Apple Self Repair programme: ಆಪಲ್ ತನ್ನ ಸೆಲ್ಫ್-ರಿಪೇರ್ ಕ್ರಾರ್ಯಕ್ರಮವನ್ನು ಇತ್ತೀಚಿನ ಸ್ಮಾರ್ಟ್ಫೋನ್ಗಳಾದ ಐಫೋನ್ 16 ಮತ್ತು ಐಫೋನ್ 16 ಪ್ರೋ ಸರಣಿಗೆ ವಿಸ್ತರಿಸಿದೆ. ಈಗಾಗಲೇ ಕಂಪನಿ ವಿವಾರವಾದ ರಿಪೇರಿ ಗೈಡ್ಲೈನ್ಸ್ಗಳ ಲಿಸ್ಟ್ ಮತ್ತು ಜೆನ್ಯೂನ್ ಸ್ಪೇರ್ಗಳ ಲಿಸ್ಟ್ ಅನ್ನು ಸೆಲ್ಫ್ ಸರ್ವೀಸ್ ರಿಪೇರ್ ಸ್ಟೋರ್ಗಳಲ್ಲಿ ಲಭ್ಯವಿದೆ. ಪ್ರಸ್ತುತ ಅಮೆರಿಕ ಮತ್ತು ಯರೋಪಿನ ಆಯ್ದ ಭಾಗಗಳಲ್ಲಿ ಮಾತ್ರ ಲಭ್ಯವಿದೆ ಕಂಪನಿ ಮಾಹಿತಿ ನೀಡಿದೆ.
ಆಪಲ್ ತನ್ನ ಎಲ್ಲ ನಾಲ್ಕು ಐಫೋನ್ 16 (ರಿವ್ಯೂವ್) ಮಾಡೆಲ್‌ಗಳ ಬಿಡಿಭಾಗಗಳನ್ನು ಬಗ್ಗೆ ಮಾಹಿತಿ ನೀಡಿದೆ. ಡಿಸ್ಪ್ಲೇ, ಬ್ಯಾಕ್ ಪ್ಯಾನೆಲ್, ಕ್ಯಾಮೆರಾ, ಬ್ಯಾಟರಿ, ಇನ್ನಿತರ ಬಿಡಿಭಾಗಗಳು ಸೇರಿದಂತೆ ರಿಪೇರಿಗೆ ಅಗತ್ಯವಿರುವ ಬದಲಿ ಯುನಿಟ್ಗಳನ್ನು ನೀಡುತ್ತದೆ.
ಇನ್ನು ಈ ಬಿಡಿಭಾಗಗಳ ಬೆಲೆ ಮಾಡೆಲ್ಗಳನ್ನು ಅವಲಂಬಿಸಿ ಬದಲಾಗುತ್ತದೆ. ಉದಾಹರಣೆಗೆ ಐಫೋನ್ 16/16 ಪ್ಲಸ್ನ ಕ್ಯಾಮರಾ ಮಾಡ್ಯೂಲ್ ಬೆಲೆ 169 ಡಾಲರ್. ಆದರೆ ಐಫೋನ್ 16 ಪ್ರೋ/ಪ್ರೋ ಮ್ಯಾಕ್ಸ್ನ ಕ್ಯಾಮರಾ ಮಾಡ್ಯೂಲ್ ಬೆಲೆ 249 ಡಾಲರ್ ಆಗಿದೆ. ಡಿಸ್ಪ್ಲೇ, ಬ್ಯಾಟರಿ ಮತ್ತು ಬ್ಯಾಕ್ ಪ್ಯಾನೆಲ್ಗೂ ಇದೇ ರೀತಿ ಅನ್ವಯವಾಗುತ್ತದೆ. ಇನ್ನು ಪ್ರೊ ಮಾಡೆಲ್‌ಗಳ ಮಾಲೀಕರು ವೆನಿಲ್ಲಾ ಐಫೋನ್ 16 ಬಳಕೆದಾರರಿಗಿಂತ ಸ್ವಲ್ಪ ಹೆಚ್ಚು ಪಾವತಿಸಬೇಕಾಗುತ್ತದೆ ಎಂದು ಹೇಳಿದೆ.
ಐಫೋನ್ 16/16 ಪ್ಲಸ್ ಬ್ಯಾಟರಿ 99 ಡಾಲರ್ ವೆಚ್ಚವಾಗುತ್ತದೆ. ಇದು ಐಫೋನ್ 15ನ ಬ್ಯಾಟರಿಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿದೆ. ಆದರೆ ಐಫೋನ್ 16 ಪ್ರೋ (ರಿವ್ಯೂವ್) ಸೀರಿಸ್ನ ಬ್ಯಾಟರಿಗಳ ಬೆಲೆ 116 ಡಾಲರ್ ಆಗಿದೆ. ಅದೇ ರೀತಿ, ಐಫೋನ್ 16 ಸೀರಿಸ್ನ 60Hz ಡಿಸ್ಪ್ಲೇ ಪ್ಯಾನೆಲ್‌ಗಳ ಬೆಲೆ 279 ಡಾಲರ್ ಆಗಿದ್ರೆ, ಐಫೋನ್ 16 ಪ್ರೋ ಸೀರಿಸ್ನ ಸ್ಕ್ರೀನ್ ಬೆಲೆ 379 ಡಾಲರ್ ಆಗಿದೆ ಎಂದು ಕಂಪನಿ ತಿಳಿಸಿದೆ.