ಕರ್ನಾಟಕ

karnataka

ETV Bharat / technology

ಜಸ್ಟ್​​ 20 ಸಾವಿರದೊಳಗೆ ಅತ್ಯುತ್ತಮ ಗೇಮಿಂಗ್​ ಸ್ಮಾರ್ಟ್​ಫೋನ್​: ಸ್ಟೈಲೀಶ್​ ಲುಕ್​, ಪವರ್​ಫುಲ್​ ಪ್ರೊಸೆಸರ್​, ಬೆಸ್ಟ್​ ಬ್ಯಾಟರಿ - BEST GAMING SMARTPHONES

Gaming Smartphones: ಇಂದಿನ ಸಮಯದಲ್ಲಿ, ಗೇಮಿಂಗ್ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. PUBG, ಕಾಲ್ ಆಫ್ ಡ್ಯೂಟಿಯಂತಹ ಹೈ-ಗ್ರಾಫಿಕ್ಸ್ ಆಟಗಳನ್ನು ಆಡಲು ಪವರ್​ಫುಲ್​ ಪ್ರೊಸೆಸರ್, ಉತ್ತಮ ಡಿಸ್​ಪ್ಲೇ ಮತ್ತು ದೀರ್ಘ ಅವಧಿಯ ಬ್ಯಾಟರಿಯ ಅಗತ್ಯವಿದೆ.

GAMING SMARTPHONES  SMARTPHONES UNDER 20 THOUSANDS  GAMING SMARTPHONES PRICE  GAMING SMARTPHONES FEATURES
ಗೇಮಿಂಗ್​ ಸ್ಮಾರ್ಟ್​ಫೋನ್ (File Photo)

By ETV Bharat Tech Team

Published : Dec 30, 2024, 9:33 AM IST

Best Gaming Smartphones:ಇಂದಿನ ಯುಗದಲ್ಲಿ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಪಬ್​ಜಿ, ಕಾಲ್ ಆಫ್ ಡ್ಯೂಟಿ ಮತ್ತು ಜೆನ್‌ಶಿನ್ ಇಂಪ್ಯಾಕ್ಟ್‌ನಂತಹ ಹೈ - ಗ್ರಾಫಿಕ್ಸ್ ಆಟಗಳನ್ನು ಆಡಲು ಪವರ್​ಫುಲ್​ ಪ್ರೊಸೆಸರ್, ಬೆಸ್ಟ್​ ಡಿಸ್​ಪ್ಲೇ ಮತ್ತು ಲಾಂಗ್​ ಟೈಂ ಬ್ಯಾಟರಿಯ ಅಗತ್ಯವಿದೆ. ನಿಮ್ಮ ಬಜೆಟ್ 20 ಸಾವಿರದವರೆಗೆ ಇದ್ದರೆ, ಮಾರುಕಟ್ಟೆಯಲ್ಲಿ ಹಲವಾರು ಉತ್ತಮ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳು ಲಭ್ಯ ಇವೆ.

iQOO Z7 Pro 5G: ಈ ಸ್ಮಾರ್ಟ್​ಫೋನ್​​​ಗೆ​ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆಯಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್ ಹೊಂದಿದೆ. ಇದರ ಹೊರತಾಗಿ ಇದು 6.78-ಇಂಚಿನ FHD+ AMOLED ಡಿಸ್​ಪ್ಲೇ ಹೊಂದಿದೆ. ಇದು 120Hz ನ ರಿಫ್ರೆಶ್ ರೇಟ್​ ಅನ್ನು ಸಪೋರ್ಟ್​ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ ಪವರ್​ಫುಲ್​ 4600mAh ಬ್ಯಾಟರಿ ಹೊಂದಿದೆ. ಇದು 66W ಸ್ಫೀಡ್​ ಚಾರ್ಜಿಂಗ್ ಅನ್ನು ಸಪೋರ್ಟ್​ ಮಾಡುತ್ತದೆ. ಇದಲ್ಲದೇ, ಇದು ಹೆಚ್ಚಿನ ಪರ್ಫಾರ್ಮೆನ್ಸ್​ ಮೋಡ್ ಮತ್ತು ಲಿಕ್ವಿಡ್​ ಕೂಲಿಂಗ್​ ಸಿಸ್ಟಮ್​ ಹೊಂದಿದೆ. ಈ ಫೋನ್ ಅದರ ಮೃದುವಾದ ಗೇಮಿಂಗ್ ಕಾರ್ಯಕ್ಷಮತೆ ಮತ್ತು ಪ್ರೀಮಿಯಂ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ನೀವು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು. ಇಲ್ಲಿ ಈ ಫೋನ್​ ಅನ್ನು ಬೆಲೆ 20,999 ರೂ.ಗೆ ಮಾರಾಟವಾಗುತ್ತಿದೆ.

Poco X5 Pro: ಈ ಸ್ಮಾರ್ಟ್ಫೋನ್ Qualcomm Snapdragon 778G ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸುತ್ತದೆ. 6.67 ಇಂಚಿನ AMOLED ಡಿಸ್‌ಪ್ಲೇಯನ್ನು ಸ್ಮಾರ್ಟ್‌ಫೋನ್‌ನಲ್ಲಿ ನೀಡಲಾಗಿದೆ. ಈ ಡಿಸ್​ಪ್ಲೇ 120Hz ನ ರಿಫ್ರೆಶ್ ರೇಟ್​ ಬೆಂಬಲಿಸುತ್ತದೆ. ಈ ಸ್ಮಾರ್ಟ್​ಫೋನ್​ 5000mAh ಬ್ಯಾಟರಿ ಹೊಂದಿದ್ದು, ಅದು 67W ಸ್ಪೀಡ್​ ಚಾರ್ಜಿಂಗ್ ಸಪೋರ್ಟ್​ ಮಾಡುತ್ತದೆ. ಗೇಮ್ ಟರ್ಬೊ ಮೋಡ್ ಇದರಲ್ಲಿ ನೀಡಲಾಗಿದ್ದು, ಈ ಫೋನ್‌ನ ಗೇಮಿಂಗ್ ಅನುಭವವು ಉತ್ತಮವಾಗಿದೆ. ಅದರ ದೊಡ್ಡ AMOLED ಡಿಸ್​ಪ್ಲೇ ಗೇಮೆ್​ಗಳನ್ನು ಆಡುವುದನ್ನು ಇನ್ನಷ್ಟು ಆಕರ್ಷಕವಾಗಿಸುತ್ತದೆ. ನೀವು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು. ಇಲ್ಲಿ ಈ ಫೋನ್​ ಬೆಲೆ 17,999 ರೂ.ಗೆ ಮಾರಾಟ ಮಾಡಲಾಗುತ್ತಿದೆ.

Realme Narzo 60 5G: ಈ ಸ್ಮಾರ್ಟ್​ಫೋನ್ MediaTek ಡೈಮೆನ್ಸಿಟಿ 6020 ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸುತ್ತದೆ. 6.43 ಇಂಚಿನ AMOLED ಡಿಸ್‌ಪ್ಲೇಯನ್ನು ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಲಾಗಿದೆ. ಈ ಡಿಸ್​ಪ್ಲೇ 900Hz ನ ರಿಫ್ರೆಶ್ ರೇಟ್​ ಸಪೋರ್ಟ್​ ಮಾಡುತ್ತದೆ. ಈ ಫೋನ್​ 5000mAh ಬ್ಯಾಟರಿ ಹೊಂದಿದ್ದು, ಅದು 33W ಸ್ಪೀಡ್​ ಚಾರ್ಜಿಂಗ್ ಕೂಡಾ ಬೆಂಬಲಿಸುತ್ತದೆ. ಗೇಮಿಂಗ್ ಮತ್ತು ಬಹುಕಾರ್ಯಕಕ್ಕೆ ಈ ಫೋನ್ ಉತ್ತಮ ಆಯ್ಕೆಯಾಗಿದೆ. ನೀವು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು. ಇಲ್ಲಿ ಈ ಫೋನಿನ ಬೆಲೆ 17,988 ರೂ. ಇದೆ.

Redmi Note 13 Pro:ಈ ಉತ್ತಮ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಪ್ರೊಸೆಸರ್, 6.67 ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಈ ಡಿಸ್​ಪ್ಲೇ 120Hz ನ ರಿಫ್ರೆಶ್ ರೇಟ್​ ಸಪೋರ್ಟ್​ ಮಾಡುತ್ತದೆ. ಇದು 5100mAh ಬ್ಯಾಟರಿಯನ್ನು ಹೊಂದಿದ್ದು, 67W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಇದು ಕೂಲಿಂಗ್ ತಂತ್ರಜ್ಞಾನ ಮತ್ತು ದೀರ್ಘ ಬ್ಯಾಟರಿ ಅವಧಿಯನ್ನು ಹೊಂದಿದೆ. ಈ ಫೋನ್ ಹೈ-ಗ್ರಾಫಿಕ್ಸ್ ಆಟಗಳನ್ನು ಸುಲಭವಾಗಿ ನಿಭಾಯಿಸುತ್ತದೆ. ನೀವು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು. ಇಲ್ಲಿ ಈ ಫೋನಿನ ಬೆಲೆ 17,898 ರೂ. ಇದೆ.

ಓದಿ:ಆಪಲ್​ಗೆ ಶಾಕ್​: ಈ ದೇಶಗಳಲ್ಲಿ ಐಫೋನ್ 14 ಸೇರಿದಂತೆ 3 ಮಾಡೆಲ್‌ಗಳ ಮಾರಾಟ ಸ್ಥಗಿತ!

ABOUT THE AUTHOR

...view details