ಕರ್ನಾಟಕ

karnataka

ETV Bharat / technology

ಜಾವಾ, ರಾಯಲ್ ಎನ್‌ಫೀಲ್ಡ್​ಗೆ ಠಕ್ಕರ್​ ಕೊಡಲು ಮಾರುಕಟ್ಟೆಗೆ ಬರ್ತಿವೆ ಬಜಾಜ್‌ ಹೊಸ ಬೈಕ್​ಗಳು! - Bajaj Auto New Bikes - BAJAJ AUTO NEW BIKES

Bajaj Auto Launches Two New Bikes: ವಾಹನಪ್ರಿಯರಿಗೆ ಸಿಹಿಸುದ್ದಿ! ಪ್ರಸಿದ್ಧ ದ್ವಿಚಕ್ರ ವಾಹನ ತಯಾರಕ ಬಜಾಜ್ ಆಟೋ ಭಾರತೀಯ ಮಾರುಕಟ್ಟೆಗೆ ಇನ್ನೂ ಎರಡು ಹೊಸ ಬೈಕ್‌ಗಳನ್ನು ಪರಿಚಯಿಸಿದೆ. ಈ ಬೈಕ್‌ಗಳ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತ ವರದಿ.

BAJAJ AUTO NEW BIKES  TRIUMPH SPEED T4 VS SPEED 400  TRIUMPH SPEED T4  TRIUMPH SPEED 400
ಬಜಾಜ್ ಕಂಪೆನಿಯಿಂದ​ ಹೊಸ ಬೈಕ್​ಗಳ ಬಿಡುಗಡೆ (Triumph Motorcycles)

By ETV Bharat Tech Team

Published : Sep 18, 2024, 9:52 AM IST

Bajaj Auto Launches Two New Bikes: ಪ್ರಮುಖ ಆಟೋಮೊಬೈಲ್ ಕಂಪನಿ ಬಜಾಜ್ ಆಟೋ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆರಡು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಬ್ರಿಟಿಷ್ ಮೋಟಾರ್ ಸೈಕಲ್ ಬ್ರ್ಯಾಂಡ್ ಟ್ರಯಂಫ್ ಜೊತೆಗೆ ಟ್ರಯಂಫ್ ಸ್ಪೀಡ್ 400 ಮತ್ತು ಸ್ಕ್ರ್ಯಾಂಬ್ಲರ್ 400X ಅನ್ನು ಬಿಡುಗಡೆ ಮಾಡಿದ್ದ ಬಜಾಜ್, ಇತ್ತೀಚೆಗೆ ಇನ್ನೆರಡು ಬೈಕ್‌ಗಳನ್ನು ಮಾರುಕಟ್ಟೆಗೆ ತಂದಿದೆ. ಟ್ರಯಂಫ್ ಅವುಗಳನ್ನು ಸ್ಪೀಡ್ T4 ಮತ್ತು ಸ್ಪೀಡ್ 400 MY25 ಎಂದು ಹೆಸರಿಸಿದೆ. ಭಾರತದಲ್ಲಿ ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗದಲ್ಲಿ ತನ್ನ ವ್ಯಾಪಾರ ವಿಸ್ತರಿಸುವ ಭಾಗವಾಗಿ ಬಜಾಜ್ ಆಟೋ ಹೊಸ ಬೈಕ್‌ಗಳನ್ನು ರಿಲೀಸ್ ಮಾಡುತ್ತಿದೆ.

ಹೊಸ ಬೈಕ್‌ಗಳನ್ನು ಪರಿಚಯಿಸಿದ ಬಜಾಜ್ (Triumph Motorcycles)

Triumph speed T4 Features:

ಎಂಜಿನ್: 400cc

ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಯುನಿಟ್​

ಪವರ್​: 7,000 rpm ನಲ್ಲಿ 30.6 bhp

ಟಾರ್ಕ್​: 5,000 rpm ನಲ್ಲಿ 36Nm

ಗರಿಷ್ಠ ವೇಗ: 135 kmph

ಎಲ್ಇಡಿ ಲೈಟಿಂಗ್​ ಸಿಸ್ಟಮ್​

ಡಿಜಿಟಲ್ ಡಿಸ್​ಪ್ಲೇ

ಬ್ಲೂಟೂತ್ ಕನೆಕ್ಟಿವಿಟಿ

ಟ್ರಾಕ್ಷನ್​ ಕಂಟ್ರೋಲ್​

ಬಣ್ಣ ಆಯ್ಕೆಗಳು: ಟ್ರಯಂಫ್ ಸ್ಪೀಡ್ T4 ಬೈಕ್ ಮಾರುಕಟ್ಟೆಯಲ್ಲಿ ಮೂರು ಬಣ್ಣಗಳಲ್ಲಿ ಲಭ್ಯವಿದೆ.

ಟ್ರಯಂಫ್ ಸ್ಪೀಡ್ T4 ಬೆಲೆ: ₹2.17 ಲಕ್ಷ (ಎಕ್ಸ್ ಶೋ ರೂಂ)

ಹೊಸ ಬೈಕ್‌ಗಳನ್ನು ಪರಿಚಯಿಸಿದ ಬಜಾಜ್ (Triumph Motorcycles)

Triumph Speed 400 MY25 Features:

ಎಂಜಿನ್:398cc

ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್

ಪವರ್​: 8,000 rpm ನಲ್ಲಿ 39 bhp

ಟಾರ್ಕ್​: 6,500 rpm ನಲ್ಲಿ 37.5 Nm

ಬಣ್ಣ ಆಯ್ಕೆಗಳು: ಟ್ರಯಂಫ್ ಸ್ಪೀಡ್ 400 MY25 ಬೈಕ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

ಡ್ಯುಯಲ್ ಎಬಿಎಸ್

ಟ್ರಯಂಫ್ ಸ್ಪೀಡ್ 400 MY25 ಬೆಲೆ: ₹2.40 ಲಕ್ಷ (ಎಕ್ಸ್ ಶೋ ರೂಂ)

ಯಾವ ಬೈಕ್​ಗಳಿಗೆ ಪೈಪೋಟಿ?:ಬಜಾಜ್-ಟ್ರಯಂಫ್ ಸಹಭಾಗಿತ್ವದಲ್ಲಿ ಬಂದಿರುವ ಈ ಎರಡು ಹೊಸ ಬೈಕ್‌ಗಳು ಜಾವಾ 42ಎಫ್‌ಜೆ, ರಾಯಲ್ ಎನ್‌ಫೀಲ್ಡ್ ಹಂಟರ್ 350 ಮತ್ತು ಹೀರೋ ಮೇವರಿಕ್ 440 ಮಾದರಿಗಳಿಗೆ ಕಠಿಣ ಪೈಪೋಟಿ ನೀಡಲಿವೆ.

ಇದನ್ನೂ ಓದಿ:ಲೈಟ್ ಕಮರ್ಷಿಯಲ್ ವಿಭಾಗಕ್ಕೆ ಲಗ್ಗೆಯಿಟ್ಟ ಮಹೀಂದ್ರಾ ವೀರೊ: ಇದರ ಬೆಲೆ ಎಷ್ಟು ಗೊತ್ತಾ!? - Mahindra Veero LCV Launched

ABOUT THE AUTHOR

...view details