Best Gaming Phone Under 20000:ಬೆಸ್ಟ್ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಿಗಾಗಿ ನೀವು ಹುಡುಕುತ್ತಿದ್ರೆ ಇಲ್ಲಿ ಕೆಲ ಫೋನ್ಗಳ ಮಾಹಿತಿಗಳನ್ನು ಒದಗಿಸುವ ಪ್ರಯತ್ನ ಮಾಡಿದ್ದೇವೆ. ಈ ಸ್ಮಾರ್ಟ್ಫೋನ್ಗಳು ಕೈಗೆಟುಕುವ ದರದಲ್ಲಿ ಲಭ್ಯವಿದ್ದು, ಅದರ ವೈಶಿಷ್ಟ್ಯಗಳು ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ ನೋಡಿ..
ಮಾರುಕಟ್ಟೆಯಲ್ಲಿ ಅನೇಕ ಉತ್ತಮ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಿವೆ. ಅದರ ಬೆಲೆ ರೂ 20,000 ಕ್ಕಿಂತ ಕಡಿಮೆ. ಈ ಫೋನ್‌ಗಳಲ್ಲಿ ನೀವು ಉತ್ತಮ ಚಿಪ್‌ಸೆಟ್, ದೀರ್ಘ ಬಾಳಿಕೆಯ ಬ್ಯಾಟರಿ ಮತ್ತು ಬೆಸ್ಟ್ ಸ್ಕ್ರೀನ್ ಸೇರಿದಂತೆ ಅನೇಕ ಫೀಚರ್ಗಳನ್ನು ಒಳಗೊಂಡಿದೆ. ರೂ. 20,000 ಒಳಗಿನ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಿಗಾಗಿ, ಮೊಟೊರೊಲಾ, ಸ್ಯಾಮ್ಸಂಗ್, ಐಕ್ಯೂ, ನಥಿಂಗ್ ಮತ್ತು ರೆಡ್ಮಿ ನಂತಹ ಬ್ರ್ಯಾಂಡ್‌ಗಳು ಉತ್ತಮ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿವೆ.
Moto Edge 50 Neo:ಮೊಟೊ ಎಡ್ಜ್ 50 ನಿಯೋ ಫ್ಲಿಪ್‌ಕಾರ್ಟ್‌ನಲ್ಲಿ 21,999 ರೂ.ಗೆ ಲಭ್ಯವಿದೆ. ಬ್ಯಾಂಕ್ ಡಿಸ್ಕೌಂಟ್ನೊಂದಿಗೆ ಈ ಫೋನ್ ರೂ. 19,999 ಗೆ ಖರೀದಿಸಬಹುದು. ಇದು MediaTek Dimension 7300 ಚಿಪ್‌ಸೆಟ್‌ನ ಸಪೋರ್ಟ್ ಜೊತೆ ಬರುತ್ತದೆ. ಫೋನ್ ಮೂರು ರಿಯರ್ ಕ್ಯಾಮರಾಗಳನ್ನು ಹೊಂದಿದೆ. ಅದರಲ್ಲಿ 50MP ಮೇನ್ ಕ್ಯಾಮೆರಾ, 13MP ಅಲ್ಟ್ರಾ-ವೈಡ್ ಕ್ಯಾಮರಾ ಮತ್ತು 10MP ಟೆಲಿಫೋಟೋ ಕ್ಯಾಮೆರಾ ಸೇರಿವೆ.
Samsung Galaxy A15 5G: ಸ್ಯಾಮ್ಸಂಗ್ ಗ್ಯಾಲೆಕ್ಸಿ ಎ15 5ಜಿ ಸಹ 20,000 ರೂಪಾಯಿಗಳ ಬಜೆಟ್‌ನಲ್ಲಿ ಉತ್ತಮ ಆಯ್ಕೆಯಾಗಿದೆ. ಅಮೆಜಾನ್ನಲ್ಲಿ ಇದರ ಬೆಲೆ 14,998 ರೂ.ಗೆ ಲಭ್ಯವಿದೆ. MediaTek Dimension 6100+ ಚಿಪ್‌ಸೆಟ್ ಹೊಂದಿರುವ ಫೋನ್‌ಗಳಲ್ಲಿ ಉತ್ತಮ ಗೇಮಿಂಗ್ ಅನುಭವವನ್ನು ಕಾಣಬಹುದು. ಇದು 50MP ರಿಯರ್ ಕ್ಯಾಮೆರಾ, 5MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮರಾ ಮತ್ತು 2MP ಮ್ಯಾಕ್ರೋ ಕ್ಯಾಮರಾವನ್ನು ಹೊಂದಿದೆ.