ಕರ್ನಾಟಕ

karnataka

ETV Bharat / technology

ಬಿಎಸ್​ಎನ್​ಎಲ್​ನಿಂದ ಗ್ರಾಹಕರಿಗೆ ಶುಭ ಸುದ್ದಿ: ಶೀಘ್ರದಲ್ಲೇ 5G ಇಂಟರ್ನೆಟ್ ಸೇವೆ ಆರಂಭ! - BSNL 5G Service - BSNL 5G SERVICE

BSNL 5G Service: BSNL ಗ್ರಾಹಕರಿಗಾಗಿ ಸಂತಸದ ಸುದ್ದಿಯೊಂದು ಹೊರ ಬಂದಿದೆ. ಆದಷ್ಟು ಬೇಗ ಬಳಕೆದಾರರು ಹೆಚ್ಚಿನ ವೇಗದ 5G ಇಂಟರ್ನೆಟ್ ಸೇವೆಯನ್ನು ಪಡೆಯಲಿದ್ದಾರೆ.

5G INTERNET SERVICE  GOOD NEWS FOR BSNL CUSTOMERS  BSNL 5G SERVICE UPDATE
ಬಿಎಸ್​ಎನ್​ಎಲ್​ (ETV Bharat)

By ETV Bharat Tech Team

Published : Sep 10, 2024, 1:50 PM IST

BSNL 5G Service:ಇದುBSNL ಬಳಕೆದಾರರಿಗೆ ಲೇಟೆಸ್ಟ್ ಅಪ್ಡೇಟ್. ಕಂಪನಿಯು ತನ್ನ 5G ಸೇವೆಗಳನ್ನು ಹೊರತರಲು ತಯಾರಿ ನಡೆಸುತ್ತಿದೆ. ಶೀಘ್ರದಲ್ಲೇ ಬಳಕೆದಾರರು ಈ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಬಿಎಸ್​ಎನ್​ಎಲ್​ ಅಧಿಕೃತವಾಗಿ ತಿಳಿಸಿದೆ.

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ಕಳೆದ ಕೆಲವು ತಿಂಗಳುಗಳಿಂದ ದೂರಸಂಪರ್ಕ ವಲಯದಲ್ಲಿ ಸುದ್ದಿ ಮಾಡುತ್ತಿದೆ. ರೀಚಾರ್ಜ್ ಯೋಜನೆಗಳಲ್ಲಿನ ಬದಲಾವಣೆಗಳಿಂದ 4G ನೆಟ್‌ವರ್ಕ್ ಸರಿಪಡಿಸುವವರೆಗೆ, ಈ ಸರ್ಕಾರಿ ಟೆಲಿಕಾಂ ಕಂಪನಿಯು ಈಗ ನಿಧಾನವಾಗಿ ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧಿಸಲು ಸಿದ್ಧವಾಗುತ್ತಿದೆ. ಬಳಕೆದಾರರಿಗೆ ಒಂದು ಪ್ರಮುಖ ಅಪ್​ಡೇಟ್​ ನೀಡಿದೆ. ಕಂಪನಿಯು ತನ್ನ 5G ಸೇವೆಗಳನ್ನು ಶೀಘ್ರದಲ್ಲೇ ಹೊರತರಲು ತಯಾರಿ ನಡೆಸುತ್ತಿದೆ.

ಜನವರಿ 2025 ರಲ್ಲಿ 5G ಸೇವೆಯ ಪ್ರಾರಂಭ:ಬಿಎಸ್‌ಎನ್‌ಎಲ್​ನ ಆಂಧ್ರ ಪ್ರದೇಶದ ಪ್ರಧಾನ ಜನರಲ್ ಮ್ಯಾನೇಜರ್ ಎಲ್.ಶ್ರೀನು ಸುದ್ದಿಗೋಷ್ಠಿಯಲ್ಲಿ ಬಿಎಸ್‌ಎನ್‌ಎಲ್ ತನ್ನ 5ಜಿ ಸೇವೆಯನ್ನು ಜನವರಿ 2025 ರಲ್ಲಿ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂದು ಘೋಷಿಸಿದ್ದಾರೆ. ಸಾಧ್ಯವಾದಷ್ಟು ಬೇಗ 5G ರೋಲ್‌ಔಟ್‌ಗೆ ಅನುಕೂಲವಾಗುವಂತೆ ತನ್ನ ಮೂಲಸೌಕರ್ಯವನ್ನು ಅಪ್​ಡೇಟ್​ ಮಾಡಲು ಕಂಪನಿಯು ಒತ್ತು ನೀಡುತ್ತಿದೆ. ಇದು ಟವರ್​ಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

4ಜಿ ಸೇವೆಯನ್ನು 5ಜಿಗೆ ಪರಿವರ್ತನೆ:BSNL 4G ಸೇವೆಯನ್ನು 5G ಗೆ ಪರಿವರ್ತಿಸುವ ಕೆಲಸ ನಡೆಯುತ್ತಿದೆ. ಇದರರ್ಥ 5G ಸೇವೆಯನ್ನು ಪ್ರಾರಂಭಿಸಲು ಹೆಚ್ಚಿನ ಹೂಡಿಕೆಯ ಅಗತ್ಯವಿರುವುದಿಲ್ಲ. BSNL ಈಗಾಗಲೇ ತನ್ನ 4G ಸೇವೆಗಳನ್ನು ಪ್ರಾರಂಭಿಸಿದ ಪ್ರದೇಶಗಳಲ್ಲಿ 5G ರೋಲ್ಔಟ್ ಪ್ರಾರಂಭವಾಗುತ್ತದೆ. ಇದರ ನಂತರ ಅಪ್​ಡೇಟ್​ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ ಎಂದು ಬಿಎಸ್​ಎನ್​ಎಲ್​ ಹೇಳಿದೆ.

ಇತ್ತೀಚೆಗೆ ಬಿಡುಗಡೆಯಾದ ವಿಡಿಯೋ: ಕಂಪನಿಯು ಯಾವ ನಗರಗಳಲ್ಲಿ 5ಜಿ ಸೇವೆಗಳನ್ನು ಮೊದಲು ಪ್ರಾರಂಭಿಸುತ್ತದೆ ಎಂದು ತಿಳಿಸಿಲ್ಲ. ಆದರೆ ಕಂಪನಿಯು ವಿಡಿಯೋವೊಂದನ್ನು ಹಂಚಿಕೊಂಡಿದೆ. ಇದರಲ್ಲಿ BSNL ಮತ್ತು MTNL ಎರಡರ ಲೋಗೋಗಳು ಕಂಡುಬಂದಿವೆ. ವಿಡಿಯೋದಲ್ಲಿ ಹೆಚ್ಚಿನ ವೇಗದ ಸಂಪರ್ಕದ ಬಗ್ಗೆ ಮಾತನಾಡಲಾಗುತ್ತಿದೆ. BSNL 5G ಸೇವೆಯನ್ನು ಆದಷ್ಟು ಬೇಗ ಪ್ರಾರಂಭಗೊಳ್ಳಲು ಗ್ರಾಹಕರು ಕಾಯುತ್ತಿದ್ದಾರೆ.

ಇದನ್ನೂ ಓದಿ:ಐಫೋನ್​ 16ಕ್ಕಿಂತ ಗೂಗಲ್​ ಪಿಕ್ಸಲ್​ 9ರ ದರವೇ ಹೆಚ್ಚು! - IPhone 16 VS Google Pixel 9

ABOUT THE AUTHOR

...view details