ನೀಡಲು ಅರ್ಜಿ ನಮೂನೆಯೊಂದಿಗೆ ಪ್ರತ್ಯೇಕ ಸ್ಥಳವನ್ನು ಒದಗಿಸಲಾಗಿದೆ.

ಹಂತ 4: ನಂತರ ಕ್ಯಾಪ್ಚಾ ಕೋಡ್​ ನಮೂದಿಸಿ ಮತ್ತು 'Submit' ಬಟನ್ ಕ್ಲಿಕ್ ಮಾಡಿ. ಎಲ್ಲ ವಿವರಗಳನ್ನು ನೀಡಿದ ನಂತರ ನಿಮ್ಮ ದೂರನ್ನು ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ದಾಖಲಿಸಲಾಗುತ್ತದೆ. ನಂತರ ನೀವು ರಶೀದಿ ಸಂಖ್ಯೆಯನ್ನು ಪಡೆಯುತ್ತೀರಿ. ಮಹಿಳಾ ಆಯೋಗವು ನಿಮ್ಮ ದೂರನ್ನು ಸ್ವೀಕರಿಸಿದರೆ ಹತ್ತು ದಿನಗಳ ನಂತರ ನೀವು ಫೈಲ್ ಸಂಖ್ಯೆ, ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಪಡೆಯುತ್ತೀರಿ. ಇಲ್ಲದಿದ್ದರೆ ನಿಮ್ಮ ದೂರು ನಿರಾಕರಿಸಲಾಗಿದೆ ಎಂದರ್ಥ.

ಹಂತ 5: ನಂತರ ನೀವು ಒದಗಿಸಿದ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ ದೂರಿನ ಸ್ಥಿತಿಗತಿಯನ್ನು ಪರಿಶೀಲಿಸಬಹುದಾಗಿದೆ. ದೂರಿನ ಸ್ಥಿತಿಗತಿಯನ್ನು ರಾಷ್ಟ್ರೀಯ ಮಹಿಳಾ ಆಯೋಗದ ವೆಬ್‌ಸೈಟ್, ದೂರವಾಣಿ ಕರೆ ಅಥವಾ ನೇರವಾಗಿ ಕಚೇರಿಗೆ ಭೇಟಿ ಮೂಲಕ ಪರಿಶೀಲಿಸಬಹುದು. ಇನ್ನು NWC ವೆಬ್‌ಸೈಟ್‌ನಲ್ಲಿ 'complaint status'ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿದ ಬಳಿಕ ನಿಮ್ಮ ದೂರಿನ ಸ್ಥಿತಿಗತಿಯನ್ನು ನೀವು ವೀಕ್ಷಿಸಬಹುದಾಗಿದೆ.

ಮಹಿಳಾ ಆಯೋಗದ ಜವಾಬ್ದಾರಿಗಳು..

  • ಪೊಲೀಸ್ ತನಿಖೆಯನ್ನು ಚುರುಕುಗೊಳಿಸುವುದು
  • ಕಾರ್ಯಗಳನ್ನು ಸುಗಮಗೊಳಿಸಲು ಮತ್ತು ವೇಗಗೊಳಿಸಲು ಅಧಿಕಾರಿಗಳ ಗಮನಕ್ಕೆ ತರುವುದು
  • ಕೌಟುಂಬಿಕ ವಿವಾದಗಳನ್ನು ಕೌನ್ಸೆಲಿಂಗ್ ಮತ್ತು ರಾಜಿ ಮೂಲಕ ಪರಿಹರಿಸುವುದು
  • ಮಹಿಳೆಯರಿಗೆ ಪರಿಹಾರ ಸೇರಿದಂತೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ದೂರುಗಳ ಪರಿಹಾರವನ್ನು ವೇಗಗೊಳಿಸುವುದು
  • ಮಧ್ಯಸ್ಥಿಕೆ ವಹಿಸುವುದು
  • ಲೈಂಗಿಕ ದೌರ್ಜನ್ಯದ ದೂರುಗಳ ಪ್ರಕರಣಗಳನ್ನು ತ್ವರಿತಗೊಳಿಸುವುದು ಮತ್ತು ವಿಲೇವಾರಿ ಮೇಲ್ವಿಚಾರಣೆ ಮಾಡಲು ಸಂಬಂಧಿಸಿದ ಸಂಸ್ಥೆಯನ್ನು ಕೇಳುವುದು
  • ಗಂಭೀರ ಅಪರಾಧಗಳಲ್ಲಿ, ಸ್ಥಳ ವಿಚಾರಣೆ ನಡೆಸಲು, ಸಾಕ್ಷಿಗಳನ್ನು ಪರೀಕ್ಷಿಸಲು, ಸಾಕ್ಷ್ಯಗಳನ್ನು ಸಂಗ್ರಹಿಸಲು ಮತ್ತು ಶಿಫಾರಸುಗಳೊಂದಿಗೆ ವರದಿಯನ್ನು ಸಲ್ಲಿಸಲು ತನಿಖಾ ಸಮಿತಿಯನ್ನು ರಚಿಸುವುದು
  • ಮಹಿಳೆಯರಿಗೆ ಉಚಿತ ಕಾನೂನು ನೆರವು ನೀಡುವುದು

ರಾಷ್ಟ್ರೀಯ ಮಹಿಳಾ ಆಯೋಗದ ವ್ಯಾಪ್ತಿ ಎಷ್ಟು?

  • ಅತ್ಯಾಚಾರ / ಅತ್ಯಾಚಾರ ಯತ್ನ
  • ಆಸಿಡ್ ದಾಳಿ
  • ಲೈಂಗಿಕ ದೌರ್ಜನ್ಯ
  • ಲಿಂಗ ತಾರತಮ್ಯ
  • ಹಿಂಬಾಲಿಸುವುದು/ಲೈಂಗಿಕ ನೋಟ
  • ಕಳ್ಳಸಾಗಣೆ/ಬಲವಂತದ ವೇಶ್ಯಾವಾಟಿಕೆ
  • ಮಹಿಳೆಯರ ಘನತೆಯನ್ನು ಪ್ರಶ್ನಿಸುವುದು
  • ಮಹಿಳೆಯರ ವಿರುದ್ಧದ ಸೈಬರ್ ಅಪರಾಧಗಳು
  • ಮಹಿಳೆಯರ ವಿರುದ್ಧ ಪೊಲೀಸರ ನಿರ್ಲಕ್ಷ್ಯ
  • ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ/ಸಾವು
  • ದ್ವಿಪತ್ನಿತ್ವ / ಬಹುಪತ್ನಿತ್ವ
  • ಹೆಣ್ಣು ಭ್ರೂಣ ಹತ್ಯೆ
  • ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ
  • ಮಹಿಳೆಯರಿಗೆ ಮಾತೃತ್ವ ಪ್ರಯೋಜನಗಳ ನಿರಾಕರಣೆ ಸಮಸ್ಯೆ
  • ಮಹಿಳೆಯರ ಹಕ್ಕುಗಳನ್ನು ಉಲ್ಲಂಘಿಸುವ ಸಾಂಪ್ರದಾಯಿಕ ಆಚರಣೆಗಳು
  • ವಿಚ್ಛೇದನ/ಮಕ್ಕಳ ಪಾಲನೆ

ರಾಷ್ಟ್ರೀಯ ಮಹಿಳಾ ಆಯೋಗ ಯಾವುದನ್ನು ಒಳಗೊಂಡಿಲ್ಲ?

  • ರಾಷ್ಟ್ರೀಯ ಮಹಿಳಾ ಆಯೋಗವು ಈ ಕೆಳಗಿನ ವರ್ಗಗಳ ದೂರುಗಳನ್ನು ವಜಾಗೊಳಿಸಲು ಬದ್ಧವಾಗಿದೆ
  • ಅಸ್ಪಷ್ಟವಾದ ದೂರುಗಳು
  • ನಾಗರಿಕ ವಿವಾದಗಳಿಗೆ ಸಂಬಂಧಿಸಿದ ವಿಷಯಗಳು
  • ಸೇವಾ ವಿಷಯಗಳಿಗೆ ಸಂಬಂಧಿಸಿದ ವಿಷಯಗಳು
  • ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ವಿಷಯಗಳು
  • ರಾಜ್ಯ ಆಯೋಗ ಅಥವಾ ಇತರ ಯಾವುದೇ ಆಯೋಗದ ಮುಂದೆ ಈಗಾಗಲೇ ಸಲ್ಲಿಸಲಾದ ದೂರುಗಳು
  • ಇತರ ಆಯೋಗಗಳು ಸಮರ್ಥಿಸಿದ ದೂರುಗಳು
  • ಮಹಿಳೆಯರ ಹಕ್ಕುಗಳ ಉಲ್ಲಂಘನೆಯಾಗದಿರುವ ದೂರುಗಳು

ಓದಿ:ಮಹಿಳೆಯರ ಗಮನಕ್ಕೆ; ಇವುಗಳು ನಿಮ್ಮ ಬಳಿಯಿದ್ರೆ, ನೀವು ಎಲ್ಲಿಗೆ ಹೋದರೂ ಸುರಕ್ಷಿತ! - Women Safety Gadgets

ABOUT THE AUTHOR

...view details